ಸಾರಾಂಶ
ರಥೋತ್ಸವಕ್ಕೆ ಮೆರುಗು ನೀಡಿದ ಕೇರಳ ಚಂಡೆ ವಾದ್ಯ, ನಾಗರಿ ತಮಟೆಯ ತಾಳಕ್ಕೆ ಗ್ರಾಮದ ಮುಖಂಡರು ಹಾಗೂ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ತಾಲೂಕಿನ ಶಕ್ತಿ ದೇವತೆ ಕನ್ನಂಬಾಡಿ ಅಮ್ಮನವರ ರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಕಳೆದ ಮೂರು ದಿನಗಳ ಹಿಂದೆ ನದಿಯಲ್ಲಿ ದೇವಿಯ ಮೂರ್ತಿಯನ್ನು ಶುಚಿಗೊಳಿಸಿ ಪುಣ್ಯ ತೀರ್ಥ ಸ್ನಾನ ನೆರವೇರಿಸಿದ ಬಳಿಕ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಕರೆತರಲಾಯಿತು. ಈ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನೆರೆವೇರಿತು.
ರಥೋತ್ಸವದ ಮಂಗಳವಾರ ಬೆಳಗ್ಗೆ ಉತ್ಸವ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕರಿಸಿ ನಂತರ ವಿವಿಧ ರೀತಿಯ ಹೂ ಮತ್ತು ಬಾವುಟಗಳಿಂದ ಅಲಂಕಾರಯುತಗೊಂಡ ರಥದ ಬಳಿಗೆ ಪ್ರದಕ್ಷಿಣೆ ಮಾಡಿ ರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿದ ಬಳಿಕ ಭಕ್ತರು ಜಯ ಘೋಷಗಳೊಂದಿಗೆ ಬೆಳಗ್ಗೆ 10.30 ರಿಂದ 12.15 ರೊಳಗೆ ಸಲ್ಲುವ ವೃಷಭ ಲಗ್ನದಲ್ಲಿ ರಥವನ್ನು ಎಳೆಯಲಾಯಿತು.ಭಕ್ತರು ತಮ್ಮ ಇಷ್ಟಾರ್ಥ ಹಿಡೇರಿಕೆಗೆ ಪ್ರಾರ್ಥಿಸಿ, ಹಣ್ಣು ಧವನ ಎಸೆದು ಭಕ್ತಿ ಮೆರೆದರು.
ಮಾ. 12ರಂದು ಆಶ್ವರೋಹಣ ಮತ್ತು 13ರಂದು ತೆಪ್ಪೋತ್ಸವ ಜರುಗಲಿದೆ.ರಥೋತ್ಸವಕ್ಕೆ ಮೆರುಗು ನೀಡಿದ ಕೇರಳ ಚಂಡೆ ವಾದ್ಯ, ನಾಗರಿ ತಮಟೆಯ ತಾಳಕ್ಕೆ ಗ್ರಾಮದ ಮುಖಂಡರು ಹಾಗೂ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಮಲೆ ಮಾದೇಶ್ವರ ಫಿಯೋಲ್ ಸ್ಟೇಷನ್ ಮಾಲೀಕರಾದ ಮೋಹನ್ ಕುಮಾರ್ ಅವರು ವರದರಾಜ್ ಮತ್ತು ಕುಟುಂಬದ ಸದಸ್ಯರಾದ ವಾಣಿ, ವಿದ್ಯಾ, ಲೋಕೇಶ್, ಲಿಖಿತ್, ಕೌಶಿಭಾ ಹಾಗೂ ವಿವಿಧ ಸಂಘ-ಸಂಸ್ಥೆಗಳು ಪಾನಕ, ಮಜ್ಜಿಗೆ, ಅನ್ನಸಂತರ್ಪಣೆ ನೆರವೇರಿಸಿದರು.
ಅರ್ಚಕರಾದ ವೇಣುಗೋಪಾಲ್, ವಿಜಯ್, ವರುಣ್, ಅಂಜನ್ ಪೂಜಾ ಕೈಂಕರ್ಯ ನೆರವೇರಿಸಿಕೊಟ್ಟರು. ತಾಲೂಕಿನ ಚುನಾಹಿತ ಪ್ರತಿನಿಧಿಗಳು, ಮುಖಂಡರು, ಅಕ್ಕಪಕ್ಕದ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))