ಜೆಡಿಎಸ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

| Published : Nov 02 2024, 01:26 AM IST / Updated: Nov 02 2024, 01:27 AM IST

ಜೆಡಿಎಸ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಗಂಧದಂತಹ ವಿಶೇಷ ಪ್ರಕೃತಿ ಸಂಪತ್ತು, ಸುವ್ಯವಸ್ಥಿತ ವಾತಾವರಣ ಹೊಂದಿರುವ ಕರುನಾಡಿನಲ್ಲಿ ನಾವು ಜನಿಸಿರುವುದೇ ಪುಣ್ಯ.

ತುಮಕೂರು: ಮಾತೃಭಾಷೆ ಕನ್ನಡವನ್ನು ತಾಯಿಯಂತೆ ಪ್ರೀತಿಸಿ, ಗೌರವಿಸಬೇಕು. ನಾಡಹಬ್ಬವನ್ನು ಮನೆಹಬ್ಬವಾಗಿ ಮನೆಮನೆಯಲ್ಲಿ ಆಚರಿಸಿ. ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡವನ್ನು ಬಳಸಿ ಬೆಳೆಸಲು ಕನ್ನಡಿಗರು ಸಂಕಲ್ಪ ಮಾಡಬೇಕು ಎಂದು ಮಾಜಿ ಶಾಸಕ ಎಚ್.ನಿಂಗಪ್ಪ ಹೇಳಿದರು. ಶುಕ್ರವಾರ ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ೬೯ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಾಡದೇವಿಗೆ ಪುಷ್ಪಾರ್ಚನೆ ಸಲ್ಲಿಸಿ ನಮನ ಸಲ್ಲಿಸಿದರು. ಶ್ರೀಗಂಧದಂತಹ ವಿಶೇಷ ಪ್ರಕೃತಿ ಸಂಪತ್ತು, ಸುವ್ಯವಸ್ಥಿತ ವಾತಾವರಣ ಹೊಂದಿರುವ ಕರುನಾಡಿನಲ್ಲಿ ನಾವು ಜನಿಸಿರುವುದೇ ಪುಣ್ಯ. ನಮ್ಮ ನಾಡು, ನುಡಿ, ನೆಲ, ಜಲ ಸಂರಕ್ಷಣೆಗೆ ಮುಂದಿನ ತಲೆಮಾರಿಗೆ ಉಳಿಸಲು ನಾವೆಲ್ಲಾ ಕಂಕಣಬದ್ಧರಾಗಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತನಾಡಿ, 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಅದರದ್ದೇ ಆದ ವೈಶಿಷ್ಟ್ಯತೆ ಇದೆ. ಸಮೃದ್ಧಿಯಾಗಿರುವ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವ ಎರಡನೇ ರಾಜ್ಯ ಎಂದರು. ರಾಜ್ಯ ಜೆಡಿಎಸ್ ಎಸ್.ಟಿ. ಘಟಕದ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ಮುಖಂಡ ಯೋಗಾನಂದಕುಮಾರ್, ಜೆಡಿಎಸ್ ನಗರ ಅಧ್ಯಕ್ಷ ವಿಜಯ್‌ಗೌಡ, ರೈತ ಘಟಕ ಜಿಲ್ಲಾಧ್ಯಕ್ಷ ರಂಗನಾಥ್, ನಗರ ಪಾಲಿಕೆ ಮಾಜಿ ಸದಸ್ಯರಾದ ಧರಣೇಂದ್ರಕುಮಾರ್, ಲಕ್ಷ್ಮೀನರಸಿಂಹರಾಜು, ಮುಖಂಡರಾದ ಎಸ್.ಆರ್.ಗೌಡ, ಗಂಗಣ್ಣ, ತಾಹೇರಾ ಕುಲ್ಸಂ,ವಿಶ್ವೇಶ್ವರಯ್ಯ, ನಾಗವಲ್ಲಿ ರಾಮು, ರಂಗಪ್ಪ ಮೊದಲಾದವರು ಭಾಗವಹಿಸಿದ್ದರು.