ಅಂತಾರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಿರಿ ಪ್ರಶಸ್ತಿ ಪ್ರದಾನ

| Published : Aug 22 2025, 12:00 AM IST

ಸಾರಾಂಶ

ತರೀಕೆರೆ, ಗಮಕವಾಚನ, ಕನ್ನಡ ಗೀತ ಗಾಯನ, ಸಮಾಜ ಸೇವೆ, ಕನ್ನಡ ಸಾಹಿತ್ಯ ಸೇವೆ ಪರಿಗಣಿಸಿ ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಅವರನ್ನು ಕನ್ನಡ ಸಿರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.

ಪ್ರಪ್ರಥಮ ಸಮ್ಮೇಳನದಲ್ಲಿ ಪ್ರಪ್ರಥಮವಾಗಿ ಅಂತಾರಾಜ್ಯ ಸುನಿತಾ ಕಿರಣ್ ಗೆ ಕನ್ನಡ ಸಿರಿ ಪ್ರಶಸ್ತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಗಮಕವಾಚನ, ಕನ್ನಡ ಗೀತ ಗಾಯನ, ಸಮಾಜ ಸೇವೆ, ಕನ್ನಡ ಸಾಹಿತ್ಯ ಸೇವೆ ಪರಿಗಣಿಸಿ ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್ ಅವರನ್ನು ಕನ್ನಡ ಸಿರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.ಪ್ರಪ್ರಥಮವಾಗಿ ಅಂತಾರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಮಂತ್ರಾಲಯದಲ್ಲಿ ನಡೆಯಲಿದ್ದು ಈ ಸಮ್ಮೇಳನದಲ್ಲಿ ಸುನಿತಾ ಕಿರಣ್ ಅವರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ನಾಡೋಜ ಮಹೇಶ್ ಜೋಶಿ ಸಾರಥ್ಯದಲ್ಲಿ ತೆಲಂಗಾಣದ ರಾಜ್ಯಾಧ್ಯಕ್ಷ ಡಾ. ಗುಡಗುಂಟಿ ವಿಠ್ಠಲ, ಆಂಧ್ರಪ್ರದೇಶದ ರಾಜ್ಯಾಧ್ಯಕ್ಷ ಅಂಜನ್ ಕುಮಾರ್, ಮಹಾರಾಷ್ಟ್ರದ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ, ಗೋವಾ ಅಧ್ಯಕ್ಷ ಸಿದ್ದಣ್ಣ ಮೇಟಿ ಹಾಗೂ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಸೂರಿ ನಿವಾಸ ಸಂಪೂರ್ಣ ಸಹಕಾರ ಹಾಗೂ ಜಂಟಿ-ನೇತೃತ್ವದಲ್ಲಿ ಆಗಸ್ಟ್ 22 ರಂದು ಶುಕ್ರವಾರ ಕಸಾಪ ಇತಿಹಾಸದಲ್ಲಿ ಪ್ರಪ್ರಥಮ ಅಂತರ-ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಂಧ್ರಪ್ರದೇಶದ ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ನಡೆಯಲಿದ್ದು, ಈ ಸಮ್ಮೇಳನದಲ್ಲಿ ಕನ್ನಡ ಸಿರಿ ಪ್ರಶಸ್ತಿಗೆ ಸುನಿತಾ ಕಿರಣ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

-

21ಕೆಟಿಆರ್.ಕೆ.1ಃ ಸುನಿತಾ ಕಿರಣ್