ನವಲಿಗೆ ಆಗಮಿಸಿದ ಕನ್ನಡಜ್ಯೋತಿ ರಥಯಾತ್ರೆ

| Published : Dec 07 2023, 01:15 AM IST

ಸಾರಾಂಶ

ಕರ್ನಾಟಕ ಸಂಭ್ರಮ 50 ಕನ್ನಡ ಜ್ಯೋತಿ ರಥಯಾತ್ರೆಯು ನವಲಿ ಗ್ರಾಮದ ಬುದ್ಧ ಸರ್ಕಲ್ ಹತ್ತಿರ ಆಗಮಿಸಿದ ಹಿನ್ನೆಲೆಯಲ್ಲಿ ತಾಪಂ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ರಥಯಾತ್ರೆಯಲ್ಲಿರುವ ನಾಡದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಮೂಲಕ ಕನ್ನಡಜ್ಯೋತಿ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.ನಾಡು, ನುಡಿ, ಸಾಹಿತ್ಯ ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕರ್ನಾಟಕ ಸಂಭ್ರಮ-50ರ ಹೆಸರಾಯಿತು ಕರ್ನಾಟಕ ಉಸಿಗಾಗಲಿ ಕನ್ನಡ ಎಂಬ ಧ್ಯೇಯವಾಕ್ಯದೊಂದಿಗೆ ವರ್ಷವಿಡೀ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕರ್ನಾಟಕದ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದರು.

ಕನ್ನಡಪ್ರಭವಾರ್ತೆ ನವಲಿ

ಕರ್ನಾಟಕ ಸಂಭ್ರಮ 50 ಕನ್ನಡ ಜ್ಯೋತಿ ರಥಯಾತ್ರೆಯು ನವಲಿ ಗ್ರಾಮದ ಬುದ್ಧ ಸರ್ಕಲ್ ಹತ್ತಿರ ಆಗಮಿಸಿದ ಹಿನ್ನೆಲೆಯಲ್ಲಿ ತಾಪಂ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ರಥಯಾತ್ರೆಯಲ್ಲಿರುವ ನಾಡದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಮೂಲಕ ಕನ್ನಡಜ್ಯೋತಿ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ಕನಕಗಿರಿ ತಾಪಂ ಇಒ ಚಂದ್ರಶೇಖರ ಕಂದಕೂರು ಮಾತನಾಡಿದರು.ನಾಡು, ನುಡಿ, ಸಾಹಿತ್ಯ ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕರ್ನಾಟಕ ಸಂಭ್ರಮ-50ರ ಹೆಸರಾಯಿತು ಕರ್ನಾಟಕ ಉಸಿಗಾಗಲಿ ಕನ್ನಡ ಎಂಬ ಧ್ಯೇಯವಾಕ್ಯದೊಂದಿಗೆ ವರ್ಷವಿಡೀ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕರ್ನಾಟಕದ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದರು.ಸರ್ಕಾರಿ ಶಾಲಾ ಮಕ್ಕಳು ಕನ್ನಡ ನಾಡು ನುಡಿಯ ಬಗ್ಗೆ ಜನ ಜಾಗೃತಿ ಮೂಡಿಸಿದ ಮಹನೀಯರ ವೇಷ ಭೂಷಣಗಳನ್ನು ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡರು. ಜಾನಪದ ಕಲಾ ತಂಡಗಳಿಂದ ಕರಡಿ ಮಜಲು, ಶಾಲಾ ಮಕ್ಕಳಿಂದ ಜಾನಪದ ನೃತ್ಯ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಾಯಿತು.ಈ ಸಂದರ್ಭದಲ್ಲಿ ಕನಕಗಿರಿ ತಾಲೂಕು ದಂಡಾಧಿಕಾರಿ ವಿಶ್ವನಾಥ ಮುರಡಿ, ನವಲಿ ನಾಡಕಾರ್ಯಲಯ ಉಪತಹಸೀಲ್ದಾರ್‌ ಪ್ರಕಾಶ ಸವಡಿ, ಕಂದಾಯ ನಿರೀಕ್ಷಕ ಹನುಮಂತಪ್ಪ, ಗ್ರಾಮ ಆಡಳಿತ ಅಧಿಕಾರಿ ಮೆಹಬೂಬ ಸಾಹುಕಾರ, ಚನ್ನಪ್ಪ, ಗ್ರಾಪಂ ಅಧ್ಯಕ್ಷೆ ಮಹಾದೇವಮ್ಮ, ಪಿಡಿಒ ವೀರಣ್ಣ ನೇಕ್ಕ್ರಳ್ಳಿ, ಉಪಾಧ್ಯಕ್ಷ ನಾಗರಾಜ್ ತಳವಾರ, ಮಾಜಿ ಗ್ರಾಪಂ ಅಧ್ಯಕ್ಷ ಜಡಿಯಪ್ಪ ಮುಕ್ಕಂದಿ, ಕಸಾಪ ಹೋಬಳಿ ಅಧ್ಯಕ್ಷ ವಿರುಪಣ್ಣ ಕಲ್ಲೂರು, ಸಿದ್ಧನಗೌಡ ಮಾಲಿಪಾಟೀಲ, ಹನುಮಂತಪ್ಪ ಕಲ್ಲೂರು, ರಂಗಭೂಮಿ ಕಲಾವಿದ ಪ್ಯಾಟೇಪ್ಪ ನಾಯಕ, ಲಿಂಗರಾಜ್ ಹೂಗಾರ, ಲಿಂಗಪ್ಪ ದೇವರಗುಡಿ, ಪಂಚಯ್ಯ ಸ್ವಾಮಿ, ನೀಲಪ್ಪ ನಾಯ್ಕ್, ಮರಿರಾಜ್ ಭಜಂತ್ರಿ, ನಿಂಗಪ್ಪ ನಾಯಕ, ಜಡಿಯಪ್ಪ ಭೋವಿ ಇದ್ದರು.ಸರ್ಕಾರಿ, ಖಾಸಗಿ ಶಾಲೆ ಸೇರಿದಂತೆ 10ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.