ಸಂಭ್ರಮದಿಂದ ನಡೆದ ಹೆಬ್ಬಣ ಅರಸಮ್ಮ ದೇವರ ಕರಗ ಮಹೋತ್ಸವ

| Published : Mar 27 2024, 01:03 AM IST

ಸಂಭ್ರಮದಿಂದ ನಡೆದ ಹೆಬ್ಬಣ ಅರಸಮ್ಮ ದೇವರ ಕರಗ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸ ಪ್ರಸಿದ್ದಿ ಪಡೆದಿರುವ ಹೆಬ್ಬಣ ಅರಸಮ್ಮ ದೇವರ ಉತ್ಸವವನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕಷ್ಟಗಳನ್ನು ನಿವಾರಣೆ ಮಾಡುವ ದೈವಶಾಲಿ ತಾಯಿ ಎಂದು ಇಲ್ಲಿನ ಜನರು ನಂಬಿದ್ದಾರೆ. ತಾಯಿಯ ಮಹಿಮೆಯೂ ಅಪಾರವಾಗಿದ್ದು, ಭಕ್ತಿಪ್ರಧಾನವಾಗಿ ತಾಯಿಗೆ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಗಂಗಾಮತ ಬೀದಿಯ ಹೆಬ್ಬಣ ಅರಸಮ್ಮ ದೇವರ ಕರಗ ಮಹೋತ್ಸವವು ಭಕ್ತಿ ಪ್ರಧಾನವಾಗಿ ವಿಜೃಂಭಣೆಯಿಂದ ನಡೆಯಿತು.

ಪಟ್ಟಣದ ಪಟ್ಟಲದಮ್ಮ ದೇವಸ್ಥಾನದ ಆವರಣದಲ್ಲಿ ಹೆಬ್ಬಣ ಅರಸಮ್ಮ ದೇವರ ಪೂಜೆ ಹಾಗೂ ಕರಗಕ್ಕೆ ವಿವಿಧ ಹೂಗಳಿಂದ ಆಲಂಕರಿಸಿದ ನಂತರ ಹೂವು ಹೊಂಬಾಳೆಯೊಂದಿಗೆ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.

ಪೂಜಾರಿ ಚಿಕ್ಕಅರಸಯ್ಯ ಅವರು ಕರಗ ಹೊತ್ತು ಹೆಜ್ಜೆ ಹಾಕಿದರು. ಜಾನಪದ ಕಲಾ ಮೇಳದೊಂದಿಗೆ ಪಟ್ಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಮನೆ ಮುಂದೆ ಬಂದ ದೇವರಿಗೆ ಪ್ರತಿಯೊಬ್ಬರು ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.

ಹರಕೆ ಕಟ್ಟಿದ್ದ ಮಹಿಳೆಯರು ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಿದರು. ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಕಾರ್ಯಕ್ರಮವು ನಡೆಯಿತು,

ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಇತಿಹಾಸ ಪ್ರಸಿದ್ದಿ ಪಡೆದಿರುವ ಹೆಬ್ಬಣ ಅರಸಮ್ಮ ದೇವರ ಉತ್ಸವವನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕಷ್ಟಗಳನ್ನು ನಿವಾರಣೆ ಮಾಡುವ ದೈವಶಾಲಿ ತಾಯಿ ಎಂದು ಇಲ್ಲಿನ ಜನರು ನಂಬಿದ್ದಾರೆ. ತಾಯಿಯ ಮಹಿಮೆಯೂ ಅಪಾರವಾಗಿದ್ದು, ಭಕ್ತಿಪ್ರಧಾನವಾಗಿ ತಾಯಿಗೆ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿದೆ ಎಂದರು.

ಈ ವೇಳೆ ದೊಡ್ಧಯ್ಯ, ಯಜಮಾನ್ ವೆಂಕಟೇಶ್, ಶಿವಸ್ವಾಮಿ, ಗಂಗಾರಾಜೇಅರಸ್ ಸೇರಿದಂತೆ ಇತರರು ಇದ್ದರು.ಇಂದಿನಿಂದ ಮತ್ತಿತಾಳೇಶ್ವರಸ್ವಾಮಿ ಜಾತ್ರಾ ಮಹೋತ್ಸವ

ಮಳವಳ್ಳಿ:ಇತಿಹಾಸ ಪ್ರಸಿದ್ಧ ತಾಲೂಕಿನ ಮತ್ತಿತಾಳೇಶ್ವರಸ್ವಾಮಿ ದೇವರ ಜಾತ್ರಾ ಮಹೋತ್ಸವವು ಮಾ.27ರಿಂದ ಏ.1ರವರೆಗೆ ನಡೆಯಲಿದೆ. ತಾಲೂಕಿನ ಕಲ್ಲುವೀರನಹಳ್ಳಿ, ಕಂದೇಗಾಲ, ಅಮೃತೇಶ್ವರನಹಳ್ಳಿ ಹಾಗೂ ಮೋಳೆದೊಡ್ಡಿ ಗ್ರಾಮಗಳ ಮಧ್ಯೆ ಇರುವ ದೇವಾಲಯದಲ್ಲಿ ಮಾ.27ರಂದು ಸಂಗ್ರಹಣೆ, ಅಂಕುರಾರ್ಪಣ, ಮಾ.28ರಂದು ಧ್ವಜಾರೋಹಣ ಹಾಗೂ ಚಂದ್ರಮಂಡಲೋರೋಹಣ. ಮಾ.29ರ ಶುಕ್ರವಾರ ಪೀಠಾರೋನ, ಪುಷ್ಪಮಂಟಪಾರೋಹಣ ಹಾಗೂ ಮಾ.30ರಂದು ಗಜಾರೋಹಣ ನಡೆಯಲಿದೆ.ಮಾ.31ರಂದು ಐತಿಹಾಸಿಕ ಮತ್ತಿತಾಳೇಶ್ವರಸ್ವಾಮಿ ದಿವ್ಯ ರಥೋತ್ಸವ ನಡೆಯಲಿದೆ. ರಥೋತ್ಸವಕ್ಕೂ ಮುನ್ನ ಮಂಟೇಸ್ವಾಮಿ ಬಸವಪ್ಪನ ಹಾಗೂ ಉತ್ಸವ ಮೂರ್ತಿ ಮೆರವಣಿಗೆಯನ್ನು ಮಠದ ಹೊನ್ನಾಯಕನಹಳ್ಳಿ ಗ್ರಾಮಸ್ಥರು ಹಾಗೂ ಯಜಮಾನರು ನಡೆಸಲಿದ್ದಾರೆ. ಏ.1ರ ಸೋಮವಾರ ಅಶ್ವಾರೋಹಣ ಹಾಗೂ ತೀರ್ಥತೇಪ್ಪೋತ್ಸವ ನಡೆಯಲಿದೆ ಎಂದು ತಹಸೀಲ್ದಾರ್ ಕೆ.ಎನ್.ಲೋಕೇಶ್ ತಿಳಿಸಿದ್ದಾರೆ.