ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ ಕನ್ನಡ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಹಾಗು ವಾಗ್ದೇವಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ಕನ್ನಡ ನುಡಿ ಹಬ್ಬ ಕಾರ್ಯಕ್ರಮ ನಡೆಯಿತು.ಹೊಳಲ್ಕೆರೆಯ ಮುಖ್ಯ ವೃತ್ತದಿಂದ ಹೊರಟ ಮೆರವಣಿಗೆಯಲ್ಲಿ ವಾಗ್ದೇವಿ ಶಾಲಾ ಮಕ್ಕಳು ಪಾಲ್ಗೊಂಡು ಭುವನೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಅಲ್ಲದೇ ಕನ್ನಡದ ನುಡಿ ತೇರು, ಅಂಬಾರಿಯ ಪ್ರತಿ ಕೃತಿಯನ್ನು ಹೊತ್ತು ಸಾಗಿದ ಆನೆಯ ಮಾದರಿ, ಯಕ್ಷಗಾನ, ಕೋಲಾಟ ದೈವರಾಧನೆ, ವೇಷಧಾರಣ ಎತ್ತು ನೋಡಿದರೂ ರಾರಾಜಿಸುತ್ತಿದ್ದ ಕನ್ನಡ ಬಾವುಟಗಳು, ಧ್ವಜಗಳು 2000 ವಿದ್ಯಾರ್ಥಿಗಳಿಂದ ಭವ್ಯ ಮೆರವಣಿಗೆ ನಡೆಯಿತು.ರಾಮಾಯಣ, ಮಹಾಭಾರತದ ಪಾತ್ರಗಳು, ಮದಕರಿನಾಯಕನ ಪಾತ್ರಧಾರಿ, ಅನುಭವ ಮಂಟಪದ ವಚನಕರಾರು, ಕನ್ನಡ ನಾಡಿನ ವೀರರ, ವೀರರಾಣಿಯರ ಸ್ಥಬ್ದ ಚಿತ್ರಗಳು ಸಾಗಿದವು. ಶಾಲೆಯ ಆವರಣದಲ್ಲಿ ಕನ್ನಡ ನಾಡು ನುಡಿ ಸಾಹಿತ್ಯಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ, ಜ್ಞಾನಪೀಠ ಪ್ರಶಸ್ತಿ ವಿಜೇತರು, ರಾಷ್ಟ್ರಕವಿಗಳ, ಚನ್ನಪಟ್ಟಣದ ಗೊಂಬೆಗಳು, ಹಂಪಿಯ ಕಲ್ಲಿನ ತೇರು, ಹಲ್ಮಿಡಿ ಶಾಸನದ ಮಾದರಿ ಪ್ರದರ್ಶನ ಇಡಲಾಗಿತ್ತು.ತಾಲೂಕಿನ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಕವಿಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ರಸಪ್ರಶ್ನೆ, ಕವನ ವಾಚನ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಕನ್ನಡ ಭಾಷಾ ಶಿಕ್ಷಕರಿಗೆ ಗೌರವ ನಮನ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದವನಹಳ್ಳಿ ವೀರೇಶ್ ಕುಮಾರ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಶಾಸಕ ಡಾ.ಎಂ. ಚಂದ್ರಪ್ಪ, ವಾಗ್ದೇವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ.ಪಿ ಸಿದ್ದಲಿಂಗಸ್ವಾಮಿ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಪುರಸಭೆಯ ಅಧ್ಯಕ್ಷ ವಿಜಯ ಸಿಂಹ ಖಾಟ್ರೋತ್ ,ಉಪಾಧ್ಯಕ್ಷ ಎಚ್.ಆರ್. ನಾಗರತ್ನ ವೇದಮೂರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ.ಶಿವಸ್ವಾಮಿ , ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್. ಶಿವಮೂರ್ತಿ, ಕಸಾಪ ಉಪಾಧ್ಯಕ್ಷ ಜಿ.ಎ. ದೇವರಾಜಯ್ಯ, ಆರ್. ಪ್ರಭಾಕರ್ ರಾಷ್ಟ್ರಪ್ರಶಸ್ತಿ ವಿಜೇತರಾದ ಟಿ.ಪಿ. ಉಮೇಶ್, ಮೃತುಂಜಯಪ್ಪ, ವಿದ್ಯಾರ್ಥಿಗಳು ಪೋಷಕರು, ಸಂಸ್ಥೆಯ ಸಿಬ್ಬಂದಿ ವರ್ಗ, ಕನ್ನಡ ಮನಸ್ಸುಗಳು ಹಾಜರಿದ್ದರು.