ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಮಿತಿಮೀರುತ್ತಿರುವ ಸಂಬಂಧ ‘ಕನ್ನಡಪ್ರಭ’ ಪ್ರಕಟಿಸುತ್ತಿರುವ ಸರಣಿ ವರದಿ ಮತ್ತೊಮ್ಮೆ ಸದನದಲ್ಲಿ ಪ್ರತಿಧ್ವನಿಸಿದೆ. ಮಂಗಳವಾರ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಕಲ್ಯಾಣ ಕನಾಟಕದ ಜಿಲ್ಲೆಗಳು ಡ್ರಗ್ಸ್ ಹಾಟ್‌ಸ್ಟಾಪ್ ಆಗುತ್ತಿರುವ ಕುರಿತ ಸರಣಿ ವರದಿಯನ್ನು ಪ್ರಸ್ತಾಪಿಸಿ ನಿಯಂತ್ರಣಕ್ಕೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ, ಸುವರ್ಣ ವಿಧಾನ ಪರಿಷತ್ತು
ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಮಿತಿಮೀರುತ್ತಿರುವ ಸಂಬಂಧ ‘ಕನ್ನಡಪ್ರಭ’ ಪ್ರಕಟಿಸುತ್ತಿರುವ ಸರಣಿ ವರದಿ ಮತ್ತೊಮ್ಮೆ ಸದನದಲ್ಲಿ ಪ್ರತಿಧ್ವನಿಸಿದೆ. ಮಂಗಳವಾರ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಕಲ್ಯಾಣ ಕನಾಟಕದ ಜಿಲ್ಲೆಗಳು ಡ್ರಗ್ಸ್ ಹಾಟ್‌ಸ್ಟಾಪ್ ಆಗುತ್ತಿರುವ ಕುರಿತ ಸರಣಿ ವರದಿಯನ್ನು ಪ್ರಸ್ತಾಪಿಸಿ ನಿಯಂತ್ರಣಕ್ಕೆ ಆಗ್ರಹಿಸಿದರು.ಶೂನ್ಯವೇಳೆಯಲ್ಲಿ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲೆ ಈ ವಿಷಯ ಪ್ರಸ್ತಾಪಿಸಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಗಾಂಜಾ ಘಾಟು ಹೆಚ್ಚಾಗುತ್ತಿದೆ. ಈ ಭಾಗದ ಜಿಲ್ಲೆಗಳು ಗಾಂಜಾ ಹಾಟ್‌ಸ್ಟಾಟ್‌ಗಳಾಗುತ್ತಿರುವ ಕುರಿತು ‘ಕನ್ನಡಪ್ರಭ’ ಪತ್ರಿಕೆಯಲ್ಲಿ ‘ಕಲ್ಯಾಣ ಕರ್ನಾಟಕ ಈಗ ಗಾಂಜಾ ನೆಲವೀಡು’ ಎಂಬ ಶೀರ್ಷಿಕೆಯಲ್ಲಿ ಸರಣಿ ವರದಿ ಪ್ರಕಟವಾಗಿದೆ. ತಕ್ಷಣ ಗೃಹ ಇಲಾಖೆ ಎಲ್ಲ ಭಾಗಗಳಲ್ಲೂ ದಾಳಿ ನಡೆಸಿ ಗಾಂಜಾ ಸಾಗಣೆ, ಮಾರಾಟ ಮತ್ತು ವ್ಯಸನ ಪ್ರಕರಣಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕಮಕನೂರ ಆಗ್ರಹಿಸಿದರು.
ಸ್ಥಳೀಯು ಯುವಕರು ಗಾಂಜಾ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಇದಕ್ಕೆ ಸ್ಲೀಪಿಂಗ್ ಸೆಲ್ ರೀತಿಯ ಕೆಲಸಗಳಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇನ್ನು ಕಲ್ಯಾಣ ಕರ್ನಾಟಕ ಭಾಗದ ಗಡಿ ಭಾಗಗಳಲ್ಲಿ ಡ್ರಗ್ಸ್ ನಿಯಂತ್ರವೇ ಇಲ್ಲ. ಹಾಗಾಗಿಈ ಎರಡೂ ಜಿಲ್ಲೆಗಳಲ್ಲಿ ರಹಸ್ಯವಾಗಿ ಹೊರಭಾಗದಿಂದ ಬಂದ ಡ್ರಗ್ಸ್ ಅನ್ನು ದಾಸ್ತಾನು ಮಾಡಿ ಕರ್ನಾಟಕದ ಇತರೆ ಭಾಗಗಳಿಗೆ ಮಾತ್ರವಲ್ಲದೆ, ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರ ಜಿಲ್ಲೆಗಳಿಗೂ ಪೂರೈಕೆ ಮಾಡಲಾಗುತ್ತಿದೆ. ಇನ್ನು, ಗಾಂಜಾ ಮಿಶ್ರಿತ ಚಾಕೋಲೆಟ್‌ಗಳು ಜಿಲ್ಲೆಯ ಹೈಸ್ಕೂಲ್ ಮಕ್ಕಳ ವರೆಗೂ ತಲುಪುತ್ತಿವೆ. 2023ರಲ್ಲಿ ಮಾದಕ ವಸ್ತು ಮಾರಾಟ, ದಾಸ್ತಾನು, ವ್ಯಸನ ಪ್ರಕರಣಗಳಲ್ಲಿ 51, ನಂತರ 2025ರ ಏಪ್ರಿಲ್‌ವರೆಗೆ 183 ಪ್ರಕರಣಗಳು ದಾಖಲಾಗಿದ್ದು, 400 ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.