ಕಾಪು: ಶಾಲೆಗೆ ಕರ್ಣಾಟಕ ಬ್ಯಾಂಕ್‌ ಬಸ್‌ ಕೊಡುಗೆ

| Published : Mar 07 2025, 11:47 PM IST

ಸಾರಾಂಶ

ಕರ್ಣಾಟಕ ಬ್ಯಾಂಕ್ ತಮ್ಮ ಪ್ರಾದೇಶಿಕ ಕಚೇರಿ ಉಡುಪಿಯಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಯ ಅಡಿಯಲ್ಲಿ ಕಾಪುವಿನ ಕೈಪುಂಜಾಲ್ ಗ್ರಾಮದ ಶ್ರೀವಿಶ್ವೇಶ ತೀರ್ಥ ವಿದ್ಯಾಲಯಕ್ಕೆ ಶಾಲಾ ಬಸ್ ಹಸ್ತಾಂತರಿಸಿತು. ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ, ಉಡುಪಿ

ಕರ್ಣಾಟಕ ಬ್ಯಾಂಕ್ ತಮ್ಮ ಪ್ರಾದೇಶಿಕ ಕಚೇರಿ ಉಡುಪಿಯಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಯ ಅಡಿಯಲ್ಲಿ ಕಾಪುವಿನ ಕೈಪುಂಜಾಲ್ ಗ್ರಾಮದ ಶ್ರೀವಿಶ್ವೇಶ ತೀರ್ಥ ವಿದ್ಯಾಲಯಕ್ಕೆ ಶಾಲಾ ಬಸ್ ಹಸ್ತಾಂತರಿಸಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು.ಪೇಜಾವರ ಶ್ರೀಗಳು ಸಮಾರಂಭದಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತ ಆಶೀರ್ವಚನ ನೀಡಿ, ಶತಮಾನ ಕಂಡ ಕರ್ಣಾಟಕ ಬ್ಯಾಂಕ್ ಪ್ರತಿ ವರ್ಷ ತಾನು ಬೆಳೆದದಲ್ಲದೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಮೂಲಕ ಸಮಾಜದ ಬೆಳೆವಣಿಗೆಗೆ ಅತ್ಯಮೂಲ್ಯ ಕೊಡುಗೆಯನ್ನು ನೀಡುತ್ತಾ ಬಂದಿರುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕಿನ ಜಿ.ಎಂ. ವಿನಯ್ ಭಟ್ ಅವರು, ಶಾಲಾ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್, ಪಿ ರಾಮದಾಸ್ ಮಾದಮಣ್ಣಾಯ, ಮಾಲಕರು ಮೆಸರ್ಸ್ ಎಸ್ ಡಿಸೈನರ್ಸ್ ಲಿಮಿಟೆಡ್, ಬೆಂಗಳೂರು, ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ (ಎ.ಜಿ.ಎಂ) ವಾದಿರಾಜ್ ಭಟ್ ಕೆ, ಡೆಪ್ಯುಟಿ ರೀಜನಲ್ ಹೆಡ್ ಮನೋಜ್ ಕೋಟ್ಯಾನ್, ಚೀಫ್ ಮ್ಯಾನೇಜರ್ ಪ್ರದೀಪ್ ಕುಮಾರ್, ಸ್ಥಳೀಯ ಶಾಖ ಪ್ರಬಂಧಕರು ಹಾಗೂ ಪ್ರಾದೇಶಿಕ ಕಚೇರಿಯ ಸಿಬ್ಬಂದಿ ಹಾಜರಿದ್ದರು.