ನಂದಿ ಸತ್ಯಾಗ್ರಹಕ್ಕೆ ಕನ್ನೊಳ್ಳಿ ರೈತರು ಬೆಂಬಲ

| Published : Mar 06 2025, 12:31 AM IST

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕೃಷಿ ತಜ್ಞ ಡಾ.ಬಸವರಾಜ ಬಿರಾದಾರ ನೇತೃತ್ವದಲ್ಲಿ ಜೋಡೆತ್ತಿನ ಕೃಷಿಕರು ನಡೆಸುತ್ತಿರುವ ನಂದಿ ಸತ್ಯಾಗ್ರಹಕ್ಕೆ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ರೈತರು ಬೆಂಬಲ ವ್ಯಕ್ತಪಡಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕೃಷಿ ತಜ್ಞ ಡಾ.ಬಸವರಾಜ ಬಿರಾದಾರ ನೇತೃತ್ವದಲ್ಲಿ ಜೋಡೆತ್ತಿನ ಕೃಷಿಕರು ನಡೆಸುತ್ತಿರುವ ನಂದಿ ಸತ್ಯಾಗ್ರಹಕ್ಕೆ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ರೈತರು ಬೆಂಬಲ ವ್ಯಕ್ತಪಡಿದರು.ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉತ್ತರ ಕರ್ನಾಟಕ ವಲಯದ ಉಪಾಧ್ಯಕ್ಷ ಬಸನಗೌಡ ಧರ್ಮಗೊಂಡ ಮಾತನಾಡಿ, ಶಾಸಕರ ಭವನದಲ್ಲಿ ಜರುಗುವ ರಾಜ್ಯ ಸಮಿತಿ ಸಭೆಯಲ್ಲಿ ಜೋಡೆತ್ತಿನ ಕೃಷಿಕರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹ ೧೧ ಸಾವಿರ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಜಾರಿಗೆ ತರುವ ಅಗತ್ಯವಿದೆ. ಇದು ನ್ಯಾಯಯುತವಾದ ಬೇಡಿಕೆಯಾಗಿದ್ದು, ಜೋಡೆತ್ತಿನ ಕೃಷಿಕರ ಸಂಖ್ಯೆ ಹೆಚ್ಚಳವಾದರೆ ಮಾತ್ರ ಸಮಾಜದಲ್ಲಿ ಒಳ್ಳೆಯ ಪ್ರಗತಿಯಾಗಲು ಸಾಧ್ಯವಿದೆ ಎಂದರು.ಸಿಂದಗಿ ತಾಲೂಕು ಅಧ್ಯಕ್ಷ ದಶರಥ ರಜಪೂತ ಮಾತನಾಡಿ, ಗ್ರಾಮಗಳಲ್ಲಿ ನಂದಿ ಸಂತತಿ ನಾಶವಾಗಿ ಗುಣಮಟ್ಟದ ಆಹಾರ ಬಹುಜನರಿಗೆ ದೊರೆಯದ ಗ್ರಾಮಗಳಲ್ಲಿಯೂ ರೋಗಿಗಳ ಸಂಖ್ಯೆ ಹೆಚ್ಚಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದು ಹೀಗೆ ಮುಂದುವರಿದರೆ ಸಮಾಜ ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಕೂಡಲೇ ಸರ್ಕಾರ ಎಚ್ಚೆತ್ತು ರೈತರಿಗೆ ಪೂರಕ ಯೋಜನೆ, ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು. ಈ ವೇಳೆ ಕೃಷಿ ತಜ್ಞ ಬಸವರಾಜ ಬಿರಾದಾರ, ಬಲಭೀಮ ಪಾರಸನಳ್ಳಿ, ನೀಲಕಂಠರಾಯ ಕೊಲ್ಲೂರ, ಯೋಗೆಪ್ಪ ಪಾರಸನಳ್ಳಿ, ಕಂಠೆಪ್ಪ ಬೂದಿಹಾಳ, ಪರಸಪ್ಪ ಭವಾರ, ಪೀರಪ್ಪ ತಳವಾರ, ಬಾಬು ಪಿಂಜಾರ, ನೀಲಕಂಠ ಕಲಮಗೇರಿ, ಬಾಗಪ್ಪ ಪೂಜಾರಿ, ಬಸವರಾಜ ಸಂಗಮ ಇತರರು ಇದ್ದರು.