ಕನ್ನಡ ಭಾಷೆಗೆ ಹೊಸ ಶಕ್ತಿ ನೀಡಿದ ಕನ್ನಡಪ್ರಭ

| Published : Aug 13 2024, 12:59 AM IST

ಕನ್ನಡ ಭಾಷೆಗೆ ಹೊಸ ಶಕ್ತಿ ನೀಡಿದ ಕನ್ನಡಪ್ರಭ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭವು ಕನ್ನಡ ಭಾಷೆಗೆ ಒಂದು ಹೊಸ ಶಕ್ತಿ ನೀಡಿದ ದಿನಪತ್ರಿಕೆಯಾಗಿದ್ದು, ಸದಾ ಸರ್ಕಾರಗಳ ಅನೇಕ ಲೋಪದೋಷಗಳನ್ನು ಬಿತ್ತರಿಸುವ ಮತ್ತು ಉತ್ತಮ ಕಾರ್ಯ ಮಾಡಿದಾಗ ಪ್ರಶಂಸಿಸುವ ಕಾರ್ಯ ಮಾಡುತ್ತಿದೆ ಎಂದು ಪಟ್ಟಣದ ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಕನ್ನಡಪ್ರಭವು ಕನ್ನಡ ಭಾಷೆಗೆ ಒಂದು ಹೊಸ ಶಕ್ತಿ ನೀಡಿದ ದಿನಪತ್ರಿಕೆಯಾಗಿದ್ದು, ಸದಾ ಸರ್ಕಾರಗಳ ಅನೇಕ ಲೋಪದೋಷಗಳನ್ನು ಬಿತ್ತರಿಸುವ ಮತ್ತು ಉತ್ತಮ ಕಾರ್ಯ ಮಾಡಿದಾಗ ಪ್ರಶಂಸಿಸುವ ಕಾರ್ಯ ಮಾಡುತ್ತಿದೆ ಎಂದು ಪಟ್ಟಣದ ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.

ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಕನ್ಯಾ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರುವ ಯುವಕ ಯುವತಿಯರಿಗೆ ಹೆಚ್ಚು ಲಾಭವನ್ನು ನೀಡುವಲ್ಲಿ ಕನ್ನಡಪ್ರಭ ದಿನಪತ್ರಿಕೆ ಕಾರ್ಯ ಶ್ಲಾಘನೀಯ ಎಂದರು.ನಿವೃತ್ತ ಶಿಕ್ಷಕ ಶಿವಕುಮಾರ ಶಿವಶಿಂಪಿಗೇರ ಮಾತನಾಡಿ, ಒಂದು ಕಾಲದಲ್ಲಿ ಪತ್ರಿಕೆಗೆ ಹೆಚ್ಚು ಬೇಡಿಕೆ ಇತ್ತು. ಆದರೆ, ಇಂದು ವಿಜ್ಞಾನದ ಮತ್ತು ತಂತ್ರಜ್ಞಾನ ಪ್ರಭಾವದಿಂದ ಪತ್ರಿಕೆಗಳನ್ನು ಓದುವ ಹವ್ಯಾಸಿಗಳು ಕಡಿಯಾಗುತ್ತಿದ್ದಾರೆ. ಆದರೂ ಕನ್ನಡದ ಹೆಮ್ಮೆಯ ದಿನಪತ್ರಿಕೆ ಕನ್ನಡಪ್ರಭ ಅದರ ಸ್ವಭಾವವನ್ನು ಎಂದೂ ಕಡಿಮೆ ಮಾಡಿಕೊಂಡಿಲ್ಲ. ನೈಜವಾದ ಮತ್ತು ಎಚ್ಚರಿಸುವ ಸುದ್ದಿಗಳು ವ್ಯವಸ್ಥಿತವಾಗಿ ಮೂಡಿ ಬರುತ್ತಿವೆ. ಮಕ್ಕಳು ಪತ್ರಿಕೆಗಳನ್ನು ಹೆಚ್ಚೆಚ್ಚು ಓದಬೇಕು, ದಿನಪತ್ರಿಕೆಗಳು ಜ್ಞಾನವನ್ನು ವೃದ್ಧಿ ಮಾಡುತ್ತವೆ ಎಂದು ತಿಳಿಸಿದರು.ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಕನ್ನಡಪ್ರಭ ದಿನಪತ್ರಿಕೆ ಸರ್ಕಾರ ಸಾರ್ವಜನಿಕವಾಗಿ ನೀಡಿರುವ ಅನೇಕ ಯೋಜನೆಗಳನ್ನು ಕರಾರುವಕ್ಕಾಗಿ ಪತ್ರಿಕೆಯಲ್ಲಿ ಪ್ರಕಟ ಪಡಿಸುವ ಹೆಮ್ಮೆಯ ದಿನಪತ್ರಿಕೆಯಾಗಿದೆ. ಸಾರ್ವಜನಿಕ ಸಮಸ್ಯೆಗಳನ್ನು ಎತ್ತಿ ಹಿಡಿದು ಸರ್ಕಾರಕ್ಕೆ ಛೀಮಾರಿ ಹಾಕಿರುವ ಅನೇಕ ಪ್ರಕರಣಗಳನ್ನು ಈ ದಿನಪತ್ರಿಕೆ ಮಾಡುತ್ತಿರುವುದು ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ವೇಳೆ ಶಾಲೆಯ 10ನೇ ತರಗತಿಯ ನೂರು ಮಕ್ಕಳಿಗೆ ಕನ್ನಡಪ್ರಭ ದಿನಪತ್ರಿಕೆಗಳನ್ನು ನೀಡಿ ಅದರ ಓದಿನ ಕ್ರಮವನ್ನು ನಂತರ ಪರೀಕ್ಷೆಯ ಕ್ರಮವನ್ನು ಸಂಯೋಜಕ ಶಿಕ್ಷಕ ಆರ್.ವೈ.ಪರೀಟ ಮಕ್ಕಳಿಗೆ ವಿವರಿಸಿದರು.ಸಪ್ರಾಹ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಮುತ್ತು ಪಟ್ಟಣಶೆಟ್ಟಿ, ಭೀಮನಗೌಡ ಬಿರಾದಾರ, ಸತೀಶ ಬಿರಾದಾರ, ಶಾಲಾ ಮುಖ್ಯೋಪಾಧ್ಯಯ ಎಸ್.ಆರ್.ನಾಯಕ, ಎಸ್.ಎಸ್.ಹತ್ತಿ, ಸಪ್ತಾಹದ ಸಂಚಾಲಕ ಸಿದ್ದಲಿಂಗ ಕಿಣಗಿ ಸೇರಿದಂತೆ ಅನೇಕರು ಇದ್ದರು.

