ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಯ ಕೊನೆಯ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಕುಶನ್‌ ರೈ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಯ ಕೊನೆಯ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಕುಶನ್‌ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯು ಈ ಅವಧಿಯ ಕೊನೆಯ ಸಭೆಯಾಗಿದ್ದು, ಎಲ್ಲ ಸದಸ್ಯರು ಭಾವುಕರಾದರು.

ಪಿಡಿಒ ಚಂದ್ರಮೌಳಿ ಮಾತನಾಡಿ, ಇಂಥ ಒಂದು ತಂಡವನ್ನು ನಾನು

ನನ್ನ ಸೇವಾ ಅವಧಿಯಲ್ಲಿ ನೋಡಿಲ್ಲ. ತುಂಬಾ ಅನ್ಯೋನ್ಯತೆ ಮತ್ತು ಒಗ್ಗಟ್ಟಿನಿಂದ ಈ

ತಂಡ ಕೆಲಸ ಮಾಡಿದೆ. ಸಮಾಜಮುಖಿ ಕಾರ್‍ಯಗಳು ನಡೆದಿವೆ. ಅಡೆತಡೆಗಳು ಎಷ್ಟೇ ಬಂದರೂ ಯಾವುದೇ ಬೆದರಿಕೆಗೆ ಅಂಜದೆ ಬಡವರ ಪರವಾಗಿ ನಿಂತು ನಿಸ್ವಾರ್ಥ ಕಾರ್‍ಯಗಳಿಗೆ ಮಾತ್ರ ಆದ್ಯತೆ ನೀಡಿ

ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸಗಳಿಗೆ ಆದ್ಯತೆ ನೀಡಿದ್ದೇವೆ ಎಂದು

ಹೇಳಿದರು.

ನಮ್ಮಲ್ಲಿನ ಕಸ ವಿಲೇವಾರಿ ಘಟಕ, ಶುದ್ಧ ಕುಡಿಯುವ ನೀರು, ಸಮುದಾಯ

ಭವನ ನವೀಕರಣ, ಕಾಂತೂರು ಮತ್ತು ಕಿಗ್ಗಾಲು ಹಿಂದೂ ರುದ್ರ ಭೂಮಿ

ಅಭಿವೃದ್ಧಿಪಡಿಸುವುದು ಹಾಗೂ ಸಮಯಕ್ಕೆ ಸರಿಯಾಗಿ ವರ್ಷದಲ್ಲಿ ಮೂರು ಬಾರಿ ಚರಂಡಿ ಮತ್ತು ನಗರದ ಸುತ್ತಮುತ್ತ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವುದು, ಸ್ವಚ್ಛತೆ ಕಾಪಾಡುವುದು. ಹೀಗೆ ಎಲ್ಲ

ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇವೇ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಕುಶನ್‌ ರೈ ಮಾತನಾಡಿ, ಎಲ್ಲರೂ ನಮ್ಮನ್ನು ಬೆಂಬಲಿಸಿ,

ಪ್ರೋತ್ಸಾಹಿಸಿದ ಕಾರಣ ನಮಗೆ ಸ್ವಚ್ಛಂದವಾಗಿ ಕೆಲಸ ಮಾಡಲು ಸಾಧ್ಯವಾಯಿತು

ಎಂದು ಹೇಳಿದರು.

ಉಪಾಧ್ಯಕ್ಷೆ ರೇಖಾ ಬಿ.ಎಸ್. ಮಾತನಾಡಿದರು. ಮಾಜಿ ಉಪಾಧ್ಯಕ್ಷ ವಿಜು

ತಿಮ್ಮಯ್ಯ ಮಾತನಾಡಿ, ಎಲ್ಲರೂ ಒಂದು ಕುಟುಂಬದವರಂತೆ ಇದ್ದು,

ಕೆಲಸ ಮಾಡಿದ್ದೇವೆ. ಒಳ್ಳೆಯದು ಕೆಟ್ಟದ್ದು ಎಲ್ಲವನ್ನು ಒಗ್ಗಟ್ಟಾಗಿ ಎದುರಿಸಿ ಜಯಿಸಿದ್ದೇವೆ.

ಈ ಅವಧಿಯಲ್ಲಿ ನಾವು ತುಂಬಾ ಸಮಾಜಮುಖಿ ಕೆಲಸಗಳನ್ನು

ನಿಸ್ವಾರ್ಥವಾಗಿ ಎದೆಗುಂದದೆ ಮಾಡಿದ್ದೇವೆ ಎಂದು ಹೇಳಿದರು.

ಸದಸ್ಯರೆಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನಮ್ಮ ಈ ಅವಧಿಯಲ್ಲಿ ನಿಸ್ವಾರ್ಥ ಹಾಗೂ ಜನೋಪಯೋಗಿ ಕೆಲಸಗಳನ್ನು

ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದೇವೆ. ಎಲ್ಲರೂ ಪಂಚಾಯಿತಿಯ ಈ ಅವಧಿಯ ಆಡಳಿತವನ್ನು

ಮೆಚ್ಚಿ ಕೊಂಡಾಡುತ್ತಿದ್ದಾರೆ ಎಂದರು.