ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ಕನ್ನಂಡ ಬಲ್ಟಿಕಾಳಂಡ ತಂಡದ ವಿರುದ್ಧ 6-0 ಅಂತರದಿಂದ, ಸೋಮೆಯಂಡ ಗಾಡಂಗಡ ವಿರುದ್ಧ 5-0 ಅಂತರದಿಂದ, ಕೊಂಗೆಟೀರ ಬಡ್ಡೀರ ವಿರುದ್ಧ 5-0 ಅಂತರದಿಂದ ಭರ್ಜರಿ ಜಯಬೇರಿ ಬಾರಿಸಿದವು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ಕನ್ನಂಡ ಬಲ್ಟಿಕಾಳಂಡ ತಂಡದ ವಿರುದ್ಧ 6-0 ಅಂತರದಿಂದ, ಸೋಮೆಯಂಡ ಗಾಡಂಗಡ ವಿರುದ್ಧ 5-0 ಅಂತರದಿಂದ, ಕೊಂಗೆಟೀರ ಬಡ್ಡೀರ ವಿರುದ್ಧ 5-0 ಅಂತರದಿಂದ ಭರ್ಜರಿ ಜಯಬೇರಿ ಬಾರಿಸಿದವು. ಕನ್ನಂಡ ತಂಡದಾಟಗಾರರಾದ ನಾಚಪ್ಪ-2, ಕಾವೇರಪ್ಪ-2, ರೋಹನ್-1, ಬೋಪಣ್ಣ-1 ಗೋಲುಗಳಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು. ಮುಕ್ಕಾಟಿರ (ಪುಲಿಕೋಟು) ಮತ್ತು ಸುಳ್ಳಿಮಾಡ ತಂಡಗಳು ವಾಕ್ ಓವರ್ ಗಳಿಸಿದವು.ಉಳಿದಂತೆ ಚಿಮ್ಮಣಮಾಡ ಕನ್ನಿಕಂಡ ವಿರುದ್ಧ 2-1ರಿಂದ , ಕುಲ್ಲೇಟೀರ ಮುಂಡೋಟಿರ ವಿರುದ್ಧ 3-0ರಿಂದ ಗೆಲುವು ಪಡೆದರು. ಚಂಗುಲಂಡ ಆಪಾಡಂಡ ವಿರುದ್ಧ 3-0ರಿಂದ ಜಯಸಾಧಿಸಿದರೆ, ಪಳಂಗಂಡ ಪಾಲಂದೀರ ವಿರುದ್ಧ 2-0 ಅಂತರದಿಂದ, ಮುಂಡಿಯೋಳಂಡ ಅಲ್ಲಾರಂಡ ವಿರುದ್ಧ 2-1ರಿಂದ, ಶಿವಚಾಳಿಯಂಡ ಕರ್ತಚೀರ ವಿರುದ್ಧ 2-0ರಿಂದ ಹಾಗೂ ಮೈಂದಪಂಡ ಕೇತಿರ ವಿರುದ್ಧ 2-0 ಅಂತರದಿಂದ ಜಯಸಾಧಿಸಿದವು.ಅಜ್ಜಮಾಡ ವಿರುದ್ಧ ಮಣವಟ್ಟೀರ 0-4 ರಿಂದ, ಬೇಪಡಿಯಂಡ ವಿರುದ್ಧ ಕೇಲೇಟಿರ 0-1 ರಿಂದ, ಬಿದ್ದಾಟಂಡ ಚಪ್ಪಂಡ ವಿರುದ್ದ 3-4ರಿಂದ, ಮಲ್ಲಾಜಿರ ಮುಕ್ಕಾಟಿರ (ಕುಂಜಿಲಗೇರಿ) ವಿರುದ್ಧ 0-2ರಿಂದ ಪಾಡೆಯಂಡ ಬಾದುಮಂಡ ವಿರುದ್ಧ 2-3ರಿಂದ ಗೆಲುವು ಸಾಧಿಸಿದವು.

