ಪರ್ಮಿಟ್ ಪಡೆದು ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಕನ್ನಡಪರ ಸಂಘಟನೆಗಳ ಮುಖಂಡರು ಅಡ್ಡಗಟ್ಟಿ ಚಾಲಕನಿಗೆ ಬೆದರಿಕೆ ಹಾಕಿ 10,000 ರು. ಫೋನ್‌ಪೇ ಮೂಲಕ ವಸೂಲಿ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನರೀಪುರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಣ ಕೊಡದಿದ್ದರೆ ಸುಳ್ಳು ಕೇಸಿಂದ ಜೈಲಿಗಟ್ಟುವ ಬೆದರಿಕೆ
ಯುವ ಕರ್ನಾಟಕ ವೇದಿಕೆಯ ಮೂವರ ಬಂಧಿಸಿದ ಖಾಕಿ----------ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪರ್ಮಿಟ್ ಪಡೆದು ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಕನ್ನಡಪರ ಸಂಘಟನೆಗಳ ಮುಖಂಡರು ಅಡ್ಡಗಟ್ಟಿ ಚಾಲಕನಿಗೆ ಬೆದರಿಕೆ ಹಾಕಿ 10,000 ರು. ಫೋನ್‌ಪೇ ಮೂಲಕ ವಸೂಲಿ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ನರೀಪುರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಯುವ ಕರ್ನಾಟಕ ವೇದಿಕೆಯ ಜಿಲ್ಲಾಧ್ಯಕ್ಷ ಮೊಹಮ್ಮದ್ ಅಯಾಜ್ (ಅಯಾಜ್ ಕನ್ನಡಿಗ), ಜಿಲ್ಲಾ ಸಲಹಾ ಗೌರವಾಧ್ಯಕ್ಷ ಇದ್ರೀಷ್ ಪಾಷಾ ಹಾಗೂ ತೋಸಿಫ್ ಬಂಧಿತರು.
ಏನಿದು ಪ್ರಕರಣ:ಜು.14ರಂದು ಮಧ್ಯರಾತ್ರಿ ಕನಕಪುರ ತಾಲೂಕಿನ ಶಿವಮಾದು ಎಂಬುವರು ತಮ್ಮ ಟಿಪ್ಪರ್ ಚಲಾಯಿಸಿಕೊಂಡು ನರೀಪುರ ಗ್ರಾಮದಲ್ಲಿ ಬರುತ್ತಿದ್ದರು. ಈ ವೇಳೆ ಮೂವರು ಆರೋಪಿಗಳು ಕಾರಿನಲ್ಲಿ ಬಂದು ಟಿಪ್ಪರ್ ಅಡ್ಡಗಟ್ಟಿದ್ದಾರೆ. ಬಳಿಕ ಲಾರಿಯನ್ನು ಏರಿ, ‘ನಿನ್ನ ವಿರುದ್ಧ ನಕಲಿ ಕೇಸು ಹೂಡಿ ಲಾರಿಯನ್ನು ಜಪ್ತಿ ಮಾಡಿಸಿ, ಜೈಲಿಗಟ್ಟುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಜೊತೆಗೆ ‘ಹಣ ಕೊಡದಿದ್ದರೆ ಲಾರಿ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿ 10,000 ರು. ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಲಾರಿಯನ್ನು ಕಳುಹಿಸಿದ್ದಾರೆ ಎಂದು ಚಾಲಕ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಶಿವಮಾದು ನೀಡಿದ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ವ್ಯಾಪಕ ಚರ್ಚೆ:
ಕನ್ನಡಪರ ಸಂಘಟನೆಗಳ ಮುಖಂಡರೇ ಈ ರೀತಿ ಸುಲಿಗೆಗೆ ಇಳಿದಿರುವ ಬಗ್ಗೆ ಹೋರಾಟಗಾರರಿಂದಲೇ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ನೊಂದವರಿಗೆ ನ್ಯಾಯ ಕೊಡಿಸಬೇಕಾದ ಸಂಘಟನೆಗಳೇ ದುರ್ಬಳಕೆ ಮಾಡಿಕೊಂಡು ವಸೂಲಿಗಿಳಿದರೆ, ಇಂಥಹವರಿಂದ ಹೇಗೆ ಹೋರಾಟ, ನ್ಯಾಯ ನಿರೀಕ್ಷಿಸಲು ಸಾಧ್ಯವೆಂದು ಸಂಘಟನೆಯ ಮುಖಂಡರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.--16ಕೆಜಿಎಲ್20 ಅಯಾಜ್16ಕೆಜಿಎಲ್21 ಇದ್ರೀಶ್ ಪಾಶಾ16ಕೆಜಿಎಲ್222 ತೋಸಿಫ್