ಸಾರಾಂಶ
ಹೊಸದುರ್ಗ: ತಾಯಿ ನೆಲದ ಕನ್ನಡಮ್ಮನ ಸೇವೆ ಅತ್ಯಂತ ಪುಣ್ಯದ ಕೆಲಸವಾಗಿದ್ದು, ಕನ್ನಡಮ್ಮನ ಸೇವೆಯನ್ನು ಪ್ರತಿಯೊಬ್ಬ ಕನ್ನಡಿಗನು ಮಾಡುವ ಮೂಲಕ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ನೆಲ, ಜಲ ಸಂರಕ್ಷಣೆ ಮಾಡಬೇಕು ಎಂದು ಹೈಕೋರ್ಟ್ ನ ವಿಶ್ರಾಂತ ನ್ಯಾಯಧೀಶರಾದ ಎಚ್.ಬಿಲ್ಲಪ್ಪ ಕರೆ ನೀಡಿದರು.
ಪಟ್ಟಣದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಎಸ್‌ಎಸ್ಎಲ್ಸಿಯಲ್ಲಿ 125ಕ್ಕೆ 125 ಮತ್ತು ಪಿಯುಸಿಯಲ್ಲಿ 100ಕ್ಕೆ 100 ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕಿತ್ತೂರು ರಾಣಿ ಚೆನ್ನಮ್ಮ, ಸಾವಿತ್ರಿಬಾಯಿ ಪುಲೆ, ಕನಕ ದಾಸರ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಹೆಚ್ಚು ವಿದ್ಯಾವಂತರಾದರೆ ಗ್ರಾಮದ, ನಾಡಿನ, ರಾಷ್ಟ್ರದ ಬದಲಾವಣೆ ಮಾಡಲು ಸಾಧ್ಯ. ಶಿಕ್ಷಣ ಕೊಡಿಸುವಲ್ಲಿ ಪೋಷಕರು ಹಿಂದೆ ಬಿಳಬಾರದು. ಕನ್ನಡ ನಾಡು ಕಟ್ಟಲು ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ಹಾಗೇಯೇ ದಾಸರು, ಶರಣರು, ಸಂತರು, ಕವಿ ಪುಂಗರು ಅವರದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ನೆಲದಲ್ಲಿ ಏನೆಲ್ಲ ವಿಪುಲ ಸಂಪತ್ತು ಇದೆ. ವಿದ್ಯಾವಂತರಾದ ನಾವುಗಳು ಅವುಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದರು.
ಕನ್ನಡ ಜಾನಪದ ಪರಿಷತ್ತಿ ನ ಜಿಲ್ಲಾಧ್ಯಕ್ಷ ಬಾ.ಮೈಲಾರಪ್ಪ ಮಾತನಾಡಿದರು.ಇದೆ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಬಿ.ಪಿ.ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆಗ್ರೋ ಶಿವಣ್ಣ, ಕವಿ ಇಲ್ಕಲ್ ಅಶೋಕ್ ಕುಮಾರ್, ಕಸಾಪ ಮತ್ತೋಡು ಹೋಬಳಿ ಘಟಕದ ಅಧ್ಯಕ್ಷ ರಮೇಶ್, ಡಿ.ಟಿ.ಚಂದ್ರಶೇಖರ್, ಕಸಾಪ ಮಾಜಿ ಕಾರ್ಯದರ್ಶಿಗಳಾದ ರುದ್ರಸ್ವಾಮಿ, ಚಿಕ್ಕಮುದ್ದು, ಕಾರ್ಯದರ್ಶಿ ಸುಮತಿ ಕುಮಾರ್, ಅಶೋಕ ಕಬ್ಲ್ ನ ಅಧ್ಯಕ್ಷ ಎಸ್.ಶಂಕರಪ್ಪ, ಶಿಕ್ಷಕರಾದ ಅಂಬರೀಶ್, ಬಿಜೆಪಿ ಮುಖಂಡರಾದ ತುಂಬಿನಕೆರೆ ಬಸವರಾಜ್, ಗೂಳಿಹಟ್ಟಿ ಕೃಷ್ಣಮೂರ್ತಿ, ಕವಯಿತ್ರಿ ಎಂ.ಆರ್.ನಳಿನ, ಸಮಾಜ ಸೇವಕಿ ನಾಗಲಾಬಿಂಕ ಕಲ್ಮಠ್, ಶಿಕ್ಷಕಿ ಶಬಿನಾ ಬಾನು, ಬಿ.ಒ.ಶೋಭ, ಗೀತಾಸಿಂಗ್, ಪರಮ್ಮ, ಪೀಲಾಪುರ.ಆರ್ ಕಂಠೇಶ್ ಮುಂತಾದವರು ಉಪಸ್ಥಿತರಿದ್ದರು.