ಕನ್ನಡ ಎಲ್ಲ ಭಾಷೆಗಳಿಗಿಂತ ಶ್ರೀಮಂತ ಭಾಷೆ: ರಂಜಾನ್‌ ದರ್ಗಾ

| Published : Nov 20 2023, 12:45 AM IST

ಕನ್ನಡ ಎಲ್ಲ ಭಾಷೆಗಳಿಗಿಂತ ಶ್ರೀಮಂತ ಭಾಷೆ: ರಂಜಾನ್‌ ದರ್ಗಾ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉಪಾಧ್ಯಕ್ಷ ನಾಗರಾಜ್ ದೊಡ್ಡಮನಿ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿಯ ಕುರಿತ ಅರಿವು ಮೂಡಿಸಲು ಈ ವೇದಿಕೆ ರಚಿಸಲಾಯಿತು. ಇದು ಸಂಸ್ಥೆ ಅಲ್ಲ. ಪ್ರಸ್ತುತ ರಾಜ್ಯದಲ್ಲಿ ದೊಡ್ಡ ಕುಟುಂಬವಾಗಿ ವೇದಿಕೆ ಬೆಳೆದು ನಿಂತಿದೆ ಎಂದು ಹೇಳಿದರು.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಎಚ್.ಕೆ. ಹಸೀನಾ ಮಾತನಾಡಿ, ಸಮಾಜದಲ್ಲಿ ಸೌಹಾರ್ದತೆಯ ಬೇರು ಸದೃಢಗೊಳಿಸಲು ಈ ಕವಿ ಸಮ್ಮಿಲನ ಆಯೋಜಿಸಲಾಗಿದೆ. ಬಸವಣ್ಣ, ಕನಕದಾಸ ಸೇರಿದಂತೆ ಅನೇಕ ಮಹನಿಯರ ಆದರ್ಶದ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡ ಭಾಷೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಕನ್ನಡ ಎಲ್ಲ ಭಾಷೆಗಿಂತ ಶ್ರೀಮಂತವಾಗಿ ಬೆಳೆದು ನಿಂತಿದೆ. ಅದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ಸಾಹಿತಿ ರಂಜಾನ್ ದರ್ಗಾ ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಭಾನುವಾರ ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ಮಟ್ಟದ ಕರುನಾಡು ಸಾಮರಸ್ಯ ಕಾವ್ಯ ಸಮ್ಮಿಲನದ ಪಂಚ ಭಾಷಾ ಕವಿಗೋಷ್ಟಿ ಉದ್ಘಾಟಿಸಿ ಅವರು ಮಾತನಾಡಿ, ಭಾಷೆಯೆಂಬುದು ನಮ್ಮ ಭಾವನೆಯನ್ನು ವ್ಯಕ್ತಪಡಿಸುವ ಸಾಧನವಾಗಿದ್ದು, ಕವಿ ಭಾಷೆಯನ್ನು ಮೀರಿ ಬೆಳೆಯಬೇಕು ಎಂದರು.ಕಾವ್ಯದ ಮೂಲಕ ಮಾನವ ಸಂಘಟನೆ ಸಾಧ್ಯ. ಯಾವುದೇ ಕಾವ್ಯ ಒಂಟಿತನದಿಂದ ಬೆಳೆಯಬಾರದು. ನಿಸರ್ಗದ ಜೊತೆಗೆ ಕವಿ ಮನಸ್ಸು ಅರಳಬೇಕು. ನಮ್ಮ ಸಂಸ್ಕೃತಿಯ ಬೇರುಗಳ ಬಗ್ಗೆ ಅರಿವು ನಮಗಿಲ್ಲ. ಉಪಭಾಷೆಗಳನ್ನ ಮರೆತಿದ್ದೇವೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಭಾವ ಮೂಡಲು ಈ ರೀತಿಯ ಕಾರ್ಯಕ್ರಮಗಳು ಕೈಗನ್ನಡಿ ಎಂದು ಹೇಳಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉಪಾಧ್ಯಕ್ಷ ನಾಗರಾಜ್ ದೊಡ್ಡಮನಿ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿಯ ಕುರಿತ ಅರಿವು ಮೂಡಿಸಲು ಈ ವೇದಿಕೆ ರಚಿಸಲಾಯಿತು. ಇದು ಸಂಸ್ಥೆ ಅಲ್ಲ. ಪ್ರಸ್ತುತ ರಾಜ್ಯದಲ್ಲಿ ದೊಡ್ಡ ಕುಟುಂಬವಾಗಿ ವೇದಿಕೆ ಬೆಳೆದು ನಿಂತಿದೆ ಎಂದು ಹೇಳಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಎಚ್.ಕೆ. ಹಸೀನಾ ಮಾತನಾಡಿ, ಸಮಾಜದಲ್ಲಿ ಸೌಹಾರ್ದತೆಯ ಬೇರು ಸದೃಢಗೊಳಿಸಲು ಈ ಕವಿ ಸಮ್ಮಿಲನ ಆಯೋಜಿಸಲಾಗಿದೆ. ಬಸವಣ್ಣ, ಕನಕದಾಸ ಸೇರಿದಂತೆ ಅನೇಕ ಮಹನಿಯರ ಆದರ್ಶದ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.

ಕನ್ನಡ, ಕೊಡವ, ಬ್ಯಾರಿ, ತುಳು, ಕೊಂಕಣಿ ಭಾಷೆಯ ತಲಾ ಐದು ಜನ ಕವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಕೋಶಾಧ್ಯಕ್ಷ ಎಚ್.ಎಸ್. ಬಸವರಾಜು, ಲತಾಮಣಿ ಎಂ.ಕೆ. ತುರುವೇಕೆರೆ, ಸಾಹಿತಿಗಳಾದ ಸಿದ್ಧರಾಮ ಹೊನ್ಕರ್, ಬಿ.ಎಂ.ಬಶೀರ್, ಉಳುವಂಗಡ ಕಾವೇರಿ ಉದಯ, ಪರಿಮಳ ಮಹೇಶ್ ರಾವ್, ನಾಗೇಶ್ ಮ. ಅಣ್ವೇಕರ್, ಸಂತೆಬೆನ್ನೂರು ಫೈಜ್ನಟ್ರಾಜ್ ಇದ್ದರು.

- - - -19ಎಸ್‌ಎಂಜಿಕೆಪಿ04:

ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಭಾನುವಾರ ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ಮಟ್ಟದ ಕರುನಾಡು ಸಾಮರಸ್ಯ ಕಾವ್ಯ ಸಮ್ಮಿಲನದ ಪಂಚ ಭಾಷಾ ಕವಿಗೋಷ್ಟಿಯನ್ನು ಸಾಹಿತಿ ರಂಜಾನ್ ದರ್ಗಾ ಉದ್ಘಾಟಿಸಿದರು.