ದೊಡ್ಡಬಳ್ಳಾಪುರದಲ್ಲಿ ಕರಗ ಶಕ್ತ್ಯುತ್ಸವ ಸಂಪನ್ನ

| Published : May 25 2024, 12:55 AM IST

ದೊಡ್ಡಬಳ್ಳಾಪುರದಲ್ಲಿ ಕರಗ ಶಕ್ತ್ಯುತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಪಾರಂಪರಿಕ ಉತ್ಸವಗಳಲ್ಲಿ ಪ್ರಮುಖವಾದ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆದಿಶಕ್ತ್ಯಾತ್ಮಕೆ ದ್ರೌಪತಮ್ಮ ಕರಗ ಮಹೋತ್ಸವ ಗುರುವಾರ ರಾತ್ರಿ ಆರಂಭವಾಗಿ ಶುಕ್ರವಾರ ಬೆಳಗಿನವರೆಗೆ ಸಂಭ್ರಮದಿಂದ ನಡೆಯಿತು.

ದೊಡ್ಡಬಳ್ಳಾಪುರ: ಇಲ್ಲಿನ ಪಾರಂಪರಿಕ ಉತ್ಸವಗಳಲ್ಲಿ ಪ್ರಮುಖವಾದ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆದಿಶಕ್ತ್ಯಾತ್ಮಕೆ ದ್ರೌಪತಮ್ಮ ಕರಗ ಮಹೋತ್ಸವ ಗುರುವಾರ ರಾತ್ರಿ ಆರಂಭವಾಗಿ ಶುಕ್ರವಾರ ಬೆಳಗಿನವರೆಗೆ ಸಂಭ್ರಮದಿಂದ ನಡೆಯಿತು.

ಗುರುವಾರ ಮಧ್ಯರಾತ್ರಿ 1 ಗಂಟೆ ಬಳಿಕ ದೇವಾಲಯದಿಂದ ಹೊರಬಂದ ಕರಗ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ದೇವಾಲಯಕ್ಕೆ ವಾಪಸ್ಸಾಯಿತು. ಡಿಕ್ರಾಸ್ ಮುಖ್ಯರಸ್ತೆಯಲ್ಲಿರುವ ಗಗನಾರ್‍ಯ ಮಠದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳ ಬಳಿಕ ಧರ್ಮರಾಯಸ್ವಾಮಿ ದೇವಾಲಯಕ್ಕೆ ಆಗಮಿಸಿ ಹೂವು, ಆಭರಣಾಲಂಕೃತ ಕರಗ ಕಳಶವನ್ನು ಹೊತ್ತ ಪೂಜಾರಿ ಹೊಸಕೋಟೆಯ ಉಪ್ಪಾರಹಳ್ಳಿಯ ಪೂಜಾರಿ ವೈ.ಭೀಮರಾಜ್, ಕೊಂಗಾಡಿಯಪ್ಪ ಬಸ್ ನಿಲ್ದಾಣ, ಕಿಲ್ಲೆ ವೇಣುಗೋಪಾಲ ದೇವಾಲಯ, ನೆಲದಾಂಜನೇಯ ಸ್ವಾಮಿ ದೇವಾಲಯ, ಜಯಚಾಮರಾಜೇಂದ್ರ ವೃತ್ತ, ಏಳುಸುತ್ತಿನಕೋಟೆ, ಸಪ್ತಮಾತೃಕೆ ಮಾರಿಯಮ್ಮ ದೇವಾಲಯ, ಖಾಸ್‌ಬಾಗ್, ತೇರಿನಬೀದಿ, ಸಂಜಯನಗರ ಮಾರ್ಗವಾಗಿ ನಗರಾದ್ಯಂತ ಸಂಚರಿಸಿ ಬಳಿಕ ಶ್ರೀಧರ್ಮರಾಯಸ್ವಾಮಿ ದೇವಾಲಯ ಸೇರಿತು.

ಗಮನ ಸೆಳೆದ ಆಕರ್ಷಕ ಕರಗ ನೃತ್ಯ:

