ಮಕ್ಕಳ‌ ದಿನಾಚರಣೆ ಪ್ರಯುಕ್ತ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ನಗರದ ಸಾಯಿ ಪಾರ್ಕ್‌ನಲ್ಲಿರುವ ಚಾಣಕ್ಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ-2025 ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಪರಿಸರ ಪ್ರೇಮಿ ಹಾಗೂ ನಡೆದಾಡುವ ದೇವರು ಎನಿಸಿಕೊಂಡ ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ನಾಡಿನಲ್ಲಿ ಮಕ್ಕಳ‌ ದಿನಾಚರಣೆ ಪ್ರಯುಕ್ತ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ನಗರದ ಸಾಯಿ ಪಾರ್ಕ್‌ನಲ್ಲಿರುವ ಚಾಣಕ್ಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ-2025 ನಡೆಸಲಾಯಿತು. ಕರ್ನಾಟಕದ ಅರಣ್ಯ ಅಥವಾ ಕರ್ನಾಟಕದ ವನ್ಯಜೀವಿ ಕುರಿತು ವಿವಿಧ ತಾಲೂಕು ಮಟ್ಟದಲ್ಲಿ ಚಿತ್ರಬಿಡಿಸಿ ಆಯ್ಕೆಯಾಗಿದ್ದ 8, 9 ಹಾಗೂ 10ನೇ ತರಗತಿಯ ಒಟ್ಟು 64 ವಿದ್ಯಾರ್ಥಿಗಳು ಭಾನುವಾರ ನಡೆದ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸೈಕಲ್ ಬಹುಮಾನ:

ಕನ್ನಡಪ್ರಭ ನೇತೃತ್ವದಲ್ಲಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಚಿತ್ರ ಬಿಡಿಸಿದ 9 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆಕರ್ಷಕವಾದ ಸೈಕಲ್ ಗಳನ್ನು ಬಹುಮಾನವಾಗಿ ನೀಡಲಾಯಿತು. ಜೊತೆಗೆ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ವಿಶೇಷವಾದ ಚಿತ್ರಕಲಾ ಕಿಟ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಗಣ್ಯರೆಲ್ಲ ಸೇರಿ ವಿಜೇತ ವಿದ್ಯಾರ್ಥಿಗಳಿಗೆ ಸೈಕಲ್ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು:

ಕಾರ್ಯಕ್ರಮದ ಉದ್ಘಾಟನೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ.ಕುಸನಾಳ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಧುಮೇಹ ತಜ್ಞ ಡಾ.ಬಾಬುರಾಜೇಂದ್ರ ನಾಯಿಕ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವೀರಯ್ಯ ಸಾಲಿಮಠ, ನಿವೃತ್ತ ದೈಹಿಕ ನಿರ್ದೇಶಕ ಡಾ.ಅಶೋಕಕುಮಾರ ಜಾಧವ ಭಾಗವಹಿಸಿದರು. ಅಧ್ಯಕ್ಷತೆಯನ್ನು ಚಾಣಕ್ಯ ಕೋಚಿಂಗ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಎನ್.ಎಂ.ಬಿರಾದಾರ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಜೀವನಜ್ಯೋತಿ ಹಾರ್ಟ್ ಆಂಡ್ ಬ್ರೈನ್ ಕ್ಲಿನಿಕ್‌ನ ಸಾರ್ವಜನಿಕ ಸಂಪರ್ಕಾಕಾಧಿಕಾರಿ ಶಿವಾನಂದ‌ ಮಾಳಿ, ಹಿರಿಯ ಪ್ರಾಧ್ಯಾಪಕ ಡಾ.ಎಸ್.ಎಸ್.ರಾಜಮಾನ್ಯ, ಲಯನ್ಸ್ ಕ್ಲಬ್ ಆಫ್ ಬಿಜಾಪುರದ ಅಧ್ಯಕ್ಷ ಚಿದಾನಂದ ನಿಂಬಾಳ, ಕಾಮಿಡಿ ಸ್ಟಾರ್ ಬಸವರಾಜ ಹಿರೇಮಠ ಆಗಮಿಸಿದ್ದರು. ಸಾಹಿತಿ ಸುಭಾಷ್ಚಂದ್ರ ಕನ್ನೂರ ನಿರೂಪಿಸಿದರು, ನಿರ್ಣಾಯರಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿ ನಿಕಟಪೂರ್ವ ಸದಸ್ಯ ರಮೇಶ ಚವ್ಹಾಣ, ಲಿಂಗರಾಜ ಕಾಚಾಪುರ, ಗುಲಾಬಚಂದ ಜಾಧವ ಆಗಮಿಸಿದ್ದರು. ಕಲಾವಿದ ಬಸವರಾಜ ಹಿರೇಮಠ, ಚಾಣಕ್ಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಟಿ.ಮೆರವಾಡೆ, ಶ್ರೀ ಸಿದ್ಧೇಶ್ವರ ಕೋಚಿಂಗ್ ಕ್ಲಾಸ್ ಸುರೇಶ ಜತ್ತಿ, ಕನ್ನಡಪ್ರಭ ಸ್ಥಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ಸಂತೋಷ ಕರಿಕಟ್ಟಿ, ಪ್ರಸಾರಾಂಗ ವಿಭಾಗದ ಮಂಜುನಾಥ, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಕನ್ನಡಪ್ರಭ ಸಿಬ್ಬಂದಿ ಹಾಗೂ ಎಲ್ಲ ತಾಲೂಕುಗಳ ವರದಿಗಾರರು ಇದ್ದರು.

ಸಮಸ್ತ ಕನ್ನಡಪ್ರಭ ಸಿಬ್ಬಂದಿ ಶ್ರಮ

ಬೆಳಗಾವಿ ಬ್ಯೂರೋ ಕನ್ನಡಪ್ರಭ ಕಚೇರಿಯ ಶ್ರೀಶೈಲ ಮಠದ, ಮಂಜುನಾಥ ಪ್ಯಾಟಿ, ಸಂತೋಶ ಕರಿಕಟ್ಟಿ, ಮಂಜುನಾಥ.ಸಿ.ಕೆ, ಚಿದಾನಂದ ಪಾಟೀಲ, ರವಿ ಮುರುಗೋಡ, ವಿಜಯಪುರ ಜಿಲ್ಲೆಯ ಶಶಿಕಾಂತ ಮೆಂಡೆಗಾರ, ಆನಂದ ಮೋಕಾಶಿ, ಸುರೇಶ ತೇರದಾಳ, ಪರಶುರಾಮ ಹನುಮರ, ನಾರಾಯಣ ಮಾಯಾಚಾರಿ, ಬಸವರಾಜ‌ ನಂದಿಹಾಳ, ಸಿದ್ದಲಿಂಗ ಕಿಣಗಿ, ಖಾಜು ಸಿಂಗೆಗೊಳ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಕುಬಕಡ್ಡಿ, ಶಂಕರ ಹಾವಿನಾಳ, ಗಂಗಾಧರ ಹಿರೇಮಠ, ಯುನೀಸ್ ಮೂಲಿಮನಿ ತಂಡದಿಂದ ಚಿತ್ರಕಲೆಯನ್ನು ಯಶಸ್ವಿಯಾಗಿ ನಡೆಸಲಾಯಿತು.