ಸಾರಾಂಶ
ಹಿರಿಯೂರು: ಕಲಿಯೋಕೆ ಕೋಟಿ ಭಾಷೆ ಇದ್ದರೂ ಸಹ ಆಡೋಕೆ ಒಂದೇ ಭಾಷೆಯಾಗಿರುವ ನಮ್ಮ ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ರವೀಂದ್ರ ನಾಯಕ್ ಹೇಳಿದರು.
ಹಿರಿಯೂರು: ಕಲಿಯೋಕೆ ಕೋಟಿ ಭಾಷೆ ಇದ್ದರೂ ಸಹ ಆಡೋಕೆ ಒಂದೇ ಭಾಷೆಯಾಗಿರುವ ನಮ್ಮ ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ರವೀಂದ್ರ ನಾಯಕ್ ಹೇಳಿದರು.
ತಾಲೂಕಿನ ಯಲ್ಲದಕೆರೆಯ ಶ್ರೀ ಜ್ಞಾನಜ್ಯೋತಿ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ಪ್ರಜ್ಞೆ - ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ಭಾಷೆ ಸುಲಲಿತವಾದ ಮತ್ತು ಸುಂದರವಾದ ಭಾಷೆಯಾಗಿದೆ. ಈ ನೆಲದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಭಾಷೆಯ ಮೇಲೆ ಅಭಿಮಾನ ಗೌರವ ಇರಬೇಕು. ನಾಡು ನುಡಿಯ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು ಎಂದರು.
ಸಂಸ್ಥೆಯ ಮುಖ್ಯಸ್ಥ ಬಿ.ಜಿ.ಮನೋಹರ್ ಮಾತನಾಡಿ, ಕನ್ನಡದ ಏಕೀಕರಣ ಹಾಗೂ ಸ್ವತಂತ್ರ ಹೋರಾಟದಲ್ಲಿ ಕನ್ನಡಿಗರ ತ್ಯಾಗ ಬಲಿದಾನವನ್ನು ನಾವ್ಯಾರು ಮರೆಯಬಾರದು ಎಂದರು.ಶಾಲೆಯ ಮುಖ್ಯ ಶಿಕ್ಷಕ ಆರ್.ಬಿ.ಸುರೇಶ್ ಮಾತನಾಡಿ, ಕನ್ನಡದ ಇತಿಹಾಸ, ಕನ್ನಡ ನಾಡು ನುಡಿ, ಭಾಷೆ, ಕಲೆಗಾಗಿ ದುಡಿದ ಮಹನೀಯರ ಸಾಧನೆ ತುಂಬಾ ಹಿರಿದಾದದ್ದು ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಮಂಜುನಾಥ್, ಶಿಕ್ಷಕ ಹರೀಶ್, ಶಿಕ್ಷಕಿ ನಾಗವೇಣಿ, ಶಿಕ್ಷಕರಾದ ಟಿ.ರಂಗಸ್ವಾಮಿ, ವಿ.ರಂಗಸ್ವಾಮಿ, ಸೌಮ್ಯ ಮುಂತಾದವರು ಉಪಸ್ಥಿತರಿದ್ದರು.