ಸಾರಾಂಶ
ವಿದ್ಯಾರ್ಥಿಗಳು ಮೊಬೈಲ್ ಉಪಯೋಗ ಮಾಡುವುದನ್ನು ಬಿಟ್ಟು ಪುಸ್ತಕಗಳನ್ನು ಓದಿಕೊಳ್ಳಬೇಕು. ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಮುಖ್ಯವಾಗಿ ಶಿಕ್ಷಣ ಬೇಕು.
ಕುಷ್ಟಗಿ: ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದಾಗಿ ಕನ್ನಡಪ್ರಭ ದಿನಪತ್ರಿಕೆಯ ಯುವ ಆವೃತ್ತಿ ಬಿಡುಗಡೆ ಮಾಡಿದ್ದು, ಈ ಪತ್ರಿಕೆಯನ್ನು ಓದುವ ಮೂಲಕ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂದು ಹೊಟೇಲ್ ಉದ್ಯಮಿ ಲಿಂಗರಾಜು ಮನ್ನೆರಾಳ ವಿದ್ಯಾರ್ಥಿಗಳಿಗೆ ಕರೆನಿಡಿದರು.
ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಪತ್ರಿಕೆಯ ಯುವ ಆವೃತ್ತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಉಪಯೋಗ ಮಾಡುವುದನ್ನು ಬಿಟ್ಟು ಪುಸ್ತಕಗಳನ್ನು ಓದಿಕೊಳ್ಳಬೇಕು. ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಮುಖ್ಯವಾಗಿ ಶಿಕ್ಷಣ ಬೇಕು. ದೇಶವನ್ನು ಕಟ್ಟುವುದು ನಿಮ್ಮ ಕೈಯಲ್ಲಿದೆ. ಶ್ರದ್ಧೆಯಿಂದ ಶಿಕ್ಷಣವನ್ನು ಕಲಿತು ಪ್ರಾಮಾಣಿಕತೆ ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು. ಸಮಾಜದಲ್ಲಿ ಕೆಟ್ಟದ್ದನ್ನು ಬಯಸದೇ ಒಳ್ಳೆತನ ಕಲಿತುಕೊಳ್ಳಬೇಕು. ಶಿಕ್ಷಕರು ಹಾಗೂ ಕಲಿತ ಶಾಲೆಗೆ ನಮ್ಮ ಗ್ರಾಮಕ್ಕೆ ಒಳ್ಳೆಯ ಹೆಸರನ್ನು ತಂದುಕೊಡುವಂತಹ ಸಾಧಕರಾಗಬೇಕು ಎಂದರು.
ಕನ್ನಡಪ್ರಭದ ಈಶ್ವರಗೌಡ ಶೀಲವಂತರ, ಬಿಎಸ್ಎನ್ಎಲ್ ಎಂಜಿನಿಯರ್ ಅಶೋಕ ವಾಲ್ಮೀಕಿ, ಶಾಲೆಯ ಮುಖ್ಯ ಶಿಕ್ಷಕ ನಾರಾಯಣಪ್ಪ ಮಾತನಾಡಿದರು. ಶಿಕ್ಷಕ ಶರಣಬಸವ ಮಾಟೂರ ನಿರೂಪಿಸಿದರು. ಬಸವರಾಜ ಮಠ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಗದೀಶ ಬಳಿಗಾರ, ವೆಂಕಟೇಶ ಗೌಡರ, ಕನ್ನಡಪ್ರಭದ ಶ್ರೀನಿವಾಸ ಕಂಟ್ಲಿ, ಪರಶಿವಮೂರ್ತಿ ದೋಟಿಹಾಳ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.ಕನ್ನಡಪ್ರಭವು ಒಂದು ಅತ್ಯತ್ತಮವಾದ ದಿನಪತ್ರಿಕೆಯಾಗಿದ್ದು ಈ ಪತ್ರಿಕೆಯ ಮೂಲಕ ಅನೇಕ ಸುದ್ದಿ ಸಮಾಚಾರಗಳನ್ನು ತಿಳಿದುಕೊಳ್ಳಲು ಬಹುಮುಖ್ಯವಾಗಿದೆ ಹಾಗೂ ವಿದ್ಯಾರ್ಥಿಗಳಿಗಾಗಿಯೆ ಬಿಡಿಗಡೆ ಮಾಡಿದ ಯುವ ಆವೃತ್ತಿಯು ವಿದ್ಯಾರ್ಥಿಗಳು ಅಂಕಗಳನ್ನು ಗಳಿಸಲು ಹಾಗೂ ಜ್ನಾನವನ್ನು ಹೆಚ್ಚಿಸಿಕೊಳ್ಳಲು ಹೇಳಿ ಮಾಡಿಸಿದ ಪತ್ರಿಕೆಯಾಗಿದೆ ಎನ್ನುತ್ತಾರೆ ಕೊಪ್ಪಳದ ಹೊಟೇಲ್ ಉದ್ಯಮಿ ಲಿಂಗರಾಜು ಮನ್ನೆರಾಳ.