ಕನ್ನಡದ ಕುಲ ಗುರು ಡಾ.ಸಿದ್ದಲಿಂಗ ಶ್ರೀ

| Published : Oct 27 2024, 02:27 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕನ್ನಡದ ಕುಲ ಗುರುಗಳು, ಕೋಮು ಸೌಹಾದ೯ತೆಯ ಹರಿಕಾರರು ತೃತೀಯ ಅಲ್ಲಮ ಪ್ರಭುಗಳು ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಿಂ.ಡಾ.ತೋಂಟದ ಸಿದ್ದಲಿಂಗ ಶ್ರೀಗಳ 6ನೇ ಪುಣ್ಯ ಸ್ಮರಣೋತ್ಸವದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ನಡದ ಕುಲ ಗುರುಗಳು, ಕೋಮು ಸೌಹಾದ೯ತೆಯ ಹರಿಕಾರರು ತೃತೀಯ ಅಲ್ಲಮ ಪ್ರಭುಗಳು ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಿಂ.ಡಾ.ತೋಂಟದ ಸಿದ್ದಲಿಂಗ ಶ್ರೀಗಳ 6ನೇ ಪುಣ್ಯ ಸ್ಮರಣೋತ್ಸವದಲ್ಲಿ ಮಾತನಾಡಿದರು. ಸವ೯ಧಮ೯ ಸಮನ್ವಯತಯ ಸೂತ್ರ ಅಳವಡಿಸಿಕೊಂಡದ್ದ ತೋಂಟದ ಶ್ರೀಗಳು ದೇಶದಲ್ಲಿ ಸಹೋದರತೆಯ ಪವಿತ್ರ ಬಾಂಧವ್ಯ ಬೆಸೆಯುವ ಕಾಯಕದಲ್ಲಿ ತೊಡಗಿಸಿಕೊಡು ಮಾನವೀಯತೆ ಮೌಲ್ಯಕ್ಕೆ ಮೆರಗು ನೀಡಿದ್ದರು ಎಂದರು.

ಬಂಜಾರ ಸಂಸ್ಕೃತಿ ಮತ್ತು ಭಾಷೆ ಆಕಾಡೆಮಿ ಸದಸ್ಯೆ ಡಾ.ಸುರೇಖಾ ರಾಠೋಡ ಮಾತನಾಡಿ, ತೋಂಟದ ಸಿದ್ದಲಿಂಗ ಸ್ವಾಮಿಜಿಯವರ ಜನ್ಮ ದಿನವನ್ನು ಭಾವೈಕ್ಯತೆಯ ದಿನಾಚರಣೆಯನ್ನಾಗಿ ಆಚರಿಸುತ್ತಿರುವದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.ಡಯಟ್‌ ಕಾಲೇಜಿನ ಉಪನ್ಯಾಸಕ ಪ್ರಮೋದಕುಮಾರ ಮಠಪತಿ ಮಾತನಾಡಿ, ಬಸವಣ್ಣನವರ ಆಶಯಗಳನ್ನು ತೋಂಟದ ಸಿದ್ದಲಿಂಗ ಶ್ರೀಗಳು ತಮ್ಮ ಸತತ ಪರಿಶ್ರಮದಿಂದ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಆಚರಣೆ ತಂದ ಶ್ರೇಷ್ಠ ತಪಸ್ವಿಗಳು. ಪರಿಸರ ಸಂರಕ್ಷಣೆಗಾಗಿ ಕಪ್ಪತಗುಡ್ಡ ಉಳಿವಿಗಾಗಿ ಜಾಗೃತಿ ಮೂಡಿಸಿ ಸರ್ಕಾರವನ್ನು ಎಚ್ಚರಿಸಿದ ಪುಣ್ಯಾತ್ಮ ಎಂದು ಸ್ಮರಿಸಿದರು. ಗೌರವ ಕಾರ್ಯದರ್ಶಿ ಸುರೇಶ ಜತ್ತಿ, ತಿಕೋಟಾ ತಾಲೂಕ ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ, ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ, ಈಶ್ವರ ಪೂಜಾರಿ, ಅಣ್ಣುಗೌಡ ಸಾವಳಗಿ, ಬಿಂದುರಾವ ನಾಡಗೌಡ, ಪರಗೊಂಡ ಬಿರಾದಾರ, ಮಹಾದೇವ ವಾಲಿಕಾರ, ಈರಣ್ಣ ಮಾಮನೆ, ಶಿವಾಜಿ ಮೊರೆ, ಎಂ.ಎಸ್.ತಿಗಣಿಬಿದರಿ, ಗಂಗಮ್ಮ ರಡ್ಡಿ, ಲಕ್ಷ್ಮಿ ಬಿರಾದಾರ, ರಾಹುಲ ಚವ್ವಾಣ ಮುಂತಾದವರು ಉಪಸ್ಥಿತರಿದ್ದರು.