ಸಾರಾಂಶ
ವಿದ್ಯಾರ್ಥಿನಿಯರಾದ ಎಂ. ವೈಷ್ಣವಿ ಮತ್ತು ಅವನಿ ಆರ್. ರೈ ಅವರು ಕನ್ನಡದ ಕುರಿತು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಸವಣೂರಿನ ವಿದ್ಯಾರಶ್ಮಿಯಲ್ಲಿ ೬೯ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಸಹಕಾರ ರತ್ನ ಸವಣೂರು ಸೀತಾರಾಮ ರೈ ಕನ್ನಡ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿನಿಯರಾದ ಎಂ. ವೈಷ್ಣವಿ ಮತ್ತು ಅವನಿ ಆರ್. ರೈ ಅವರು ಕನ್ನಡದ ಕುರಿತು ಮಾತನಾಡಿದರು.ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಮತ್ತು ಎಲ್ಲ ಸಂಸ್ಥೆಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿದಿಶಾ ಬಿ. ಕೆ. ಟ್ರೂಪ್ ಕಮಾಂಡಿಂಗ್ ನಡೆಸಿದರು. ಪ್ರಾಪ್ತಿ ಪಿ. ಸಂವಿಧಾನ ಪೀಠಿಕೆ ವಾಚಿಸಿದರು. ರಿಷಿತಾ ಸ್ವಾಗತಿಸಿದರು. ಸನಾ ಫಾತಿಮಾ ವಂದಿಸಿದರು. ಸಜಾ ನಿರೂಪಿಸಿದರು.