ಮಾರ್ಚಂಡ ಮಾಣಿರ ವಿರುದ್ಧ 6-0 ಅಂತರದಿಂದ , ಬಾಳೇಕುಟ್ಠಿರ ಬೊವ್ವೇರಿಯಂಡ ವಿರುದ್ಧ 4-0 ಅಂತರದಿಂದ ಜಯಗಳಿಸಿತು.ಚೇನಂಡ ಹಾಕಿ ಉತ್ಸವದ ಪ್ರಾಯೋಜಕರಲ್ಲಿ ಒಬ್ಬರಾದ ನಾರಾಯಣ ಹೆಲ್ತ್ ಮತ್ತು ಇನ್ಸೂರೆನ್ಸ್ ಪ್ರತಿದಿನ ವೀಕ್ಷಕರ ಉಚಿತ ಆರೋಗ್ಯ ತಪಾಸಣೆ ನಡೆಸಿದರು.

ಅರ್ಜುನ ಪ್ರಶಸ್ತಿ ವಿಜೇತ ಮಾಜಿ ಒಲಂಪಿಯನ್ ಎಂ.ಎಂ.ಸೋಮಯ್ಯ ಮಂಗಳವಾರ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಮನೆಯಪಂಡ ತಂಡದ ಆಟಗಾರರನ್ನು ಹುರಿದುಂಬಿಸಿದರು.

ನ್ಯಾಷನಲ್ ಕ್ರೀಡಾಪಟು ಕನ್ನಂಡ ವರ್ಣ ಭೋಜಮ್ಮ ತಮ್ಮ ಕುಟುಂಬದ ಪರವಾಗಿ ಗೋಲ್ ಕೀಪರಾಗಿ ಆಟವಾಡಿದರು.

ಇಂದಿನ ಪಂದ್ಯಗಳು:9ಕ್ಕೆ ಕೊಂಗಂಡ ಮತ್ತು ಮೊಳ್ಳೇರ

10 ಕ್ಕೆ ನಾಪಂಡ ಮತ್ತು ಮಚ್ಚುರ11ಕ್ಕೆಅಪ್ಪಚೆಟ್ಟೋಳಂಡ ಮತ್ತು ಸುಳ್ಳಿಮಾಡ12ಕ್ಕೆ ಬಾಚಮಂಡ ಮತ್ತು ಕುಂಡ್ಯೋಳಂಡ1ಕ್ಕೆ ಕೋಟೇರ ಮತ್ತು ಮುಕ್ಕಾಟಿರ (ಕುಂಬಳದಾಳು)3 ಕ್ಕೆ ಚೇಂದಿರ ಮತ್ತು ಚೊಟ್ಟೆಯಂಡ3.3o ಕ್ಕೆ ಕಂಗಾಂಡ ಮತ್ತು ಜಮ್ಮಡಮೈದಾನ 29ಕ್ಕೆ ದಾಸಂಡ ಮತ್ತು ಪೆಮ್ಮಂಡ10 ಕ್ಕೆ ಚೆನ್ನಪಂಡ ಮತ್ತು ಮಲ್ಲಂಡ11ಕ್ಕೆ ಮಂಡೀರ(ನೆಲಜಿ) ಮತ್ತು ಮಾದೆಯಂಡ12ಕ್ಕೆ ಚೆಯ್ಯಂಡ ಮತ್ತು ಕಾಡ್ಯಮಾಡ2ಕ್ಕೆ ಮಂಡೀರ (ಮೂವತೋಕ್ಲು) ಮತ್ತು ಬಾಚಳ್ಳೀರ

3 ಕ್ಕೆ ವಾಟೇರಿರ ಮತ್ತು ಕಾಳೆಂಗಡ3:30ಕ್ಕೆ ಮತ್ರಂಡ ಮತ್ತು ಕಾಂಡೇರ ಮೈದಾನ 39ಕ್ಕೆ ಅಲ್ಲಪಂಡ ಮತ್ತು ತೀತಿಮಾಡ10 ಕ್ಕೆ ಚೌರೀರ (ಹೊದ್ದೂರ್) ಮತ್ತು ಚೇಂದ್ರಿಮಾಡ (ನಾಂಗಾಲ)11ಕ್ಕೆ ಅಜ್ಜಿನಂಡ ಮತ್ತು ಚೌರೀರ (ಹೊದವಾಡ)12ಕ್ಕೆ ಐತಿಚಂಡ ಮತ್ತು ಪುಗ್ಗೇರ2ಕ್ಕೆ ಮೂಕಳಮಾಡ ಮತ್ತು ಪೋರಂಗಡ3ಕ್ಕೆ ಅಪ್ಪಂಡೇರಂಡ ಮತ್ತು ಮೇದುರ3:30ಕ್ಕೆ ಕಲ್ಲುಮಾಡಂಡ ಮತ್ತು ಮೇವಡ