ಕನ್ನಡ ಭಾಷೆಯು ಪ್ರಪಂಚದಲ್ಲಿಯೇ ಅತೀ ಶ್ರೀಮಂತ ಭಾಷೆ: ಜುಬಿನ್‌ ಮೊಹಪಾತ್ರ

| Published : Nov 09 2024, 01:07 AM IST

ಕನ್ನಡ ಭಾಷೆಯು ಪ್ರಪಂಚದಲ್ಲಿಯೇ ಅತೀ ಶ್ರೀಮಂತ ಭಾಷೆ: ಜುಬಿನ್‌ ಮೊಹಪಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ರಾಜ್ಯದ ೨೦ ಜಿಲ್ಲೆಗಳಲ್ಲಿ ಸಂಚರಿಸಿ ಇದೀಗ ಪುತ್ತೂರು ತಲುಪಿದೆ. ಕನ್ನಡ ನಾಡು ನುಡಿ ರಕ್ಷಿಸುವ ಹಿನ್ನೆಲೆಯಲ್ಲಿ ಪ್ರತಿ ತಾಲೂಕುಗಳಿಗೆ ಈ ರಥ ಸಂಚರಿಸಲಿದೆ. ಶನಿವಾರ ಬೆಳಗ್ಗೆ ಬೆಳ್ತಂಗಡಿ, ಸಂಜೆ ಸುಳ್ಯ, ಬಳಿಕ ಕೊಡಗು ಪ್ರವೇಶಿಸಲಿದೆ ಎಂದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಕನ್ನಡ ಭಾಷೆಗೆ ೩ ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡ ಭಾಷೆಯು ಪ್ರಪಂಚದಲ್ಲಿಯೇ ಅತೀ ಶ್ರೀಮಂತ ಭಾಷೆಯಾಗಿದೆ. ಕನ್ನಡದ ಹಬ್ಬ ಅಥವಾ ಆಚರಣೆಯಿಂದ ಭಾಷೆಯ ಶ್ರೀಮಂತಿಕೆ ಮತ್ತು ಸಂಪ್ರದಾಯವು ಮುಂದಿನ ಪೀಳಿಗೆಗೆ ತಲುಪಲು ಸಹಕಾರಿಯಾಗುತ್ತದೆ ಎಂದು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.

ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆಯುವ ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ಭುವನೇಶ್ವರಿಯ ರಥವು ಶುಕ್ರವಾರ ಮಧ್ಯಾಹ್ನ ಪುತ್ತೂರಿಗೆ ಆಗಮಿಸಿದ್ದು, ಇಲ್ಲಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಕನ್ನಡ ಭುವನೇಶ್ವರಿಯ ಮೂರ್ತಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಕ.ಸಾ.ಪ ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್ ಮಾತನಾಡಿ ಕನ್ನಡ ಜ್ಯೋತಿ ಹೊತ್ತ ರಥವು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಿಂದ ಹೊರಟಿದ್ದು, ಈಗಾಗಲೇ ರಾಜ್ಯದ ೨೦ ಜಿಲ್ಲೆಗಳಲ್ಲಿ ಸಂಚರಿಸಿ ಇದೀಗ ಪುತ್ತೂರು ತಲುಪಿದೆ. ಕನ್ನಡ ನಾಡು ನುಡಿ ರಕ್ಷಿಸುವ ಹಿನ್ನೆಲೆಯಲ್ಲಿ ಪ್ರತಿ ತಾಲೂಕುಗಳಿಗೆ ಈ ರಥ ಸಂಚರಿಸಲಿದೆ. ಶನಿವಾರ ಬೆಳಗ್ಗೆ ಬೆಳ್ತಂಗಡಿ, ಸಂಜೆ ಸುಳ್ಯ, ಬಳಿಕ ಕೊಡಗು ಪ್ರವೇಶಿಸಲಿದೆ ಎಂದರು.

ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಪುತ್ತೂರು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಪೌರಾಯುಕ್ತ ಮಧು ಎಸ್. ಮನೋಹರ್, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಬಿ. ಐತ್ತಪ್ಪ ನಾಯ್ಕ್, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಿಮ್ಮಪ್ಪ ಪೂಜಾರಿ, ಮಹಮ್ಮದ್ ಬಡಗನ್ನೂರು, ರವಿಪ್ರಸಾದ್ ಶೆಟ್ಟಿ, ಸುಂದರ ನಾಯ್ಕ್, ಸುಬ್ಬಪ್ಪ ಕೈಕಂಬ, ಹರಿಣಾಕ್ಷಿ ಕೇವಳ, ಕೃಷ್ಣಪ್ರಸಾದ್ ಆಳ್ವ, ಎಂ.ಜಿ. ರಫೀಕ್, ರಝಾಕ್ ಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿ, ವಂದಿಸಿದರು.