ಕಲಬುರಗಿಯಲ್ಲಿ ಕನ್ನಡಪ್ರಭದ ‘ಮಲ್ಲಿಕಾರ್ಜುನ’ಗೆ ಭಾರಿ ಮೆಚ್ಚುಗೆ

| Published : Jul 22 2025, 12:00 AM IST

ಕಲಬುರಗಿಯಲ್ಲಿ ಕನ್ನಡಪ್ರಭದ ‘ಮಲ್ಲಿಕಾರ್ಜುನ’ಗೆ ಭಾರಿ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆಯವರ 83ನೇ ಹುಟ್ಟುಹಬ್ಬದ ಅಂಗವಾಗಿ ಕಲಬುರಗಿ ಕನ್ನಡಪ್ರಭ ಹೊರ ತಂದಿರುವ ಮಹಾನಾಯಕ ಮಲ್ಲಿಕಾರ್ಜುನ ವಿಶೇಷ 6 ಪುಟಗಳ ಬಣ್ಣದ ಪುರವಣಿ ಕಲಬುರಗಿಯಲ್ಲಿರುವ ಸಹಸ್ರಾರು ಖರ್ಗೆ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆಯವರ 83ನೇ ಹುಟ್ಟುಹಬ್ಬದ ಅಂಗವಾಗಿ ಕಲಬುರಗಿ ಕನ್ನಡಪ್ರಭ ಹೊರ ತಂದಿರುವ ಮಹಾನಾಯಕ ಮಲ್ಲಿಕಾರ್ಜುನ ವಿಶೇಷ 6 ಪುಟಗಳ ಬಣ್ಣದ ಪುರವಣಿ ಕಲಬುರಗಿಯಲ್ಲಿರುವ ಸಹಸ್ರಾರು ಖರ್ಗೆ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯಿತು.

ಖರ್ಗೆಯವರ ರಾಜಕೀಯ ದಾರಿ, ಸುದೀರ್ಘ ಸಾರ್ವಜನಿಕ ಬದುಕು, ಸಾಧನೆಗಳು, ಸದನ ವಿಶೇಷಗಳು, ಕಲಂ 371 (ಜೆ) ವಿಚಾರ ಸೇರಿದಂತೆ ಹತ್ತು ಹಲವು ವಿಷಯಗಳಿರುವ ವಿಶೇಷ ಪುಟಗಳು, ಶಾಸಕರು, ಮೇಲ್ಮನೆ ಸದಸ್ಯರು, ಹೋರಾಟಗಾರರು ಬರೆದಂತಹ ಖರ್ಗೆ ಬದುಕಿನ ಹಲವು ಘಟನಾವಳಿಗಳು, ಲೇಖನಗಳಿಂದ ಕೂಡಿದ್ದ ಪುರವಣಿಯನ್ನು ಜನ ಓದಿದರು.

ಇದಲ್ಲದೆ ಕನ್ನಡಪ್ರಭ ಕಲಬುರಗಿ ತಂಡದಿಂದ ಪುರವಣಿಯನ್ನು ಬಸ್‌ ನಿಲ್ದಾಣ, ಕಾಂಗ್ರೆಸ್‌ ಕಚೇರಿ, ಕೋರ್ಟ್‌ ರಸ್ತೆಯ ಬಾಲಾಜಿ ಟೀ ಪಾಯಿಂಟ್‌ ಇಲ್ಲೆಲ್ಲಾ ಬಿಡುಗಡೆ ಮಾಡಲಾಯಿತು.

ಅಭಿವೃದ್ಧಿ ದಿನವಾಗಿ ಖರ್ಗೆ ಹುಟ್ಟುಹಬ್ಬ:

ಖರ್ಗೆ ಹುಟ್ಟುಹಬ್ಬದ ಅಂಗವಾಗಿ ಬಸ್‌ ನಿಲ್ದಾಣದ ಮುಂದೆ ಶಾಸಕ ಅಲ್ಲಮಪ್ರಭು ಪಾಟೀಲರ ಅಭಿಮಾನಿಗಳು ಆಯೋಜಿಸಿದ್ದ ಸಾರ್ವಜನಿಕ ಅನ್ನದಾನಕ್ಕೆ ಚಾಲನೆ ನೀಡುವ ಮುನ್ನ ಕನ್ನಡಪ್ರಭ ವಿಶೇಷ ಪುರವಣಿಯನ್ನು ಶಾಸಕರ ಪುತ್ರ ಅಭಿಷೇಕ ಪಾಟೀಲ್‌, ಪಾಲಿಕೆ ಸದಸ್ಯೆ ವರ್ಷಾ ರಾಜು ಜಾನೆ ಬಿಡುಗಡೆ ಮಾಡಿದರು. ವಾಣಿಶ್ರೀ ಸಗರಕರ್‌, ಈರಣ್ಣ ಝಳಕಿ, ಶಾಸಕರ ಆಪ್ತ ಕಾರ್ಯದರ್ಶಿ ವಿಜಯಕುಮಾರ್‌ ಜಿದ್ದಿಮಠ ಇದ್ದರು. ಮಾತನಾಡಿದ ವಾಣಿಶ್ರೀ, ಅಭಿವೃದ್ಧಿ ಪರ ಚಿಂತನೆಯ ಖರ್ಗೆ ಜನ್ಮದಿನವನ್ನು ಸರ್ಕಾರ ಅಭಿವೃದ್ಧಿ ದಿನವನ್ನಾಗಿ ಘೋಷಿಸಲೆಂದು ಆಗ್ರಹಿಸಿದರು.

