ಕನ್ನಡ ರಾಜ್ಯೋತ್ಸವ ಆತ್ಮಗೌರವ, ಒಗ್ಗಟ್ಟಿನ ಸಂಕೇತ: ಡಾ. ಯೋಗೀಶ್

| Published : Nov 04 2025, 01:02 AM IST

ಕನ್ನಡ ರಾಜ್ಯೋತ್ಸವ ಆತ್ಮಗೌರವ, ಒಗ್ಗಟ್ಟಿನ ಸಂಕೇತ: ಡಾ. ಯೋಗೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಮೂಡುಬಿದಿರೆ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಕನ್ನಡ ಸಂಘ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಿತು.

ಮೂಡುಬಿದಿರೆ: ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಲ್ಲ. ಅದು ನಮ್ಮ ಗುರುತು, ಆತ್ಮಗೌರವ ಮತ್ತು ಒಗ್ಗಟ್ಟಿನ ಸಂಕೇತ. ಇಲ್ಲಿನ ಜನರ ಸಂಸ್ಕೃತಿ, ಭಾಷೆ, ಕಲೆ ಮತ್ತು ಧರ್ಮಗಳ ವೈವಿಧ್ಯತೆಯಿಂದಾಗಿ, ಕರ್ನಾಟಕವನ್ನು ಬಹುಸಂಸ್ಕೃತಿಯ ಆಡುಂಬೊಲವನ್ನಾಗಿಸಿದೆ ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಹೇಳಿದರು.

ಅವರು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಕರ್ನಾಟಕದ ಏಕೀಕರಣ ಸುದೀರ್ಘ ಕಾಲದ ಹೋರಾಟದ ಫಲವಾಗಿದ್ದು, ಈ ಹೋರಾಟವನ್ನು ಅರಿತುಕೊಳ್ಳುವುದರಿಂದ ಕನ್ನಡದ ಇತಿಹಾಸ ಪ್ರಜ್ಞೆ ಮತ್ತು ರಾಜ್ಯೋತ್ಸವದ ಮಹತ್ವ ಅರಿಯಲು ಸಾಧ್ಯ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆ ಹಾಗೂ ಹೆಚ್ಚಿನ ರಾಜ್ಯಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಇತರ ಕಾಲೇಜುಗಳಲ್ಲಿ ಶೇ.೮೫ ವಿದ್ಯಾರ್ಥಿಗಳು ಸ್ಥಳೀಯರಿದ್ದರೆ, ಶೇ.೧೫ ಮಂದಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬಂದಿರುತ್ತಾರೆ. ಆದರೆ ಆಳ್ವಾಸ್‌ನಲ್ಲಿ ಶೇ.೮೫ ಹೊರಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಇಂತಹ ವೈವಿಧ್ಯಮಯ ಸಹಬಾಳ್ವೆಯೇ ಆಳ್ವಾಸ್‌ನ ವೈಶಿಷ್ಟ್ಯ ಎಂದರು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು. ಕಾಲೇಜಿನ ಪ್ರಾಚಾರ‍್ಯ ಡಾ.ಪೀಟರ್ ಫರ್ನಾಂಡಿಸ್, ಪಾಲಕರಾದ ಮಾಧವ, ಕನ್ನಡ ಸಂಘದ ಸಂಚಾಲಕರಾದ ಪ್ರೊ.ಗಣೇಶ್ ಎಂ.ಆರ್‌., ಡಾ.ಗುರುಶಾಂತ್ ಬಿ. ವಗ್ಗರ್ ಇದ್ದರು. ಪ್ರನೂಷಾ ಕಾರ‍್ಯಕ್ರಮ ನಿರೂಪಿಸಿದರು.