ಸಾರಾಂಶ
ಶಿರಹಟ್ಟಿ: ಕನ್ನಡ ವಿಶ್ವದ ಎಲ್ಲ ಲಿಪಿಗಳ ರಾಣಿ.ಕನ್ನಡ ಭಾಷಾಭಿಮಾನ ಪ್ರತಿಯೊಬ್ಬ ಕನ್ನಡಿಗನೂ ಬೆಳೆಸಿಕೊಳ್ಳಬೇಕು ಎಂದು ಮುಖ್ಯೋಪಾಧ್ಯಾಯ ವೈ.ಪಿ. ಜಿಗಳೂರ ಹೇಳಿದರು.ಸ
೬೯ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಅಂತ ನಾಮಕರಣಗೊಂಡ ಸುವರ್ಣ ಮಹೋತ್ಸವ ನಿಮಿತ್ತ ಪಟ್ಟಣದ ಜಗದ್ಗುರು ಫಕ್ಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಕನ್ನಡ ಭಾಷೆಯು ಶ್ರೀಮಂತ ಭಾಷೆಯಾಗಿದ್ದು, ವಿಶ್ವ ಭಾಷೆಗಳ ರಾಣಿಯಾಗಿದೆ. ನಮ್ಮ ಮಾತೃಭಾಷೆ ಬೇರೆ ಬೇರೆ ಇದ್ದರೂ ಕನ್ನಡ ಭಾಷೆ ನಮ್ಮನ್ನು ಸಾಮಾಜಿಕವಾಗಿ ಒಗ್ಗೂಡಿಸುತ್ತದೆ. ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆಯಾಗಿದ್ದು, ಈ ಭಾಷೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತಿಗಳು ಮತ್ತು ಕವಿಗಳು ಆರ್ಥಿಕ ಮತ್ತು ಸಾಮಾಜಿಕ ಸಮಾಜನತೆಯನ್ನು ತಮ್ಮ ಸಾಹಿತ್ಯದ ಮೂಲಕ ಬಿಂಬಿಸಿದ್ದಾರೆ. ಕನ್ನಡಿಗರ ಬಾಳು ಹಸನಾಗಿರಬೇಕು, ಸುಖವಾಗಿರಬೇಕು ಮತ್ತು ಪವಿತ್ರವಾಗಿರಬೇಕು ಎಂಬುದು ನಮ್ಮ ಸಾಹಿತ್ಯದ ಉದ್ದಗಲಕ್ಕೂ ಬೆಳೆದುಕೊಂಡು ಬಂದಿದೆ. ಹಿಂದಿ ಮತ್ತು ಇಂಗ್ಲಿಷ ಭಾಷೆಗಿಂತ ಪ್ರಾಚೀನವಾದುದು ಕನ್ನಡ ಭಾಷೆ. ಕನ್ನಡದ ರತ್ನತ್ರಯರು, ಬಸವಣ್ಣ, ಶಿವಶರಣರು ದಾಸರು ಕನ್ನಡವನ್ನು ಶ್ರೀಮಂತಗೊಳಿಸಿದರು ಎಂದು ತಿಳಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ನವೀನಕುಮಾರ ಅಳವಂಡಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಪ್ರತಿಯೊಬ್ಬರೂ ಕನ್ನಡ ಭಾಷೆ ಪೂಜಿಸಬೇಕು. ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ನಮ್ಮ ಸ್ಥಳೀಯ ಸಂಸ್ಕೃತಿ, ಪರಂಪರೆ ಸೇರಿ ನಮ್ಮತನ ಮರೆಯಬಾರದು. ಕನ್ನಡ ಭಾಷೆ ಉಳಿವಿಗೆ ಮೊದಲು ಕನ್ನಡಿಗರಲ್ಲಿ ಭಾಷೆಯ ಕುರಿತು ಅಭಿಮಾನ ಬೆಳೆಯಬೇಕು ಎಂದರು.
ಕಾಲೇಜು ಪ್ರಾಚಾರ್ಯ ಡಾ. ಉಮೇಶ್ ಅರಹುಣಸಿ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ನಮ್ಮ ಉಸಿರು. ನಾವೆಲ್ಲ ಕನ್ನಡಿಗರು ಯಾವುದೇ ಭಾಷೆ ಕಲಿತರೂ ಕನ್ನಡ ಬಳಸಬೇಕು. ಜ್ಞಾನದ ದೃಷ್ಟಿಯಿಂದ ಹಲವಾರು ಭಾಷೆ ಕಲಿತರೂ ಅಡ್ಡಿಯಿಲ್ಲ, ಕನ್ನಡ ಮಾತ್ರ ಮರೆಯಬಾರದು ಹೇಳಿದರು.ಭಾರತೀಯ ಸಂಸ್ಕೃತಿಯಲ್ಲಿ ಕನ್ನಡ ಭಾಷೆಗೆ ತನ್ನದೇಯಾದ ಸ್ಥಾನಮಾನವಿದೆ. ಕನ್ನಡ ಭಾಷೆಯು ಸಾಮಾನ್ಯವಾದುದಲ್ಲ. ಅದು ಸಮೃದ್ಧವಾದ ಹೃದಯ ಶ್ರೀಮಂತಿಕೆಯಿಂದ ಕೂಡಿದ ಭಾಷೆಯಾಗಿದೆ.ಆದಿಕವಿ ಪಂದ, ಕುವೆಂಪು, ದ.ರಾ.ಬೇಂದ್ರ ಅವರಂತಹ ಅನೇಕ ಶ್ರೇಷ್ಟ ಸಾಹಿತಿಗಳನ್ನು ನೀಡಿದ ಕನ್ನಡ ಭಾಷೆ ನಮ್ಮದು ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಶರಣ ಸಾಹಿತ್ಯ ಹರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ, ಜಿಲ್ಲಾ ಮಾಧ್ಯಮಿಕ ಶಾಲಾ ನೌಕರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ, ಎಚ್.ಎಂ. ದೇವಗಿರಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಸ್.ಬಿ. ಹೊಸೂರ, ಎಚ್.ಆರ್. ಬೆನಹಾಳ, ಸತೀಶ್ ದೇಶಪಾಂಡೆ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.ಡಾ. ಶಂಕರ್ ಬಾರಕೇರ್ ಸ್ವಾಗತಿಸಿದರು. ಕೊಟ್ರಯ್ಯ ಹೊಂಬಾಳ್ಮಠ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಾಜು ನಾಯಕ್ ವಂದಿಸಿದರು.