ಕನ್ನಡಪ್ರಭ ಪುರವಣಿಗೆ ಶಾಸಕ ಎಂವೈಪಿ ಮೆಚ್ಚುಗೆ:

ಡಾ.ಖರ್ಗೆ ಜನ್ಮ ದಿನದ ಅಂಗವಾಗಿ ವಿಷಯ ವಿವರಣೆಗಳಿರುವ ಕನ್ನಡಪ್ರಭ ವಿಶೇಷ ಪುರವಣಿಯನ್ನು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬಿಡುಗಡೆ ಮಾಡಿದ ಅಫಜಲ್ಪುರ ಶಾಸಕ ಎಂ ವೈ ಪಾಟೀಲರು ಪುರವಣಿಯಲ್ಲಿನ ಲೇಖನಗಳನ್ನು ಓದಿ ಮೆಚ್ಚುಗೆ ಸೂಚಿಸಿದರು. ಉದ್ದಿಮೆದಾರ ಬಸವರಾಜ ಭೀಮಳ್ಳಿ, ಮಾಜಿ ಕುಡಾ ಅಧ್ಯಕ್ಷ ನಾರಾಯಣರಾವ ಕಾಳೆ, ಬಾಬೂರಾವ ಜಾಗಿರ್ದಾರ್‌, ಮಹಿಳಾ ವಿಭಾಗದ ಅಧ್ಯಕ್ಷೆ ಮೈತ್ರೇಯಿ ರೇಣುಕಾ ಸಿಂಗೆ, ಲತಾ ರವಿ ರಾಠೋಡ, ಮೇಲ್ಮನೆ ಸದಸ್ಯ ಜಗದೇವ ಗುತ್ತೇದಾರ್‌ ಅವರ ಆಪ್ತ ಕಾರ್ಯದರ್ಶಿ ಶಿವರಾಜ ಕೊಳ್ಳೂರ, ಈರಣ್ಣ ಝಳಕಿ, ವಾಣಿಶ್ರೀ ಸಗರಕರ್‌ ಅನೇಕರು ಇದ್ದರು.

ಅಭಿವೃದ್ಧಿಯ ಹರಿಕಾರ ಖರ್ಗೆ ನೂರ್ಕಾಲ ಬಾಳಲಿ

ಕಲಬುರಗಿ ಸೇರಿದಂತೆ ಇಡೀ ಕಲ್ಯಾಣ ನಾಡಿನ ಹಿಂದುಳಿದಿರುವುಕೆ ಹೋಗಲಾಡಿಸಲು ಡಾ. ಖರ್ಗೆಯವರು ಸಾಕಷ್ಟು ಕೆಲಸ ಮಾಡಿದ್ದಾರೆ. ಕಲಂ 371 ಜೆ ಕೊಡುಗೆ ಕೊಟ್ಟರು, ಇಎಸ್‌ಐಸಿ ಮೇಡಿಕಲ್‌ ಕಾಲೇಜು ತಂದರು, ಸೇಂಟ್ರಲ್ ವಿವಿ ಬಂತು, ಹೀಗೆ ಸಾಲುಸಾಲು ಕೊಡುಗೆ ಕೊಟ್ಟಿರುವ ಖರ್ಗೆಯವರು ನೂರ್ಕಾಲ ಬಾಳಲಿ ಎಂದು ಎಂವೈ ಪಾಟೀಲ್‌ ಹಾರೈಸಿದರು.

ಬಾಲಾಜಿ ಟೀ ಪಾಯಿಂಟ್‌ನಿಂದ ಅನ್ನದಾಸೋಹ

ಡಾ.ಮಲ್ಲಿಕಾರ್ಜುನ ಖರ್ಗೆಯವರ ಹುಟ್ಟು ಹಬ್ಬದ ನಿಮಿತ್ತ ಖರ್ಗೆಯವರಿಗೆ ಶತಾಯುಷಿಗಳಾಗಲಿ ಎಂದು ಹಾರೈಸಿ ಇಲ್ಲಿನ ಕೋರ್ಟ್‌ ರಸ್ತೆಯಲ್ಲಿರುವ ಬಾಲಾಜಿ ಟೀ ಪಾಯಿಂಟ್‌ನಲ್ಲಿ ಅನ್ನ ದಾಸೋಹ ನಡೆಸಲಾಯ್ತು. ಟೀ ಪಾಯಿಂಟ್‌ ಮಾಲೀಕ ರಮೇಶ, ಶಾಸಕ ಅಲ್ಲಮಪ್ರಭು ಪಾಟೀಲರ ಸಹೋದರರಾದ ಮಲ್ಲಿಕಾರ್ಜುನ ಗೌಡ ಪಾಟೀಲ್‌, ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ಭಾರತೀಬಾಯಿ ಕನ್ನಡಪ್ರಭ ಪುರವಣಿ ಬಿಡುಗೆ ಮಾಡ ಅನ್ನದಾಸೋಹಕ್ಕೆ ಚಾಲನೆ ನೀಡಿದರು. ಎಲ್ಲಾ ಸಮಾರಂಭಗಳಲ್ಲಿ ಕನ್ನಡಪ್ರಭ ಕಲಬುರಗಿ ವಿಶೇಷ ಪ್ರತಿನಿಧಿ ಶೇಷಮೂರ್ತಿ ಅವಧಾನಿ, ಜಾಹೀರಾತು ವಿಭಾಗದ ಗಿರೀಶ ಕುಲಕರ್ಣಿಋ, ಮೋಹನ್‌ ಚಿಕ್ಮೇಟಿ, ಪ್ರಸರಣ ಜಯಪ್ರಕಾಶ್‌, ಫೋಟೋಗ್ರಾಫರ್‌ ಸುನೀಲ ರೆಡ್ಡಿ, ಕಚೇರಿ ಸಹಾಯಕ ರವಿಕುಮಾರ್‌ ಹಾಜರಿದ್ದರು.