ಕನ್ನಡದ ಸಾಹಿತಿ, ಕವಿಗಳಿಗೆ ಪ್ರೋತ್ಸಾಹ ಅಗತ್ಯ: ವೆಂಕಟೇಶ್

| Published : Jul 01 2025, 12:48 AM IST

ಕನ್ನಡದ ಸಾಹಿತಿ, ಕವಿಗಳಿಗೆ ಪ್ರೋತ್ಸಾಹ ಅಗತ್ಯ: ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರೂ ಸಹ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡಬೇಕು. ಎಲ್ಲೆಡೆ ಕನ್ನಡ ಅಭಿಮಾನ ಮೊಳಗಬೇಕು. ಹೀಗಾದಾಗ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಪ್ರಸ್ತುತ ದಿನಗಳಲ್ಲಿ ಕನ್ನಡದ ಸಾಹಿತಿಗಳು, ಕವಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಕರ್ನಾಟಕ ಭೋವಿ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಚ್.ಎಚ್. ವೆಂಕಟೇಶ್ ತಿಳಿಸಿದರು.ನಗರದ ಕನ್ನಡ ಭವನದಲ್ಲಿ ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ಟ್ರಸ್ಟ್, ಗುಬ್ಬಿ, ಕಸಾಪ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕ ಗುಬ್ಬಿ ಮತ್ತು ಶ್ರೀಗಂಧ ಸಾಹಿತ್ಯ ಸಾಂಸ್ಕೃತಿಕ ಕಲಾ ಬಳಗದ ಸಂಯುಕ್ತಾಶ್ರಯದಲ್ಲಿ 3ನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ಪುಸ್ತಕ ಮತ್ತು ಸಾಹಿತ್ಯ ನಿಧಿ ಮಾಸ ಪತ್ರಿಕೆ ಬಿಡುಗಡೆ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಪ್ರತಿಯೊಬ್ಬರೂ ಸಹ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡಬೇಕು. ಎಲ್ಲೆಡೆ ಕನ್ನಡ ಅಭಿಮಾನ ಮೊಳಗಬೇಕು. ಹೀಗಾದಾಗ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.ಇಂದಿನ ಯುವ ಸಮೂಹ ಕನ್ನಡದ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಹೆಚ್ಚು ಒಲವು ತೋರಬೇಕು. ಇಂತಹ ಕಾರ್ಯಕ್ರಮಗಳಿಗೆ ತಾವು ಬರುವ ಜತೆಗೆ ತಮ್ಮೊಂದಿಗೆ ಮತ್ತಷ್ಟು ಜನರನ್ನು ಕರೆ ತರಬೇಕು. ಈ ಮೂಲಕ ಕನ್ನಡತನವನ್ನು ಇನ್ನಷ್ಟು ಪಸರಿಸಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.ಸಮ್ಮೇಳನದ ಅಧ್ಯಕ್ಷರು, ಕವಿಗಳು ಹಾಗೂ ಶಿಕ್ಷಕರಾದ ಗೀತಾ ಲೋಕೇಶ್ ಮಾತನಾಡಿ, ಕನ್ನಡ ಸಾಹಿತ್ಯ, ಕವನ ಸಂಕಲನ, ಕವಿತೆಗಳ ಬಗ್ಗೆ ಇಂದಿನ ಯುವ ಸಮೂಹ ಹೆಚ್ಚು ಆಸಕ್ತರಾಗುವ ಅಗತ್ಯವಿದೆ. ಸದಾ ಮೊಬೈಲ್‌ನಲ್ಲೇ ಮುಳುಗುವ ಯುವ ಸಮೂಹ ಮೊಬೈಲ್ ಬದಿಗಿಟ್ಟು ಕನ್ನಡ ಪ್ರೇಮ ಬೆಳೆಸಿಕೊಂಡರೆ ನಮ್ಮ ನಾಡಿನ ಹಿತ ಕಾಪಾಡಲು ಮತ್ತಷ್ಟು ಅನುಕೂಲವಾಗಲಿದೆ ಎಂದರು.ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಸಂಸ್ಥಾಪಕ ಹಾಗೂ ಕವಿ ಅಂಜನ್‌ಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯ, ಕವಿತೆಗಳನ್ನು ಇಂದು ಮೂಲೆ ಗುಂಪು ಮಾಡಲಾಗುತ್ತಿದೆ. ಕರ್ನಾಟಕ ಶ್ರೀಮಂತ ರಾಜ್ಯವಾಗಲು ಕವಿಗಳು ಕಾರಣ. ಹಾಗೆಯೇ ರಾಜ್ಯದ ಅಭಿವೃದ್ಧಿಗೆ ಸಾಹಿತ್ಯದ ಕೊಡುಗೆಯೂ ಇದೆ. ಕವಿಗಳ ಶ್ರಮವೂ ಅಪಾರವಾಗಿದೆ ಎಂದರು.ಸಾಹಿತಿಗಳು, ಕವಿಗಳಿಗೆ ಪ್ರೋತ್ಸಾಹ ನೀಡಲು ಹನಿ ನಿಧಿ ಸಾಹಿತ್ಯ ಸಾಂಸ್ಕöÈತಿಕ ಕಲಾ ಟ್ರಸ್ಟ್ ಸ್ಥಾಪಿಸಲಾಗಿದೆ. ನಮ್ಮ ಬಳಗದ ವತಿಯಿಂದ ಸಾಹಿತ್ಯ ನಿಧಿ ಮಾಸ ಪತ್ರಿಕೆ ಹೊರ ತರುತ್ತಿದ್ದೇವೆ. ಪುಸ್ತಕ, ಪತ್ರಿಕೆ ಹೊರತುವುದು ಸುಲಭದ ಮಾತಲ್ಲ. ಇದಕ್ಕೆ ಸಹಾಯವಾಗಲಿ ಎಂದು ನಮ್ಮ ಸಂಸ್ಥೆ ವತಿಯಿಂದ ಪ್ರಕಾಶನ ಮಾಡಲಾಗುತ್ತಿದೆ ಎಂದರು.ಮೂಲೆ ಗುಂಪಾಗಿರುವ ಎಷ್ಟೋ ಜನ ಬರಹಗಾರರು, ಕವಿಗಳು ಹಾಗೂ ಸಾಧಕರನ್ನು ಗುರುತಿಸಬೇಕು ಎಂದ ಉದ್ದೇಶದಿಂದ ನಮ್ಮ ಟ್ರಸ್ಟ್ ಸ್ಥಾಪನೆ ಮಾಡಾಗಿದೆ ಎಂದು ಅವರು ತಿಳಿಸಿದರು.ಗುಬ್ಬಿ ಕಸಾಪ ಅಧ್ಯಕ್ಷ ಹೆಚ್.ಪಿ. ಯತೀಶ್ ಮಾತನಾಡಿ, ಮನುಷ್ಯನ ಬದುಕಿಗೆ ಹಲವಾರು ಮುಖಗಳಿವೆ. ಅದನ್ನು ಪ್ರಕಟಿಸುವ ಅನೇಕ ಸಂದರ್ಭಗಳು ಮನುಷ್ಯನಿಗೆ ಒದಗಿ ಬರುತ್ತವೆ. ಅಂತಹ ಭಾವನೆ, ಅನಿಸಿಕೆ, ಯೋಚನೆಗಳನ್ನು ಕಾವ್ಯ ರೂಪಕ್ಕೆ ಇಳಿಸುವಲ್ಲಿ ಅಂಜನ್‌ಕುಮಾರ್ ಯಶಸ್ವಿಯಾಗಿದ್ದಾರೆ ಎಂದರು.ಕಾಲ್ಗೆಜ್ಜೆ ಕವನ ಸಂಕಲವನ್ನು ಸಹೃದಯ ಓದುಗ ಓದುವ ಸಂದರ್ಭದಲ್ಲಿ ಅವರ ಆಶಯಕ್ಕೆ ತಕ್ಕಂತೆ ಓದುತ್ತಾನೆ. ಓದುಗನೇ ಅರ್ಥೈಸಿಕೊಂಡಾಗ ಕವನ ಸಂಕಲನಗಳು ಅರ್ಥವಾಗುತ್ತವೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಅಂಜನ್‌ಕುಮಾರ್ ರವರ ಕಾಲ್ಗೆಜ್ಜೆ ಕವನ ಸಂಕಲವನ್ನು ಬಿಡುಗಡೆ ಮಾಡಲಾಯಿತು ಹಾಗೂ ಲಕ್ಷ್ಮೀಪುರ ಜಿ. ಶ್ರೀನಿವಾಸ್, ಬೇರ್ಗಿ ಜಯಶ್ರೀ ಹಾಗೂ ಕಂಸಾಳೆ ಧನುಷ್ ರವರಿಗೆ ಹನಿ ನಿಧಿ ರಾಜ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ರಾಮಕೃಷ್ಣಯ್ಯ, ಬಡವನಹಳ್ಳಿ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ರಮೇಶ್ ಡಿ.ಆರ್., ಇಂಜಿನಿಯರ್ ತ್ರಿಮೂರ್ತಿ ಕೆ., ಕರ್ನಾಟಕ ಭೋವಿ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಚ್.ಎಚ್. ವೆಂಕಟೇಶ್, ಕವಿಗಳಾದ ಡಾ. ಮುಮು, ಕಾಂತರಾಜು ಗುಪಟ್ನ, ಮಧುಸೂಧನ್ ಮುಳುಕುಂಟೆ, ನಾಟಕ ಭಾರ್ಗವ ಕೆಂಪರಾಜು ಮತ್ತಿತರರು ಉಪಸ್ಥಿತರಿದ್ದರು.