ಗಾದೆ, ಒಗಟಿನಿಂದ ಕನ್ನಡ ಭಾಷೆ ಸಮೃದ್ಧ: ಭಾಗ್ಯ ನಂಜುಂಡಸ್ವಾಮಿ

| Published : Oct 25 2024, 12:57 AM IST

ಗಾದೆ, ಒಗಟಿನಿಂದ ಕನ್ನಡ ಭಾಷೆ ಸಮೃದ್ಧ: ಭಾಗ್ಯ ನಂಜುಂಡಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಗಾದೆ, ಒಗಟುಗಳಿಂದ ಕನ್ನಡ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ತಿಳಿಸಿದರು.

ಕಸಾಪ - ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಜಾನಪದ ರಸಪ್ರಶ್ನೆ ಸ್ಪರ್ಧೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಗಾದೆ, ಒಗಟುಗಳಿಂದ ಕನ್ನಡ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ತಿಳಿಸಿದರು.

ಗುರುವಾರ ಸಿಂಸೆಯ ವಿಶ್ವ ಕರ್ಮ ಸಮುದಾಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಜಾನಪದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್‌ ಆಲದಮರದಂತೆ ಬೆಳೆದು ನಿಂತಿದ್ದು ಇದಕ್ಕೆ ಜಾನಪದವೂ ಸೇರಿದೆ. ಜಾನಪದ ಬಾಯಿಂದ ಬಾಯಿಗೆ ಹರಡುವ ಕಲೆಯಾಗಿದೆ. ಹಿಂದೆ ಪೂರ್ವಿಕರು ತಮ್ಮ ಮಾತು ಗಳಲ್ಲಿ ಗಾದೆ ಬಳಸುತ್ತಿದ್ದರು.ಈಗ ಆಧುನಿಕ ಕಾಲ ಘಟ್ಟದಲ್ಲಿ ಗಾದೆ, ಒಗಟು ಮರೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್‌ ಮಾತನಾಡಿ, ಗ್ರಾಮೀಣ ಸೊಗಡು ಇರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಟಿವಿ ಮೊಬೈಲ್‌ ಬಂದ ನಂತರ ಜನರು ಪೇಸ್‌ ಬುಕ್, ವಾಟ್ಸಾಪ್‌ ನಲ್ಲಿ ಮುಳುಗಿ ಹೋಗಿದ್ದರಿಂದ ಜಾನಪದ ಮರೆ ಯಾಗುತ್ತಿದೆ.ಕನ್ನಡ ಸಾಹಿತ್ಯ ಪರಿಷತ್‌ ಕನ್ನಡ ಭಾಷೆ ಉಳಿಸುವ ಜೊತೆಗೆ ಜಾನಪದ, ತತ್ವ ಪದ ಸಹ ಉಳಿಸಲು ಶ್ರಮಿಸುತ್ತಿದೆ. ಕನ್ನಡ ರಾಜ್ಯೋತ್ಸವದಲ್ಲಿ ಪ್ರತಿಯೊಬ್ಬ ಕನ್ನಡಿಗರು ಪಾಲ್ಗೊಂಡು ಕನ್ನಡ ರಥದ ತೇರು ಎಳೆಯಬೇಕು. ಇಂದು ನಡೆಯುವ ಒಗಟು, ಗಾದೆಗಳ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್ ಮಾತನಾಡಿ, ಹಿಂದೆ ಗ್ರಾಮೀಣ ಭಾಗದಲ್ಲಿ ಜಾನಪದ ಶೈಲಿ ಗಾದೆ, ಒಗಟುಗಳ ಬಗ್ಗೆ ಮಾತನಾಡುತ್ತಿದ್ದರು. ಬತ್ತದ ನಾಟೀ ಮಾಡುವ ಸಮಯದಲ್ಲಿ ಜಾನಪದ ಶೈಲಿಯ ನೆಟ್ಟಿ ಹಾಡನ್ನು ಹಾಡುತ್ತಿದ್ದರು. ಆ ಕಲೆಗಳನ್ನು ಉಳಿಸಿ ಬೆಳೆಸುವ ದೃಷ್ಠಿಯಿಂದ ಇಂದು ಗಾದೆ, ಒಗಟುಗಳನ್ನು ಬಿಡಿಸುವ ಸ್ಪರ್ಧೆ ಹಮ್ಮಿಕೊಂಡಿದ್ದೇವೆ ಎಂದರು. ತಾಲೂಕು ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ನಿಯೋಜಿತ ಅಧ್ಯಕ್ಷೆ ಜಯಂತಿ ರಮೇಶ್‌ ಮಾತನಾಡಿ, ಹಿಂದೆ ಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಜಾನಪದ ನೃತ್ಯ, ಜಾನಪದ ಹಾಡುಗಳ ಸ್ಪರ್ಧೆ ಇರುತ್ತಿತ್ತು. ಈಗ ಅದನ್ನು ತೆಗೆಯಲಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ ಜಾನಪದಕ್ಕೆ ಸಂಬಂಧಪಟ್ಟ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಕನ್ನಡ ಭಾಷೆ ಉಳಿಸುವ ಪ್ರಯತ್ನ ಮಾಡುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್‌ ಸಾರ್ವಜನಿಕರಿಗಾಗಿ ಗಾದೆ, ಒಗಟು ಬಿಡಿಸುವ ಸ್ಪರ್ಧೆ ನಡೆಸಿಕೊಟ್ಟರು. ವಿಜೇತರಿಗೆ ಬಹುಮಾನ ನೀಡಲಾಯಿತು.

ವಿಶ್ವ ಕರ್ಮ ಬ್ರಾಹ್ಮಣ ಸೇವಾ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಕೃಷ್ಣಯ್ಯ ಆಚಾರ್‌ ಉದ್ಘಾಟಿಸಿದರು. ಅತಿಥಿಗಳಾಗಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀ ಹರ್ಷ, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ವಸಂತಿ, ಭಾನುಮತಿ , ಸುಜಾತ, ಇದ್ದರು.