ಸಾರಾಂಶ
ಜಾನಪದ ಕಲೆಗಳು ಇಂದು ನಶಿಸಿ ಹೋಗುತ್ತಿವೆ ಅವುಗಳನ್ನು ಉಳಿಸಲು ಸ್ಥಳೀಯ ಜಾನಪದ ಕಲಾವಿದರನ್ನು ಪೋತ್ಸಾಹಿಸಿ ಜನಪದ ಕಲೆ ಉಳಿಸಬೇಕು ಎಂದು ಕರದಾಳ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಪಂಡಿತ್ ನೆಲೋಗಿ ಅವರು ಹೇಳಿದರು.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಜಾನಪದ ಕಲೆಗಳು ಇಂದು ನಶಿಸಿ ಹೋಗುತ್ತಿವೆ ಅವುಗಳನ್ನು ಉಳಿಸಲು ಸ್ಥಳೀಯ ಜಾನಪದ ಕಲಾವಿದರನ್ನು ಪೋತ್ಸಾಹಿಸಿ ಜನಪದ ಕಲೆ ಉಳಿಸಬೇಕು ಎಂದು ಕರದಾಳ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಪಂಡಿತ್ ನೆಲೋಗಿ ಅವರು ಹೇಳಿದರು.ತಾಲೂಕಿನ ಕರದಾಳ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕ ಘಟಕ ವತಿಯಿಂದ ಹಮ್ಮಿಕೊಂಡ ಶಾಲೆಗೊಂದು ಜಾನಪದ ಕಲರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಜಾನಪದ ಕಲೆಗಳು ಗ್ರಾಮೀಣ ಭಾಗದಲ್ಲಿ ಮಾತ್ರ ಉಳಿದಿವೆ. ಕೃಷಿ ಮೂಲದಿಂದ ಬಂದ ಜನಪದ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಬೇಕು ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಎಲ್ಲಾ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮವನ್ನು ಗ್ರಾಮದ ಮುಖಂಡರಾದ ಶಿವಲಿಂಗಯ್ಯ ಸ್ವಾಮಿ ಮಠಪತಿ ಯವರು ಡ್ರಮ್ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಜನಪದ ಕಲಾವಿದರಾದ ಭೀಮರಾಯ. ಮಲ್ಲಪ್ಪ ನಂಜೋಳಿ. ಸಂಗೀತ ಕಲಾವಿದೆ ಶ್ರೀದೇವಿ ಹಿರೇಗೌಡ. ಅವರಿಗೆ ಸನ್ಮಾನಿಸಲಾಯಿತು. ಭೀಮರಾಯ ಅವರು ಮೊಹರಂ ಪದ. ಮಲ್ಲಪ್ಪ ನಂಜೋಳಿ ಅವರು ಭಜನೆ ಪದ. ಶ್ರೀದೇವಿ ಹಿರೇಗೌಡ ಅವರು ಜನಪದ ಗೀತೆ ಹಾಡಿ ಜಾನಪದ ಕಲೆಯನ್ನು ಪ್ರದರ್ಶನ ನೀಡಿ ವಿದ್ಯಾರ್ಥಿಗಳನ್ನು ಮಂತ್ರಮುಗ್ಧನಾಗಿಸಿದರು.ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಗೌರವ ಕಾರ್ಯದರ್ಶಿ ನರಸಪ್ಪ ಚಿನ್ನ ಕಟ್ಟಿ ಅವರು ಉಪನ್ಯಾಸ ನೀಡಿ ಜನಪದ ವಿವಿಧ ಪದಗಳನ್ನು ಹಾಡಿ ವಿದ್ಯಾರ್ಥಿಗಳ ಮನಸ್ಸನ್ನು ಸೆರೆ ಹಿಡಿದರು. ಕರ್ನಾಟಕ ಜಾನಪದ ಪರಿಷತ್ತಿನ ಇಂಗಳಗಿ ವಲಯ ಅಧ್ಯಕ್ಷ ಶಂಭುಲಿಂಗ ವಿಶ್ವಕರ್ಮ. ಶಿಕ್ಷಕರಾದ ನರಸಪ್ಪ ಜಾಣ. ಮೈನುದ್ದೀನ್. ಲೋಕೇಶ್ ಇದ್ದರು.