ಸಾರಾಂಶ
ದಾವಣಗೆರೆ: ವಚನಾಮೃತ ಬಳಗ, ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಮಹಿಳಾ ಘಟಕದಿಂದ ಇಲ್ಲಿನ ವನಿತಾ ಸಮಾಜದ ಅಂಗ ಸಂಸ್ಥೆ ಪ್ರೇಮಾಲಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ, ಚನ್ನಬಸವಣ್ಣ, ನೀಲಾಂಬಿಕೆ ಅವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸೌಮ್ಯ ಸತೀಶ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಂಗ ಕಲಾವಿದ ಮಲ್ಲೇಶ ಮಕ್ಕಳಿಗೆ ಕನ್ನಡ ಭಾಷೆಯ ಇತಿಹಾಸ ಕುರಿತು ಮಾಹಿತಿ ನೀಡಿದರು. ಬಳಗದ ಸದಸ್ಯೆ ಪೂರ್ಣಿಮಾ ಬಸವರಾಜ, ಪ್ರಧಾನ ಕಾರ್ಯದರ್ಶಿ ಮಮತಾ ನಾಗರಾಜ, ಮಧುಮತಿ ಗಿರೀಶ, ಶಾಂತ ಶಿವಶಂಕರ, ದೀಪಾ ಕಿರಣ್, ಲತಾ ಕಪಾಳಿ, ಸುಜಾತಾ ಬಸವರಾಜ, ಗಿರಿಜಾ ಬಿಲ್ಲಳ್ಳಿ, ಸಾವಿತ್ರಮ್ಮ, ಪ್ರೇಮಾಲಯದ ಅಧ್ಯಕ್ಷೆ ಶೀಲಾ ನಲ್ಲೂರು, ವೃದ್ಧಾಶ್ರಮದ ತಾಯಂದಿರು, ಮಕ್ಕಳು, ಸಿಬ್ಬಂದಿ ಭಾಗವಹಿಸಿದ್ದರು.