ಮಕ್ಕಳಿಗೆ ಸೋಮವಾರದಿಂದ ಶನಿವಾರದವರೆಗೆ ಕನ್ನಡಪ್ರಭ ಪತ್ರಿಕೆಗಳನ್ನು ನೀಡಿ ಅದರಲ್ಲಿನ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಘಟನೆಗಳ ಬಗ್ಗೆ ಬಹು ಆಯ್ಕೆಯ ಪ್ರಶ್ನೆಗಳ ಮೂಲಕ ಪರೀಕ್ಷೆ ನಡೆಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಬಂದ ಮಕ್ಕಳಿಗೆ ಬಹುಮಾನ ನೀಡುತ್ತಿರುವ ಕನ್ನಡಪ್ರಭ ಬಳಗಕ್ಕೆ ಅಭಿನಂದನೆಗಳು. ತಮ್ಮ ತಂದೆಯವರಾದ ದಿ.ಎಂ.ಸಿ.ಮನಗೂಳಿ ಅವರ ಹೆಸರಿನ ಎಂ.ಸಿ.ಮನಗೂಳಿ ಪ್ರತಿಷ್ಠಾನದಿಂದ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ನಗದು ಬಹುಮಾನ ನೀಡಲಾಗುವುದು.

-ಅರವಿಂದ ಮನಗೂಳಿ,

ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ.ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಮಹತ್ವ ನೀಡಬೇಕು. ಮಾನಸಿಕ ವಿಕಾಸಕ್ಕೆ ಕನ್ನಡ ದಿನಪತ್ರಿಕೆಗಳು ಅದರಲ್ಲಿ ಕನ್ನಡಪ್ರಭದಂತಹ ದಿನಪತ್ರಿಕೆಗಳ ಪಾತ್ರ ಮುಖ್ಯವಾಗಿದೆ. ಅತ್ಯಂತ ವಿಶ್ವಾಸರ್ಹವಾದ ಕನ್ನಡ ದಿನಪತ್ರಿಕೆ ಕನ್ನಡಪ್ರಭ ದಿನಪತ್ರಿಕೆ ಅದರಲ್ಲಿ ಮೂಡಿ ಬರುವ ವಿಷಯಗಳು ಹೆಚ್ಚು ತೂಕಬದ್ದವಾಗಿವೆ. ಅದರಲ್ಲಿ ಕ್ರೀಡೆ, ವಾಣಿಜ್ಯ, ಶಿಕ್ಷಣ, ಆಧ್ಯಾತ್ಮಿಕ, ರಾಜಕೀಯ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳ ಮಾಹಿತಿಗಳು ಅತ್ಯಂತ ವಸ್ತುನಿಷ್ಠವಾಗಿ ಮೂಡಿ ಬರುತ್ತವೆ. ಕನ್ನಡಪ್ರಭ ಸಪ್ತಾಹ ಕಾರ್ಯ ಯಶಸ್ವಿಯಾಗಿ ಸಾಗಲಿ.

-ಎ.ಆರ್.ಹೆಗ್ಗನದೊಡ್ಡಿ,
ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ.