ಕುಕುನೂರು: ಕನ್ನಡ ನಾಡಿನ ನೆಲ,ಜಲ, ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಎಲ್ಲರೂ ಒಗ್ಗಟ್ಟಾಗಿ ರಕ್ಷಿಸಬೇಕಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಳಕಪ್ಪ ಕುಂಬಾರ ಹೇಳಿದರು.

ಪಟ್ಟಣದ ಗುದ್ನೆಪ್ಪ ಮಠದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ನಮ್ಮ ಮಾತೃಭಾಷೆ ಕನ್ನಡ ಉಳಿಸಿಕೊಂಡು ಹೋಗಲು ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಸಹಕಾರಿಯಾಗಿದೆ. ಅಲ್ಲದೆ ಕನ್ನಡದ ಪ್ರೇಮ ಪ್ರತಿಯೊಬ್ಬರಲ್ಲಿ ಮೂಡಬೇಕು ಮತ್ತು ದತ್ತಿ ದಾನಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ಸದಾ ಅಭಿನಂದಿಸುತ್ತದೆ ಎಂದರು.

ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಬಸವಂತಪ್ಪ ದೊಡ್ಡಮನಿ ಮಾತನಾಡಿ, ​ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ದತ್ತಿ ಉಪನ್ಯಾಸಗಳ ಪಾತ್ರ ಮಹತ್ತರವಾದದ್ದು ಎಂದರು.

ಶಿಕ್ಷಕಿ ಜ್ಯೋತಿ ವಿಜಯ ಕುಮಾರ್ ಮುಧೋಳ ಅವರು ಶರಣರ ಸಾಹಿತ್ಯ ಭಾರತೀಯ ಕೃಷಿ ಮತ್ತು ಸಂಸ್ಕೃತಿ,ಶಿಕ್ಷಕ ಮಹಾಂತೇಶ ಅಂಗಡಿ ಅವರು,ಏರಿ ಮಣ್ಣಿನ ಹೊಲಕ್ಕೆ ಉಸಿಕಿನ ಹೊದಿಕೆ ಮತ್ತು ಕೃಷಿ, ಶಿಕ್ಷಕ ಬಸವರಾಜ್ ಉಪ್ಪಿನ್ ಅವರು ನಾಡು ನುಡಿ ಬೆಳವಣಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಅಭಿವೃದ್ಧಿ ಎಂಬ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.


ಕುಕನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವಕೋಶಾಧ್ಯಕ್ಷ ಬಸವರಾಜ ಮೇಟಿ ಪ್ರಾಸ್ತಾವಿಕವಾಗಿ ಆಶಯ ನುಡಿ ನುಡಿದರು. ದಿ.ಶಂಕ್ರಪ್ಪ ಸಿದ್ದಪ್ಪ ದೊಡ್ಡ ಯರಾಶಿ ಬನ್ನಿಕೊಪ್ಪ, ದಿ.ರೊಕ್ಕಪ್ಪ ಆರ್ಯಾರ್ ಕುಕುನೂರು, ದಿ.ರುದ್ರಮ್ಮ ರುದ್ರಪ್ಪ ಅಂಗಡಿ ರಾಜೂರು ಇವರ ಸ್ಮರಣಾರ್ಥವಾಗಿ ಮತ್ತು ಗೌರವ ದತ್ತಿ ದಾನಿಗಳಾದ ಯಂಕಣ್ಣ ಶಂಕ್ರಪ್ಪ ಯರಾಶಿ, ಈಶಪ್ಪ ರೊಕ್ಕಪ್ಪ ಆರ್ಯರ್ ಶರಣಪ್ಪ ರುದ್ರಪ್ಪ ಅಂಗಡಿ ದತ್ತಿದಾನಿಗಳಾಗಿದ್ದರು. ಕಾರ್ಯಕ್ರಮದಲ್ಲಿ ದತ್ತಿದಾನಿಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.

ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಅಶೋಕ ಮಾದಿನೂರು, ಎಚ್.ಕೆ.ಕುರಿ, ಹನುಮಂತ ಹಿರೇಮನಿ, ರಮೇಶ್ ಕುಲಕರ್ಣಿ, ಯೋಗಪ್ಪ ಮಂಗಳೂರು, ಕಸಾಪ ಪದಾಧಿಕಾರಿ ಭೀಮರೆಡ್ಡಿ ಶಾಡ್ಲಿಗೇರಿ, ಪ್ರಧಾನ ಕಾರ್ಯದರ್ಶಿ ಫೀರಸಾಬ್‌ ದಫೇದಾರ್‌, ಪತ್ರಕರ್ತ ನಾಗರಾಜ್ ಬೆಣಕಲ್, ಚಂದ್ರು ಬಾನಾಪುರ, ಚೆನ್ನಯ್ಯ ಹಿರೇಮಠ ಇತರರಿದ್ದರು.

ಶಾಲಾ ಮಕ್ಕಳು ಮತ್ತು ಗಾಯಕ ಮೇಘರಾಜ್ ಜಡಗಿ ನಾಡಗೀತೆ ಹಾಡಿದರು. ಪರಮೇಶ ಪತ್ತಾರ್ ಸ್ವಾಗತಿಸಿದರು.ರಾಣಿಹಳ್ಳಿ ನಿರೂಪಿಸಿದರು. ಪೀರಸಾಬ್ ದಪೇದರ್ ವಂದಿಸಿದರು.