ತಾಲೂಕಿನ ಎಂಎನ್ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಲಸಿನ ನಾಗೇನಹಳ್ಳಿ ಗ್ರಾಮದ ಕಾಂತರಾಜು ಜಯಗಳಿಸಿದರು.

ಕನ್ನಡಪ್ರಭವಾರ್ತೆ ಗುಬ್ಬಿ

ತಾಲೂಕಿನ ಎಂಎನ್ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಲಸಿನ ನಾಗೇನಹಳ್ಳಿ ಗ್ರಾಮದ ಕಾಂತರಾಜು ಜಯಗಳಿಸಿದರು. ಈ ಹಿಂದೆ ಅಧ್ಯಕ್ಷರಾಗಿದ್ದ ನರಸಯ್ಯ ಅವರ ಅವಿಶ್ವಾಸದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂತರಾಜು ,ದಿಲೀಪ್ ಕುಮಾರ್ ಹಾಗೂ ಲೋಕೇಶ್ ಮೂರು ಜನ ನಾಮಪತ್ರವನ್ನು ಸಲ್ಲಿಸಿದರು. ಮತ್ತಿಕೆರೆ ಗ್ರಾಮದ ಲೋಕೇಶ್ ರವರು ನಾಮಪತ್ರವನ್ನು ವಾಪಸ್ ಪಡೆದರು. ಚುನಾವಣೆ ಕಣದಲ್ಲಿ ಕಾಂತರಾಜು ಹಾಗೂ ದಿಲೀಪ್ ಕುಮಾರ್ ಇಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿಗಳು ಚುನಾವಣೆಯನ್ನು ನಡೆಸಿದರು. ಪ್ರತಿಸ್ಪರ್ಧಿ ಗಳದ ದಿಲೀಪ್ ಕುಮಾರ್ 8 ಮತಗಳನ್ನು ಪಡೆದು ಪರಾಜಿತಗೊಂಡರು, 10 ಮತಗಳನ್ನು ಪಡೆದ ಕಾಂತರಾಜ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.ಚುನಾವಣೆ ಪ್ರಕ್ರಿಯೇಯನ್ನು ಉಪ ತಹಶೀಲ್ದಾರ್ ಪ್ರಶಾಂತ್ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರುಕ್ಮಿಣಿ ಗೋವಿಂದರಾಜು, ಸಿದ್ದಗಂಗಯ್ಯ, ಮೋಹನ್, ಕಂದಯ ಅಧಿಕಾರಿ ಮೋಹನ್ , ಹಾಗೂ ಗ್ರಾಮಸ್ಥರು ಸಿಬ್ಬಂದಿಗಳು ಭಾಗವಹಿಸಿದ್ದರು.