ಕನ್ನಡ ಭಾಷೆ ಬದುಕಿನ ಜೀವನಾಡಿಯಾಗಬೇಕು

| Published : Nov 12 2025, 01:15 AM IST

ಸಾರಾಂಶ

ಕನ್ನಡ ಭಾಷೆ ಕೇವಲ ಸಂವಹನಕ್ಕೆ ಸೀಮಿತವಾಗದೆ ಬದುಕನ್ನು ಕಟ್ಟಿಕೊಡುವ ಅನ್ನ ಮತ್ತು ಉದ್ಯೋಗದ ಭಾಷೆಯಾಗಬೇಕು ಅದು ಜೀವನಾಡಿಯಾಗಬೇಕು. ಈ ನಿಟ್ಟಿನಲ್ಲಿ ನಾಡು ನುಡಿಯ ರಕ್ಷಣೆಗೆ ಕನ್ನಡಿಗರ ಒಗ್ಗಟ್ಟು ಅತ್ಯವಶ್ಯಕ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ಕನ್ನಡ ಭಾಷೆ ಕೇವಲ ಸಂವಹನಕ್ಕೆ ಸೀಮಿತವಾಗದೆ ಬದುಕನ್ನು ಕಟ್ಟಿಕೊಡುವ ಅನ್ನ ಮತ್ತು ಉದ್ಯೋಗದ ಭಾಷೆಯಾಗಬೇಕು ಅದು ಜೀವನಾಡಿಯಾಗಬೇಕು. ಈ ನಿಟ್ಟಿನಲ್ಲಿ ನಾಡು ನುಡಿಯ ರಕ್ಷಣೆಗೆ ಕನ್ನಡಿಗರ ಒಗ್ಗಟ್ಟು ಅತ್ಯವಶ್ಯಕ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದರು. ತಾಲೂಕಿನ ಹೊನ್ನವಳ್ಳಿ ಹೋಬಳಿ ವಿಠ್ಠಲಾಪುರ ಗ್ರಾಮದಲ್ಲಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕನ್ನಡರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಕೇವಲ ಭಾಷೆಯಲ್ಲ ಇದು ನಮ್ಮೆಲ್ಲರ ಉಸಿರಾಗಿದ್ದು ಕನ್ನಡ ಭಾಷೆಯನ್ನು ನಾವೆಲ್ಲರೂ ಹೆಚ್ಚಾಗಿ ಬಳಸುವ ಮೂಲಕ ಬೆಳೆಸಬೇಕು, ಕನ್ನಡ ವಿಶ್ವದಾದ್ಯಂತ ಪಸರಿಸುವಂತೆ ನಾವೆಲ್ಲರೂ ಕಂಕಣಬದ್ದರಾಗಬೇಕು. ನಮ್ಮ ಕನ್ನಡ ನಾಡು ಭಾ?ವಾರು ಪ್ರಾಂತ್ಯಗಳ ವಿಂಗಡಣೆಯಾದ ಸಂದರ್ಭದಲ್ಲಿ ಹಲವರ ಹೋರಾಟದ ಶ್ರಮದಿಂದ ಕನ್ನಡಿಗರ ನಾಡು ಕನ್ನಡ ನಾಡಾಯಿತು. ಕಲೆ, ಸಾಹಿತ್ಯ, ಸಂಸ್ಕೃತಿಯ ಆಗರವೇ ಆಗಿರುವ ನಮ್ಮ ನಾಡು ಸಮೃದ್ದ ಕರ್ನಾಟಕವಾಗಬೇಕು. ಎಲ್ಲರೂ ಒಗ್ಗಟ್ಟಿನಿಂದ ಈ ನಾಡನ್ನು ಮತ್ತ? ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮೆಲ್ಲರ ಕರ್ತವ್ಯ. ಕನ್ನಡಿಗರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುವಲ್ಲಿ ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಸಾಹಿತಿ ಸಾರ್ಥವಳ್ಳಿ ಶಿವಕುಮಾರ್ ಮಾತನಾಡಿ ಕನ್ನಡ ಭಾ? ಇಂದು ವಿಶ್ವಮಾನ್ಯತೆ ಪಡೆದಿದೆ. ರಾಜ ಮಹಾರಾಜರು, ಸಾಧುಸಂತರು, ಶರಣರು, ಕವಿ, ಸಾಹಿತಿ, ಕಲಾವಿದರ ಬೀಡಾಗಿದೆ. ಇಂತಹ ನಾಡಲ್ಲಿ ಹುಟ್ಟಿದ ಪ್ರತಿಯೊಬ್ಬ ಕನ್ನಡಿಗರು ಧನ್ಯರು. ಅತ್ಯಂತ ಚಿಕ್ಕ ಗ್ರಾಮ ವಿಠ್ಠಲಾಪುರ ಗ್ರಾಮದ ಹಿರಿಯರು, ಯುವಕರು, ಮಕ್ಕಳು, ಮಹಿಳೆಯರೆನ್ನದೆ ಮನೆ ಮಂದಿಯಲ್ಲಿ ಸೇರಿ ಸಂತಸದಿಂದ, ಒಗ್ಗಟ್ಟಿನಿಂದ ರಾಜ್ಯೋತ್ಸವ ಆಚರಿಸಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ವಿ.ಪರಮೇಶ್ವರಪ್ಪ, ಹಿರಿಯರಾದ ಮಲ್ಲೇಶಪ್ಪ, ಈಶ್ವರಪ್ಪ, ಪಟ್ರೇಹಳ್ಳಿ ಪುಟ್ಟಶಂಕರಪ್ಪ ಮುಖಂಡರಾದ ಜಯಣ್ಣ, ವಿಜಯಕುಮಾರ್, ಘಟಕದ ಜ್ಞಾನೇಶ್, ಯೋಗೀಶ್, ಪ್ರಕಾಶ್, ಹೇಮಂತ್, ಅರುಣ್, ಭುವನ, ಅಶೋಕ, ಬಸವರಾಜು, ದಯಾನಂದ, ಶಿಕ್ಷಕಿ ಗಿರಿಜಮ್ಮ ಸೇರಿದಂತೆ ಕನ್ನಡ ಸಂಘದ, ಗ್ರಾಮಸ್ಥರು ಉಪಸ್ಥಿತರಿದ್ದರು.