ಕನ್ನಡಪ್ರಭ ಮಂಗಳೂರು ಆವೃತ್ತಿ 25ನೇ ವರ್ಷದ ಸಂಭ್ರಮದ ಅಂಗವಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು ಸೋಮವಾರಪೇಟೆಯ ಶಾಸಕರ ನಿವಾಸದಲ್ಲಿ ಕನ್ನಡಪ್ರಭ ವತಿಯಿಂದ‌ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡಪ್ರಭ ಮಂಗಳೂರು ಆವೃತ್ತಿ 25ನೇ ವರ್ಷದ ಸಂಭ್ರಮದ ಅಂಗವಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು ಸೋಮವಾರಪೇಟೆಯ ಶಾಸಕರ ನಿವಾಸದಲ್ಲಿ ಕನ್ನಡಪ್ರಭ ವತಿಯಿಂದ‌ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಶಾಸಕ ಡಾ. ಮಂತರ್ ಗೌಡ, ಕನ್ನಡಪ್ರಭ ಮಂಗಳೂರು ಆವೃತ್ತಿ 25ನೇ ವರ್ಷದ ಸಂಭ್ರಮದ ವಿಶೇಷ ಪುರವಣಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ದಿನ ಪತ್ರಿಕೆ ಕೊಡಗಿನ ಹಲವಾರು ಸಮಸ್ಯೆಗಳನ್ನು ಬಗೆಯರಿಸುವಲ್ಲಿ ಕೆಲಸ ಮಾಡಿದೆ. ಪತ್ರಿಕೆಯಲ್ಲಿನ ವರದಿಗಳ ಮೂಲಕ‌ ಹಲವು ಸಮಸ್ಯೆಗಳನ್ನು ಪರಿಹರಿಸಲು ನನಗೆ ಅನುಕೂಲವಾಗಿದೆ. ಪತ್ರಿಕೆಯಿಂದ ಇನ್ನಷ್ಟು ಪರಿಣಾಮಕಾರಿ ವರದಿಗಳು ಮೂಡಿಬರುವ ಮೂಲಕ ಸಮಾಜದಲ್ಲಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಬೇಕೆಂದರು.

ಕನ್ನಡಪ್ರಭ ದಿನ ಪತ್ರಿಕೆಗೆ ಸುಮಾರು 59 ವರ್ಷವಾಗಿದ್ದು, ಮಂಗಳೂರು ಆವೃತ್ತಿ ರಜತ ಮಹೋತ್ಸವ ಆಚರಿಸುತ್ತಿರುವುದು ಸಂತಸದ ವಿಷಯ. ನಮ್ಮ ಕೊಡಗು ಜಿಲ್ಲೆ ಕೂಡ ಮಂಗಳೂರು ಆವೃತ್ತಿಯೊಂದಿಗೆ ಬೆಸೆದುಕೊಂಡಿದೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣದಿಂದ ಆಗಮಿಸಲು ಸಾಧ್ಯವಾಗಿಲ್ಲ ಎಂದರು. ಅಲ್ಲದೆ ಪತ್ರಿಕೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಶುಭ ಕೋರಿದರು. ಕನ್ನಡಪ್ರಭ ದಿನ ಪತ್ರಿಕೆ ಮತ್ತಷ್ಟು ಎತ್ತರಕ್ಕೆ ಹೋಗಬೇಕು. ಇದಕ್ಕೆ ನಾವು ಕೂಡ ಕೈ ಜೋಡಿಸುವುದಾಗಿ ಇದೇ ಸಂದರ್ಭ ತಿಳಿಸಿದರು.

ಈ ಸಂದರ್ಭ ಕನ್ನಡಪ್ರಭ ಮೈಸೂರು ವಿಭಾಗದ ಹಿರಿಯ ಜಾಹೀರಾತು ವ್ಯವಸ್ಥಾಪಕರಾದ ಕೃಷ್ಣ ಪ್ರಸಾದ್, ಜಿಲ್ಲಾ ವರದಿಗಾರ ವಿಘ್ನೇಶ್ ಭೂತನಕಾಡು, ಕುಶಾಲನಗರ ತಾಲೂಕು ವರದಿಗಾರ ಚಂದ್ರಮೋಹನ್ ಇದ್ದರು.