23ರಿಂದ ರಂಗಸಂಪದವರಿಂದ ಕಾರಂತ ನಾಟಕೋತ್ಸವ

| Published : Dec 21 2023, 01:16 AM IST

23ರಿಂದ ರಂಗಸಂಪದವರಿಂದ ಕಾರಂತ ನಾಟಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರಂಗಸಂಪದ ತಂಡದಿಂದ ನಗರದಲ್ಲಿ ಎರಡು ದಿನಗಳ ಕಾಲ ಕಾರಂತ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಂಗಸಂಪದದ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರಂತ ನಾಟಕೋತ್ಸವ 2ನೇ ದಿನವಾದ ಡಿ.24ರಂದು ಸಂಜೆ 6.30ಕ್ಕೆ ರಾಜಕೀಯ ವಿಡಂಬನೆಯ ನಾಟಕ ಮರಣ ಮೃದಂಗ ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಂಗಸಂಪದ ತಂಡದಿಂದ ನಗರದಲ್ಲಿ ಎರಡು ದಿನಗಳ ಕಾಲ ಕಾರಂತ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಂಗಸಂಪದದ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಂತ ನಾಟಕೋತ್ಸವನ್ನು ಹಮ್ಮಿಕೊಂಡಿದ್ದು ಲೇಖಕ ರಾಜೇಂದ್ರ ಕಾರಂತ ರಚನೆಯ 2 ನಾಟಕಗಳಿದ್ದು ಇವುಗಳಿಗೆ ಡಾ.ಅರವಿಂದ ಕುಲಕರ್ಣಿಯವರ ನಿರ್ದೇಶನವಿದೆ. ನಗರದ ಕನ್ನಡ ಭವನದಲ್ಲಿ ಡಿ.23 ಮತ್ತು ಡಿ.24ರಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

ಡಿ.23 ರಂದು ಸಂಜೆ 6.30ಕ್ಕೆ ನಾಟಕೋತ್ಸವದ ಉದ್ಘಾಟನೆಯನ್ನು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ನೆರವೇರಿಸಲಿದ್ದಾರೆ. ನಂತರ ಮುದ್ದಣ್ಣನ ಪ್ರಮೋಶನ್ ಪ್ರಸಂಗ ನಾಟಕವು ಪ್ರದರ್ಶನಗೊಳ್ಳಲಿದೆ. ಇದೊಂದು ಸಂಪೂರ್ಣ ಹಾಸ್ಯಪ್ರದಾನ ನಾಟಕವಾಗಿದ್ದು, ಸಮಾಜಕ್ಕೆ ಸಂದೇಶವನ್ನು ನೀಡುತ್ತದೆ. ಕುಟುಂಬದ ಎಲ್ಲ ಸದಸ್ಯರೂ ಸೇರಿ ನೋಡಿ ಆನಂದಿಸಬಹುದಾಗಿದೆ ಎಂದು ತಿಳಿಸಿದರು.

ಕಾರಂತ ನಾಟಕೋತ್ಸವ 2ನೇ ದಿನವಾದ ಡಿ.24ರಂದು ಸಂಜೆ 6.30ಕ್ಕೆ ರಾಜಕೀಯ ವಿಡಂಬನೆಯ ನಾಟಕ ಮರಣ ಮೃದಂಗ ಪ್ರದರ್ಶನಗೊಳ್ಳಲಿದೆ. ಕುರ್ಚಿಗಾಗಿ ರಾಜಕಾರಣಿ ಏನನ್ನಾದರೂ ಮಾಡಲು ಹಿಂಜರಿಯುವುದಿಲ್ಲ ಎಂಬುವುದನ್ನು ನಾಟಕ ತಿಳಿಸಲಿದೆ. ಪ್ರತಿಯೊಂದು ಕ್ಷಣಗಳನ್ನು ತಮ್ಮ ರಾಜಕೀಯಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆಂಬುವುದನ್ನು ನಾಟಕ ಎಳೆ ಎಳೆಯಾಗಿ ಬಿಚ್ಚಿಡತ್ತದೆ ಎಂದು ತಿಳಿಸಿದರು.

ಕನ್ನಡ ಭವನ ಕಾರ್ಯದರ್ಶಿ, ಹಿರಿಯ ಸಾಹಿತಿ ಯ.ರು.ಪಾಟೀಲ ಮಾತನಾಡಿ, ಬೆಳಗಾವಿ ಉತ್ತರ ಭಾಗದಲ್ಲಿ ನಾಟಕ ಪ್ರದರ್ಶನ ಕಡಿಮೆ. ಆ ಕೊರತೆಯನ್ನು ರಂಗಸಂಪದ ಎರಡು ನಾಟಕಗಳ ಕಾರಂತ ನಾಟಕೋತ್ಸವ ಹಮ್ಮಿಕೊಳ್ಳುವುದರ ಮೂಲಕ ತುಂಬಿಕೊಡುತ್ತಿದೆ. ರಂಗಾಸಕ್ತರಾದ ತಾವೆಲ್ಲ ಬಂದು ನಾಟಕಗಳನ್ನು ಪ್ರೋತ್ಸಾಹಿಸಬೇಕು ಎಂದು ವಿನಂತಿಸಿಕೊಂಡರು.

ಗೋಷ್ಠಿಯಲ್ಲಿ ರಾಮಚಂದ್ರ ಕಟ್ಟಿ, ಗುರುನಾಥ ಕುಲಕರ್ಣಿ, ಚಿದಾನಂದ ವಾಳಕೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.