ಕನ್ನಡ ಹೆಚ್ಚು ಬಳಕೆ ಮಾಡಬೇಕು. ಅಂದಾಗ ಮಾತ್ರ ಅದು ತಾನೇ ಬೆಳೆಯುತ್ತದೆ. ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿ ಎಲ್ಲವೂ ಸಮೃದ್ಧಿಯಾಗಿದೆ ಎಂದು ಹಿರಿಯ ಸಾಹಿತಿಗಳಾದ ಪುಣ್ಯವತಿ ವಿಸಾಜಿ ನುಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಕನ್ನಡ ಹೆಚ್ಚು ಬಳಕೆ ಮಾಡಬೇಕು. ಅಂದಾಗ ಮಾತ್ರ ಅದು ತಾನೇ ಬೆಳೆಯುತ್ತದೆ. ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿ ಎಲ್ಲವೂ ಸಮೃದ್ಧಿಯಾಗಿದೆ ಎಂದು ಹಿರಿಯ ಸಾಹಿತಿಗಳಾದ ಪುಣ್ಯವತಿ ವಿಸಾಜಿ ನುಡಿದರು.ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೀದರ.ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಕನ್ನಡ ನಾಡು ನುಡಿ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿ, ತಾಲೂಕು ಕಸಾಪ ಅಧ್ಯಕ್ಷರಾದ ಟಿ ಎಂ ಮಚ್ಚೆ ಆಶಯ ನುಡಿಗಳನ್ನಾಡಿ ಗಡಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡಬೇಕು. ಗಡಿಯಲ್ಲಿರುವ ಕನ್ನಡವನ್ನು ಶುದ್ಧಿ ಮಾಡಬೇಕು. ಮಿಶ್ರ ಭಾಷೆಯಿಂದ ಕನ್ನಡ ಹೊರ ತರುವ ಪ್ರಯತ್ನ ಮಾಡಬೇಕೆಂದರು.
ಸಿದ್ಧಾರೂಢ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ನಾಗಪ್ಪ ಜಾನಕನೂರ್ ವಿಶೇಷ ಉಪನ್ಯಾಸ ನೀಡಿ ಕನ್ನಡ ನಾಡು ನುಡಿ ಉಳಿಯ ಬೇಕಾದರೆ ಹೆಚ್ಚು ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಸಬೇಕು. ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ನುಡಿದರು.ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಬೀದರನ ಪ್ರಾಚಾರ್ಯ ಪ್ರೊ.ಮನೋಜಕುಮಾರ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಅನ್ಯ ಭಾಷಿಕರಿಗೆ ಕಲಿಸುವುದು ಬಹಳ ಮುಖ್ಯ. ಕನ್ನಡಿಗರು ಮಾತನಾಡುತ್ತಾರೆ. ಕನ್ನಡ ಜ್ಞಾನದ ಕೊರತೆ ಯಾರಿಗೆ ಇದೆಯೋ ಅವರು ಕಲಿಸಬೇಕು ಎಂದು ನುಡಿದರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ.ಮಕ್ತುಂಬಿ ಎಂ. ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಪುಸ್ತಕಗಳನ್ನು ಮಕ್ಕಳಿಗೆ ಕೊಟ್ಟರೆ ಅವರು ಓದುವತ್ತ ಮನಸ್ಸು ಮಾಡುತ್ತಾರೆ. ಒಂದು ಸಲ ಓದುವ ಹವ್ಯಾಸ ಬೆಳೆಸಿಕೊಂಡರೆ ಅವರು ಮುಂದುವರೆಸಿಕೊಂಡು ಹೋಗು ತ್ತಾರೆ. ಮಕ್ಕಳಿಗೆ ಬೆಳೆಸುವ ಕಾರ್ಯಾಚರಣೆ ನಡೆಸಬೇಕು ಎಂದು ಹೇಳಿದರು.ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರೊ.ಶ್ರೀಕಾಂತ ಪಾಟೀಲ್ ಮಾತನಾಡಿದರು. ಪ್ರೊ.ಶ್ರೀನಿವಾಸ ಸ್ವಾಗತಿಸಿದರೆ, ಡಾ.ಮನೋಹರ ನಿರೂಪಿಸಿದರು. ಪಾರ್ವತಿ ಮೇತ್ರೇ ವಂದಿಸಿದರು.