ಕರಗ ಕುಂಭವನ್ನು ಶಿರದಲ್ಲಿ ಹೊತ್ತು ಹಾಗೂ ಕೈಯಲ್ಲಿ ಕತ್ತಿಯನ್ನು ಹಿಡಿದು ತಮಟೆಯ ಸದ್ದಿಗೆ ಹೆಜ್ಜೆ ಹಾಕುತ್ತಾ ಸಂಚರಿಸಿದ ಪೂಜಾರಿಗೆ ಮನೆಮನೆಗಳ ಮುಂದೆ ದೀಪಾರತಿ ಬೆಳಗಿ ಮಹಿಳೆಯರು ಸಂಪ್ರದಾಯ ಮೆರೆದರು. ಪ್ರಮುಖ ವೃತ್ತಗಳಲ್ಲಿ ಆಕರ್ಷಕ ಕರಗ ನೃತ್ಯ ಗಮನ ಸೆಳೆಯಿತು. ಇಲ್ಲಿನ ನೆಲದಾಂಜನೇಯ ಸ್ವಾಮಿ ದೇವಾಲಯ, ಏಳುಸುತ್ತಿನ ಕೋಟೆ ನಾರಾಯಣ ಮಂದಿರ, ಶಾಂತಿನಗರದ ಮುತ್ಯಾಲಮ್ಮ ದೇವಾಲಯ, ಜಯಚಾಮರಾಜೇಂದ್ರ ವೃತ್ತ, ಸೇರಿದಂತೆ ಹಲವೆಡೆ ಕರಗ ನೃತ್ಯ ಗಮನ ಸೆಳೆಯಿತು. ಏಳುಸುತ್ತಿನ ಕೋಟೆ ಅಂಗಳಲ್ಲಿ ಧಾರ್ಮಿಕ ನಡಿಗೆಯ ಮೂಲಕ ಕರಗ ಹೊತ್ತ ಪೂಜಾರಿ ಹೆಜ್ಜೆ ಹಾಕಿದರು.

ಪ್ರಮುಖ ದೇವಾಲಯ, ದರ್ಗಾಗಳಿಗೆ ಭೇಟಿ:

ಧಾರ್ಮಿಕ ಸಮನ್ವಯದ ಸಂಕೇತವೂ ಆದ ಕರಗ ಮಹೋತ್ಸವದ ಭಾಗವಾಗಿ ಕರಗ ಊರಿನ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸ್ವೀಕರಿಸಿತು. ಸಂಪ್ರದಾಯದಂತೆ ವಿವಿಧ ದರ್ಗಾಗಳಿಗೂ ಭೇಟಿ ನೀಡಿ ಪೂಜೆ ಸ್ವೀಕರಿಸಿದ್ದು ವಿಶೇಷವಾಗಿತ್ತು.

ದೇವತೆಗಳ ಉತ್ಸವ:

ದೊಡ್ಡಬಳ್ಳಾಪುರ ನೆಲದಾಂಜನೇಯಸ್ವಾಮಿ, ರಾಮಲಿಂಗಚಂದ್ರ ಚೌಡೇಶ್ವರಿ, ಧರ್ಮರಾಯಸ್ವಾಮಿ, ಅಭಯ ಚೌಡೇಶ್ವರಿ, ಕಾಳಿಕಾ ಕಮಟೇಶ್ವರ ದೇವತಾ ಉತ್ಸವಗಳು ನಡೆದವು. ಡೊಳ್ಳುಕುಣಿತ, ದೀಪಾರತಿ ಕುಣಿತ ಗಮನ ಸೆಳೆಯಿತು. ಪ್ರಮುಖ ವೃತ್ತಗಳು, ಮುಖ್ಯರಸ್ತೆಗಳಲ್ಲಿ ಎಲ್‌ಇಡಿ ಬಲ್ಬ್‌ಗಳಿಂದ ರೂಪಿಸಲಾಗಿದ್ದ ದೇವತೆಗಳ ಪ್ರತಿಕೃತಿಗಳು ವಿಶೇಷ ಆಕರ್ಷಣೆಯಾಗಿದ್ದವು. ಎಲ್ಲೆಡೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯಿತು.

(ಚೆನ್ನಾಗಿರುವ ಎರಡು ಫೋಟೋ ಮಾತ್ರ ಬಳಸಿ)

24ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಆದಿಶಕ್ತ್ಯಾತ್ಮಕೆ ದ್ರೌಪತಮ್ಮ ದೇವಿ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

24ಕೆಡಿಬಿಪಿ2- ದೊಡ್ಡಬಳ್ಳಾಪುರದ ಆದಿಶಕ್ತ್ಯಾತ್ಮಕೆ ದ್ರೌಪತಮ್ಮ ದೇವಿ ಆಕರ್ಷಕ ಕರಗ ನೃತ್ಯ.

24ಕೆಡಿಬಿಪಿ3- ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಾಲಯ ಆವರಣದಲ್ಲಿ ಆದಿಶಕ್ತ್ಯಾತ್ಮಕೆ ದ್ರೌಪತಮ್ಮ ದೇವಿ ಕರಗದ ಸಂಭ್ರಮ.

24ಕೆಡಿಬಿಪಿ4-

ಆದಿಶಕ್ತ್ಯಾತ್ಮಕೆ ದ್ರೌಪತಮ್ಮ ದೇವಿಗೆ ವಿಶೇಷ ಅಲಂಕಾರ.