ಕಾಪು: ಬೆಳಂಜಾಲೆಯಲ್ಲಿ ಸ್ವಾಮಿ ದಯಾನಂದ ವಿದ್ಯಾಲಯ ವಸತಿಶಾಲೆಗೆ ಶಿಲಾನ್ಯಾಸ

| Published : Feb 08 2025, 12:34 AM IST

ಸಾರಾಂಶ

ಕೊಯಮುತ್ತೂರಿನ ಹೃಷಿಕೇಶ ಆರ್ಷ್ ವಿದ್ಯಾಗುರು ಪೀಠದ ‘ಏಮ್ ಫಾರ್ ಸೇವಾ’ ಸಂಸ್ಥೆಯ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತೀ ಅವರ ಸಂಸ್ಥೆಯ ವತಿಯಿಂದ ಶಿರ್ವದ ಮಟ್ಟಾರು ಬೆಳಂಜಾಲೆಯಲ್ಲಿ ಅಂದಾಜು ೧೨ ಕೋಟಿ ರು. ವೆಚ್ಚದಲ್ಲಿ ಆರಂಭಿಸಲು ಉದ್ದೇಶಿಸಿರುವ ನೂತನ ವಸತಿ ಶಾಲೆ ‘ಸ್ವಾಮಿ ದಯಾನಂದ ವಿದ್ಯಾಲಯ’ ಕಟ್ಟಡಕ್ಕೆ ಶಿಲಾನ್ಯಾಸ, ಧಾರ್ಮಿಕ ಅನುಷ್ಠಾನಗಳು ನಡೆದವು.

ಕನ್ನಡಪ್ರಭ ವಾರ್ತೆ ಕಾಪು

ಕೊಯಮುತ್ತೂರಿನ ಹೃಷಿಕೇಶ ಆರ್ಷ್ ವಿದ್ಯಾಗುರು ಪೀಠದ ‘ಏಮ್ ಫಾರ್ ಸೇವಾ’ ಸಂಸ್ಥೆಯ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತೀ ಅವರ ಸಂಸ್ಥೆಯ ವತಿಯಿಂದ ಶಿರ್ವದ ಮಟ್ಟಾರು ಬೆಳಂಜಾಲೆಯಲ್ಲಿ ಅಂದಾಜು ೧೨ ಕೋಟಿ ರು. ವೆಚ್ಚದಲ್ಲಿ ಆರಂಭಿಸಲು ಉದ್ದೇಶಿಸಿರುವ ನೂತನ ವಸತಿ ಶಾಲೆ ‘ಸ್ವಾಮಿ ದಯಾನಂದ ವಿದ್ಯಾಲಯ’ ಕಟ್ಟಡಕ್ಕೆ ಶಿಲಾನ್ಯಾಸ, ಧಾರ್ಮಿಕ ಅನುಷ್ಠಾನಗಳು ನಡೆದವು.ಏಮ್ ಫಾರ್ ಸೇವಾ ಸಂಸ್ಥೆಯ ಬಂಟಕಲ್ಲು ಶಾಖೆಯ ಮೇಲ್ವಿಚಾರಕ ಶ್ರೀ ಸ್ವಾಮಿ ಮೋಕ್ಷಾನಂದ ಸರಸ್ವತಿ ಅವರ ಮೇಲುಸ್ತುವಾರಿಯಲ್ಲಿ ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೆಶ್ವರಿ ದೇವಳದ ವೈದಿಕರಾದ ರಘುರಾಮ ಭಟ್, ಶ್ರೀಕಾಂತ ಭಟ್ ನೇತೃತ್ವದಲ್ಲಿ ವೈದಿಕ ಕರ್ಮಾಂಗಗಳು ಸಂಪನ್ನಗೊಂಡವು.ಈ ಸಂದರ್ಭ ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ, ಚೆನ್ನೈಯ ಶ್ರೀನಿವಾಸ್, ಕಟ್ಟಡದ ಎಂಜಿನಿಯರ್ ಹರಿಶ್ಚಂದ್ರ ವಿಶ್ವನಾಥ್, ಸ್ಥಳದಾನಿಗಳಾದ ಅನಂತರಾಮ ನಾಯಕ್ ಮೇಲ್ ಬೆಳಂಜಾಲೆ, ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ ಶಶಿಧರ ವಾಗ್ಲೆ, ನ್ಯಾಯವಾದಿ ಶಿವಾನಂದ ನಾಯಕ್ ಬೈಲೂರು, ಶಶಿಧರ ಭಂಡಾರಿ ಕಾರ್ಕಳ, ರಾಮಕೃಷ್ಣ ಚಡಗ, ಶೈಲೇಶ್ ರಾವ್, ನಾಗರಾಜ ಕೆದ್ಲಾಯ, ಗೀತಾ ವಾಗ್ಲೆ ಬಂಟಕಲ್ಲು, ದೇವದಾಸ್ ನಾಯಕ್ ಬೆಳಂಜಾಲೆ, ಹರೀಶ್ ಪಾಟ್ಕರ್, ಸೀತಾರಾಮ ನಾಯಕ್ ಶಿರ್ವ, ರಮೇಶ್ ಪಾಟ್ಕರ್ ಸೇಡಿಪಟ್ಲ, ಸಂತೋಷ್ ನಾಯಕ್ ಪಳ್ಳಿ, ಅನಂತಪದ್ಮನಾಭ ಭಟ್ ಬಂಟಕಲ್ಲು ಮೊದಲಾದವರು ಉಪಸ್ಥಿತರಿದ್ದರು.