ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕನ್ನಡ ಭಾಷೆ ನಮ್ಮೆಲ್ಲರ ಬದುಕನ್ನು ರೂಪಿಸುತ್ತದೆ. ಬಹುತೇಕರು ಕನ್ನಡ ಅನ್ನದ ಭಾಷೆಯಂದು ನಂಬಿ ಬದುಕುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಚಾಣಕ್ಯ ಕರಿಯರ್ ಆಕಾಡೆಮಿ ಸಂಸ್ಥಾಪಕ ಅಧ್ಯಕ್ಷ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರಾದ ಎನ್.ಎಂ.ಬಿರಾದಾರ ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆಶ್ರಯದಲ್ಲಿ ಕನ್ನಡ ನಾಡು ನುಡಿ ಹಾಗೂ ಸಾಂಸ್ಕೃತಿಕ ವೈಭವ ಕುರಿತು ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು-ನುಡಿಯ ಏಳ್ಗೆಗೆ ಶ್ರಮಿಸುವುದು ಒಂದು ಪುಣ್ಯದ ಕಾರ್ಯ. ಕನ್ನಡ ನಾಡು, ನುಡಿ ಸೇವೆಗಾಗಿ ನಮ್ಮ ಜೀವನ ಮುಡುಪಾಗಿರಿಸಿಕೊಳ್ಳಬೇಕು ಎಂದರು.ಪ್ರಾಚಾರ್ಯ ಡಾ.ಆರ್.ಎಸ್.ಕಲ್ಲೂರಮಠ ಮಾತನಾಡಿ, ಕನ್ನಡ ಪ್ರಾಚೀನ ಕಾಲದ ಇತಿಹಾಸ ಹೊಂದಿದೆ. ಶಾತವಾಹನರು, ಕದಂಬರು, ರಾಷ್ಟ್ರಕೂಟರು, ಗಂಗರು, ಪಲ್ಲವರು ಕನ್ನಡ ಭಾಷೆಯನ್ನು ಅಳವಡಿಸಿಕೊಂಡು ಉತ್ತಮ ಸ್ಥಿತಿಗೆ ತಲುಪಿಸಿದರು. ಕನ್ನಡ ಭಾಷೆ ನಮ್ಮೆಲ್ಲರ ಉಸಿರು ಹಾಗೂ ಬದುಕು ಎಂದು ತಿಳಿಸಿದರು.ಕನ್ನಡ ಪ್ರಾಧ್ಯಾಪಕಿ ಪ್ರೊ.ಲಕ್ಷ್ಮೀ ಮೊರೆ ಪ್ರಾಸ್ತಾವಿಕ ಮಾತನಾಡಿ, ಕನ್ನಡ ಶ್ರೀಮಂತ ಭಾಷೆ. ಆಡಳಿತ ಭಾಷೆ ಕನ್ನಡ ನಮ್ಮೆಲ್ಲರ ಗುರಿ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಭಾವಂತರಿಗೆ ಸ್ಫೂರ್ತಿ ನೀಡುತ್ತೀದೆ. 12ನೇ ಶತಮಾನದ ಪೂಜ್ಯ ಶರಣರು ವಚನ ಸಾಹಿತ್ಯ ಹೆಮ್ಮರವಾಗಿ ಬೆಳೆಸಿದ್ದಾರೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ರಂಗಮಂದಿರದಲ್ಲಿ ಜರುಗಿದ ಜಿಲ್ಲಾಮಟ್ಟದ ನೃತ್ಯ ತಂಡ ಪ್ರದಶ೯ನದಲ್ಲಿ ಗೆಲವು ಸಾಧಿಸಿದವರಿಗೆ ಬಹುಮಾನ ನೀಡಲಾಯಿತು. ಸ್ವಯಂಭೋ ಆರ್ಟ್ ಶಾಲೆ, ಸ್ವಸ್ತಿ ಡಾನ್ಸ್ ಪಿಟ್ನೆಸ್ ಸ್ಟುಡಿಯೋ, ನಾಟ್ಯಕಲಾ ಡಾನ್ಸ್ ಅಕಾಡೆಮಿ, ರತ್ನಮಾಲಾ ಡಾನ್ಸ್ ಆಕಾಡೆಮಿ, ಇಕ್ರಾ ಉದು೯ ಶಾಲೆ, ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ವಿಜಯಪುರ ಸರ್ಕಾರಿ ಪ್ರಥಮ ದಜೆ೯ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಹಾಗೂ ಅದರ ಇತಿಹಾಸ ಕುರಿತು ನಿಬಂಧ ಸ್ಪಧೆ೯ಯಲ್ಲಿ ವಿಜೇತರಾದ ಅಲ್ಲಮಾ ಮಳ್ಳಿ, ಅಕ್ಷತಾ ದೇವರ ಹಾಗೂ ಸುಧಾ ಸಮಗೊಂಡ ಅವರಿಗೆ ಪಾರಿತೋಷಕ ವಿತರಿಸಲಾಯಿತು.ಪ್ರೊ.ಬಿ.ಎಂ.ಆಜೂರ, ಪ್ರೊ.ಸಿದ್ದಣ್ಣ ಸಾತಲಗಾಂವ, ಡಾ.ಚಿದಾನಂದ ಆಲೂರ, ಪ್ರೊ.ಎಂ.ಆರ್.ಕೆಂಬಾವಿ, ಪ್ರೊ.ಎಂ.ಆರ್.ಜೋಶಿ, ಪ್ರೊ.ರುದ್ರಯ್ಯ ಹಿರೇಮಠ, ವಿಶಾಕಾ ಹಲವಾಯಿ ಪಾಲ್ಗೊಂಡಿದ್ದರು. ಎಸ್.ಎಂ.ಬಿರಾದಾರ, ವಿಶ್ರಾಂತ ಡಿವೈಎಸ್ಪಿ ಬಸವರಾಜ ಚೌಕಿಮಠ, ಬಿ.ಎಂ.ಆಜೂರ, ಸಿದ್ದಣ್ಣ ಸಾತಲಗಾಂವ, ಕಮಲಾ ಮುರಾಳ, ವಿಜಯಕುಮಾರ ಘಾಟಗೆ, ಲಕ್ಷ್ಮೀ ಅಪರಾಧ ಹಾಗೂ ಅಂಜಲಿ ಬಡಿಗೇರ ಪ್ರಾರ್ಥಿಸಿದರು. ರಾಜಶೇಖರ ಬೆನಕನಹಳ್ಳಿ ಸ್ವಾಗತಿಸಿದರು. ಪ್ರೊ.ಪಿ.ಬಿ.ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯಾ ಉಮದಿ ವಂದಿಸಿದರು.ಕನ್ನಡ ಭಾಷೆ ನಮ್ಮೆಲ್ಲರ ಬದುಕನ್ನು ರೂಪಿಸುತ್ತದೆ. ಬಹುತೇಕರು ಕನ್ನಡ ಅನ್ನದ ಭಾಷೆಯಂದು ನಂಬಿ ಬದುಕುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಕನ್ನಡ ನಾಡು-ನುಡಿಯ ಏಳ್ಗೆಗೆ ಶ್ರಮಿಸುವುದು ಒಂದು ಪುಣ್ಯದ ಕಾರ್ಯ. ಕನ್ನಡ ನಾಡು, ನುಡಿ ಸೇವೆಗಾಗಿ ನಮ್ಮ ಜೀವನ ಮುಡುಪಾಗಿರಿಸಿಕೊಳ್ಳಬೇಕು.
-ಎನ್.ಎಂ.ಬಿರಾದಾರ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರು.