: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ಮಕ್ಕಳ ಬೇಸಿಗೆ ಶಿಬಿರದ ಪರಿಕಲ್ಪನೆಯು ಇತರ ಶಿಬಿರಗಳಿಗಿಂತ ಭಿನ್ನವಾಗಿದ್ದು, ತುಳು ಹಾಗೂ ತುಳುನಾಡಿನ ಆಸ್ಮಿತೆಯ ಈ ಶಿಬಿರವು ಮಕ್ಕಳಿಗೆ ವಿಶಿಷ್ಟ ಅನುಭವ ನೀಡಲಿದೆ ಎಂದು ಚಿತ್ರನಟ ಹಾಗೂ ರಂಗ ಕಲಾವಿದ ಮೈಮ್ ರಾಮದಾಸ್ ಹೇಳಿದ್ದಾರೆ.

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ಮಕ್ಕಳ ಬೇಸಿಗೆ ಶಿಬಿರದ ಪರಿಕಲ್ಪನೆಯು ಇತರ ಶಿಬಿರಗಳಿಗಿಂತ ಭಿನ್ನವಾಗಿದ್ದು, ತುಳು ಹಾಗೂ ತುಳುನಾಡಿನ ಆಸ್ಮಿತೆಯ ಈ ಶಿಬಿರವು ಮಕ್ಕಳಿಗೆ ವಿಶಿಷ್ಟ ಅನುಭವ ನೀಡಲಿದೆ ಎಂದು ಚಿತ್ರನಟ ಹಾಗೂ ರಂಗ ಕಲಾವಿದ ಮೈಮ್ ರಾಮದಾಸ್ ಹೇಳಿದ್ದಾರೆ.

ನಗರದ ತುಳು ಭವನದಲ್ಲಿ ಸೋಮವಾರ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಒಂದು ವಾರದ ‘ತೆಲಿಕೆ- ನಲಿಕೆ’ ಮಕ್ಕಳ ಬೇಸಿಗೆ ಶಿಬಿರವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಬೇಸಿಗೆ ಶಿಬಿರವು ಆನಂದಮಯ ಹಾಗೂ ಉಲ್ಲಾಸದಾಯಕವಾಗಿರಬೇಕು. ಅದು ಮತ್ತೊಂದು ತರಗತಿ ಕೊಠಡಿಯಾಗಬಾರದು ಎಂದು ಮೈಮ್ ರಾಮದಾಸ್ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳುನಾಡಿನ ಸೊಗಡಿನ ಕಲೆ, ಕಥೆ, ಆಟ ಕೂಟಗಳನ್ನು ಪರಿಚಯಿಸುವ ಈ ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ಯುವ ಕಲಾವಿದರು, ತರಬೇತುದಾರರು, ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳಾಗಿ ಭಾವಗಹಿಸಿ ತುಳು ಮಣ್ಣಿನ ಕಂಪನ್ನು ಮಕ್ಕಳ ನಡುವೆ ಪಸರಿಸಲಿದ್ದಾರೆ ಎಂದು ಹೇಳಿದರು.

ಶಿಬಿರದಲ್ಲಿ 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಶಿಬಿರದ ಸಹ ನಿರ್ದೇಶಕ, ರಂಗ ಕಲಾವಿದ ವಿನೋದ್ ಶೆಟ್ಟಿ, ಕೊರಲ್ ಕಲಾ ತಂಡದ ಕಲಾವಿದ ರಮೇಶ್ ಮಂಚಕಲ್ ಇದ್ದರು. ಅಕಾಡೆಮಿಯ ಸದಸ್ಯೆ ಸಂಚಾಲಕಿ ಅಕ್ಷಯ ಆರ್. ಶೆಟ್ಟಿ ನಿರೂಪಿಸಿ, ವಂದಿಸಿದರು.

------------

ಫೋಟೊ

13ತುಳು