ಸಾರಾಂಶ
ಮುದಗಲ್: ಇಲ್ಲಿನ ರೈತರ ಮನೆಗಳಲ್ಲಿ ಕಾರ ಹುಣ್ಣಿಮೆ ದಿನದಂದು ಸಂಭ್ರಮ ಸಡಗರ ಮೇಳೈಸಿತ್ತು. ಎತ್ತುಗಳಿಗೆ ಮೈತೊಳೆದು, ಮೈತುಂಬಾ ಬಣ್ಣದ ಚಿತ್ತಾರ ಬಿಡಿಸಿ, ಕೊರಳಿಗೆ ಗೆಜ್ಜೆ ಕಟ್ಟಿ, ಪೂಜಿಸಿ, ನೈವೇದ್ಯ ಅರ್ಪಿಸಲಾಯಿತು. ಸಿಂಗರಿಸಿದ ಎತ್ತುಗಳನ್ನು ಮುದಗಲ್ ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಚಾವಡಿ ಕಟ್ಟೆಯವರಿಗೆ ಮೆರವಣೆಗೆ ಮಾಡಲಾಯಿತು. ಐತಿಹಾಸಿಕ ಕಿಲ್ಲಾ ದ್ವಾರದ ಬಾಗಿಲಿಗೆ ಕೊಬ್ಬರಿ, ಬೆಲ್ಲ ಮತ್ತು ಬೇವಿನ ಕೊಲ್ಲಿಗಳನ್ನು ಕಟ್ಟಿ ಸಂಭ್ರಮ ಸಡಗರದಿಂದ ಆಚರಿಸಿದರು. ನಂತರ ಎತ್ತಿನ ಜೊತೆಗೆ ಬಂದ ರೈತನು ಎತ್ತುಗಳನ್ನು ಓಟದ ಸ್ಪರ್ಧೆಯಲ್ಲಿ ನೆಗೆಸಿ ಬಾಗಿಲಿಗೆ ಕಟ್ಟಿದ ತೋರಣ ಹರಿಯುತ್ತಾನೆ. ಕಂದು ಬಣ್ಣದ ಎತ್ತು ಮೊದಲು ಬಂದರೆ, ಮುಂಗಾರು ಮಳೆಯಲ್ಲಿ ತೊಗರಿ ಮತ್ತು ಕಡಲೆ ಬೆಳೆ ಚೆನ್ನಾಗಿ ಬರುತ್ತದೆ. ಹಾಗೂ ಬಿಳಿಯ ಬಣ್ಣದ ಎತ್ತು ಮೊದಲು ಬಂದರೆ ಹಿಂಗಾರು ಮಳೆಯಲ್ಲಿ ಜೋಳ ಮತ್ತು ಕುಸುಬಿ ಬೆಳೆ ಚೆನ್ನಾಗಿ ಬರುತ್ತದೆ ಎಂಬುದು ಇಲ್ಲಿನ ರೈತರ ನಂಬಿಕೆಯಾಗಿದೆ. ಆದ್ದರಿಂದ ಕಾರಹುಣ್ಣಿಮೆ ದಿನ ಎತ್ತುಗಳನ್ನು ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ.-----------------22ಎಂಡಿಎಲ್01
ಮುದಗಲ್ ಪಟ್ಟಣದ ಚಾವಡಿ ಕಟ್ಟೆಯ ಮುಂದೆ ಓಟದ ಸ್ಪರ್ಧೆಯಲ್ಲಿ ಯಾವ ಎತ್ತು ಮುಂದೆ ಬರುವುದೆಂದು ಕುತೂಹಲದಿಂದ ವೀಕ್ಷಿಸುತ್ತಿರುವ ಗ್ರಾಮಸ್ಥರು.