ಕನ್ಯಕಾ ಸೌಹಾರ್ಧ ಸಹಕಾರಿ ಸಂಘಕ್ಕೆ 91 ಲಕ್ಷ ರು. ನಿವ್ವಳ ಲಾಭ

| Published : Jul 18 2025, 12:45 AM IST

ಕನ್ಯಕಾ ಸೌಹಾರ್ಧ ಸಹಕಾರಿ ಸಂಘಕ್ಕೆ 91 ಲಕ್ಷ ರು. ನಿವ್ವಳ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು ನಗರದ ಕನ್ನಿಕಾ ಮಹಲ್‌ನಲ್ಲಿ ಕನ್ಯಕಾ ಸೌಹಾರ್ದ ಸಹಕಾರಿ ಸಂಘದಿಂದ ಆಯೋಜಿಸಲಾದ 26ನೇ ಸರ್ವಸದಸ್ಯರ ವಾರ್ಷಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಕನ್ಯಕಾ ಸೌಹಾರ್ದ ಸಹಕಾರಿ ಸಂಘವು ಸುಮಾರು 85 ಕೋಟಿ ರು. ವ್ಯವಹಾರ ನಡೆಸಿ 91 ಲಕ್ಷ ರು. ನಿವ್ವಳ ಲಾಭ ಗಳಿಸಿದೆ. ಷೇರು ಸದಸ್ಯರಿಗೆ ಶೇ.24 ಡಿವಿಡೆಂಟ್ ಘೋಷಿಸಿರುವ ಜತೆಗೆ ಸದಸ್ಯರು ಮರಣ ಹೊಂದಿದಾಗ ಅವರ ನಾಮಿನಿದಾರರಿಗೆ 35 ಸಾವಿರ ರು. ನೀಡಲಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷ ಬಿ.ಎನ್.ತಿಪ್ಪೇಸ್ವಾಮಿ ಹೇಳಿದರು.

ನಗರದ ಶ್ರೀ ಕನ್ನಿಕಾ ಮಹಲ್‌ನಲ್ಲಿ ಕನ್ಯಕಾ ಸೌಹಾರ್ದ ಸಹಕಾರಿ ಸಂಘದಿoದ ಹಮ್ಮಿಕೊಳ್ಳಲಾಗಿದ್ದ 2024-25 ನೇ ಸಾಲಿನ 26ನೇ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಈ ಹಿಂದಿಗಿಂತಲೂ ಹೆಚ್ಚಿನ ಸಾಲ ವಸೂಲಾತಿ ಯಾಗಿದೆ. ಸಹಕಾರಿಗೆ ಠೇವಣಿದಾರರು ಹಾಗೂ ಸಾಲಗಾರರು ಹೃದಯವಿದ್ದಂತೆ. ಸಹಕಾರಿಯಲ್ಲಿ ಉತ್ತಮ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಇರುವುದರಿಂದ ದಿನೇ ದಿನೇ ಹೆಚ್ಚಿನ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಷೇರುದಾರರು ಹಾಗೂ ಠೇವಣಿದಾರರ ಹಿತ ಕಾಯುವುದರ ಜತೆಗೆ ಸಹಕಾರಿಯ ಹೆಚ್ಚಿನ ಭದ್ರತೆ ಹಾಗೂ ಸುರಕ್ಷತೆಗೆ ಒತ್ತು ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಎಸಎಸ್‌ಎಲ್‌ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಶೇ.95ಕ್ಕೂ ಹೆಚ್ಚಿನ ಅಂಕ ಗಳಿಸಿದ ಸಹಕಾರಿಯ ಷೇರು ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರ 20 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಗೌರವಧನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಮಂಡಳಿಯ ಗೌರವಾಧ್ಯಕ್ಷ ಆನಂದಶೆಟ್ಟಿ, ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಕೆ.ವಿ.ಸತ್ಯನಾರಾಯಣ, ಚಿತ್ರದುರ್ಗ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಕೆ.ವಿ.ಅಮರೇಶ್, ಆರ್ಯವೈಶ್ಯ ಮಂಡಳಿಯ ಮಾಜಿ ಅಧ್ಯಕ್ಷ ಹೆಚ್.ಎಸ್. ನಾಗರಾಜ್ ಗುಪ್ತಾ, ಸಹಕಾರಿಯ ಉಪಾಧ್ಯಕ್ಷ ಎಸ್.ಹರ್ಷ ಹಾಗೂ ನಿರ್ದೇಶಕರುಗಳಾದ ಆರ್.ಅನಂತಕುಮಾರ್, ಪಿ.ವಿ.ನಾಗರಾಜ್, ರಮೇಶ್ ಬಾಬು, ಶ್ರೀನಿವಾಸಶೆಟ್ಟಿ, ಹೆಚ್.ವಿ.ಮಂಜುನಾಥ್, ಎಚ್.ಎಸ್.ಅರುಣ್ ಕುಮಾರ್, ಆಂಜನೇಯ, ಎನ್.ಆರ್.ಜಯಲಕ್ಷ್ಮೀ,ಟಿ.ಲತಾ, ಆರ್.ಪ್ರಕಾಶ್ ಕುಮಾರ್, ವಿ.ಜಗದೀಶ್, ಎಸ್.ರಾಮಕೃಷ್ಣ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.