ತರೀಕೆರೆ, ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದಲ್ಲಷ್ಟೆ ಅಲ್ಲದೇ ಜರ್ಮನಿ, ಅಮೇರಿಕಾ, ಕೆನಡಾ ಮುಂತಾದ ದೇಶಗಳಲ್ಲಿ ನೆಲೆಸಿ ರುವ ಆದಿ ವಾಸಿ ಭಾರತೀಯ ಕನ್ನಡಿಗರೆಲ್ಲರೂ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಜರ್ಮನಿ ಹೈಲ್‌ಬ್ರಾನ್ ನಗರದಲ್ಲಿ ನೆಲೆಸಿರುವ ಕನ್ನಡಿಗರು ಒಟ್ಟಾಗಿ ಸೇರಿ ಇದೇ ಮೊದಲ ಬಾರಿಗೆ ಹೈಲ್‌ಬ್ರಾನ್ ಕನ್ನಡ ಬಳಗ ರಚಿಸಿಕೊಂಡು ಎಲ್ಲದ್ದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಕನ್ನಡ ರಾಜ್ಯೊತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ ಎಂದು ಹೈಲ್‌ಬ್ರಾನ್ ಕನ್ನಡ ಬಳಗದ ಸಂಯೋಜಕ ಎಂ.ಪಿ. ನವೀನ್ ಕುಮಾರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ,ತರೀಕೆರೆ
ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದಲ್ಲಷ್ಟೆ ಅಲ್ಲದೇ ಜರ್ಮನಿ, ಅಮೇರಿಕಾ, ಕೆನಡಾ ಮುಂತಾದ ದೇಶಗಳಲ್ಲಿ ನೆಲೆಸಿ ರುವ ಆದಿ ವಾಸಿ ಭಾರತೀಯ ಕನ್ನಡಿಗರೆಲ್ಲರೂ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಜರ್ಮನಿ ಹೈಲ್‌ಬ್ರಾನ್ ನಗರದಲ್ಲಿ ನೆಲೆಸಿರುವ ಕನ್ನಡಿಗರು ಒಟ್ಟಾಗಿ ಸೇರಿ ಇದೇ ಮೊದಲ ಬಾರಿಗೆ ಹೈಲ್‌ಬ್ರಾನ್ ಕನ್ನಡ ಬಳಗ ರಚಿಸಿಕೊಂಡು ಎಲ್ಲದ್ದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಕನ್ನಡ ರಾಜ್ಯೊತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ ಎಂದು ಹೈಲ್‌ಬ್ರಾನ್ ಕನ್ನಡ ಬಳಗದ ಸಂಯೋಜಕ ಎಂ.ಪಿ. ನವೀನ್ ಕುಮಾರ್ ತಿಳಿಸಿದ್ದಾರೆ. ಎಂ.ಪಿ.ನವೀನ್ ಕುಮಾರ್ ಅವರ ತಂದೆ ಸಮೀಪದ ತಣಿಗೇಬೈಲು ಪರಮೇಶ್ವರಪ್ಪ ಈ ಮಾಹಿತಿ ನೀಡಿದ್ದು, ಜರ್ಮನಿಯ ಹೈಲ್‌ಬ್ರಾಮ್ ನಗರದಲ್ಲಿ ನೆಲೆಸಿರುವ 120 ಕ್ಕೂ ಅಧಿಕ ಕನ್ನಡಿಗರು ಒಟ್ಟಾಗಿ ಆಚರಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಪುಟಾಣಿ ಮಕ್ಕಳು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿದರು. ಸಮಾರಂಭ ಉದ್ದೇಶಿಸಿ ಮಾತನಾಡಿದ ಎಂ.ಪಿ ನವೀನ್ ಕುಮಾರ್ ಇದೇ ಮೊದಲ ಬಾರಿಗೆ ಹೈಲ್‌ಬ್ರಾನ್ ನಗರದಲ್ಲಿ ಕನ್ನಡಿಗರೆಲ್ಲರೂ ಒಟ್ಟಾಗಿ ಕನ್ನಡ ರಾಜ್ಯೋತ್ಸವ ವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಕನ್ನಡದ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ ಸನ್ಮಾನಿಸಲು ತೀರ್ಮಾನಿಸಲಾಗಿದೆ. ಈ ಭಾರಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಒಂದು ದಿನವಿಡಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದಲ್ಲದೇ ಪುಟಾಣಿಗಳಿಂದ ಭರತ ನಾಟ್ಯ, ಫ್ಯಾನ್ಸಿ ಡ್ರಸ್, ಫ್ಯಾಷನ್ ಶೋ, ಸ್ಪರ್ಧೆಗಳೊಂದಿಗೆ, ಮಹಿಳೆಯರಿಂದ ಕನ್ನಡದ ಗೀತೆಗಳಿಗೆ ನೃತ್ಯ, ಶಾಸ್ತ್ರೀಯ ನೃತ್ಯ, ಗೀತಾ ಗಾಯನ ಸ್ಪರ್ಧೆ, ದಂಪತಿ ಗಳಿಂದ ಆಟ,ಮುಂತಾದವುಗಳನ್ನು ನಡೆಸಲಾಯಿತು ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಹೈಲ್‌ಬ್ರಾಮ್ ಕನ್ನಡ ಬಳಗದ ಪದಾಧಿಕಾರಿಗಳಾದ ಸತ್ರ ಪ್ರಸಾದ್, ಎಂ. ದೀಕ್ಷಾ, ಸ್ನೇಹ, ಅರೀನಾ, ಅಶ್ವಿನಿ, ಪ್ರಜ್ವಲ, ಅಪೂರ್ವ, ಪುಷ್ವ, ಖುಷಿ, ಸಾನ್ವಿ,ಲೋಹಿತ, ತೇಜು, ಕಾರ್ತೀಕ್, ಅಮೂಲ್ಯ, ಸುಧೀಕ್ಷಾ ಸೇರಿದಂತೆ 120 ಮಂದಿ ಅನಿವಾಸಿ ಭಾರತೀಯ ಕನ್ನಡಿಗರೆಲ್ಲರೂ ಹಾಜರಿದ್ದು ವಿದೇಶದಲ್ಲಿ ಕನ್ನಡ ಕಂಪನ್ನು ಪಸರಿಸಿದರು. 27ಕೆಟಿಆರ್.ಕೆ.5ಃ
ಜರ್ಮನಿ ದೇಶದ ಹೈಲ್‌ಬ್ರಾನ್ ನಗರದ ಕನ್ನಡ ಬಳಗದವರಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಎಂ.ಪಿ ನವೀನ್ ಕುಮಾರ್, ಎಂ.ದೀಕ್ಷಾ, ಮತ್ತು ಪುಟಾಣಿಗಳು ಜ್ಯೋತಿ ಬೆಳೆಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.