ಸಾರಾಂಶ
ಪರಿಷತ್‌ನಿಂದ ವರ್ಷಕ್ಕೊಮ್ಮೆ ನಡೆಯುವ ಸಮ್ಮೇಳನ ಕನ್ನಡಿಗರ ಅಸ್ಮಿತೆಯನ್ನು ಬಿಂಬಿಸುತ್ತವೆ. ಹಾಗಾಗಿ ಸಿದ್ದಾಪುರ ಗ್ರಾಮದ ಕನ್ನಡ ಮನಸ್ಸುಗಳು ಕನ್ನಡ ತಾಯಿ ಭುವನೇಶ್ವರಿಯ ತೇರು ಎಳೆಯುವ ಸದಾವಕಾಶ ಪಡೆದಿದ್ದು, ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಡಬೇಕು.
ಕಾರಟಗಿ:
ಕನ್ನಡ ಸಾಹಿತ್ಯ ಪರಿಷತ್ ಮಾ.೨೨, ೨೩ರಂದು ತಾಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಆಯೋಜಿಸಿದ್ದು ಹಬ್ಬದ ರೀತಿ ಆಚರಿಸಲು ಗ್ರಾಮಸ್ಥರು ಉತ್ಸುಕರಾಗಿದ್ದಾರೆಂದು ಜಿಪಂ ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ ಹೇಳಿದರು.ತಾಲೂಕಿನ ಸಿದ್ದಾಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ ಆವರಣದಲ್ಲಿ ಸಮ್ಮೇಳನದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಪ್ರಥಮ ಬಾರಿಗೆ ಸಾಹಿತ್ಯ ಸಮ್ಮೇಳನ ಗ್ರಾಮದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಈ ಮುಂಚಿನ ಪೂರ್ವಭಾವಿ ಸಭೆಯಲ್ಲಿ ಗ್ರಾಮಸ್ಥರು, ಯುವಕರು, ಸಂಘ-ಸಂಸ್ಥೆ ಪ್ರತಿನಿಧಿಗಳು, ವರ್ತಕರು, ಕನ್ನಡ, ರೈತ, ಕಾರ್ಮಿಕ ಪರ ಸಂಘಟನೆಗಳ ಪದಾಧಿಕಾರಿಗಳು ಸೇರಿ ಸಮ್ಮೇಳನವನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸಿ, ಜಿಲ್ಲೆಗೆ ಮಾದರಿ ಕಾರ್ಯಕ್ರಮವಾಗಿ ರೂಪಿಸಲು ಸರ್ವಾನುಮತದಿಂದ ನಿರ್ಧರಿಸಿದ್ದಾಗಿ ತಿಳಿಸಿದರು.ಕಸಾಪ ತಾಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ ಹಾಗೂ ಘಟಕದ ಮಾಜಿ ಅಧ್ಯಕ್ಷ ಬಸವರಾಜ ರ‍್ಯಾವಳದ ಮಾತನಾಡಿ, ಪರಿಷತ್‌ನಿಂದ ವರ್ಷಕ್ಕೊಮ್ಮೆ ನಡೆಯುವ ಸಮ್ಮೇಳನ ಕನ್ನಡಿಗರ ಅಸ್ಮಿತೆಯನ್ನು ಬಿಂಬಿಸುತ್ತವೆ. ಹಾಗಾಗಿ ಸಿದ್ದಾಪುರ ಗ್ರಾಮದ ಕನ್ನಡ ಮನಸ್ಸುಗಳು ಕನ್ನಡ ತಾಯಿ ಭುವನೇಶ್ವರಿಯ ತೇರು ಎಳೆಯುವ ಸದಾವಕಾಶ ಪಡೆದಿದ್ದು, ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಡಬೇಕು. ಈಗಾಗಲೇ ಕಾರಟಗಿ ತಾಲೂಕು ಕೇಂದ್ರವಾದ ನಂತರ ಎರಡು ಸಮ್ಮೇಳನಗಳು ನಡೆದಿದ್ದು, ತಾಲೂಕಿನ ಮತ್ತೊಂದು ದೊಡ್ಡ ಹೋಬಳಿ ಕೇಂದ್ರವಾದ ಸಿದ್ದಾಪುರದಲ್ಲಿ ಪ್ರಪ್ರಥಮ ಬಾರಿಗೆ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗುವುದು. ಇನ್ನುಳಿದಂತೆ ಸಮಿತಿ, ಉಪ ಸಮಿತಿ ರಚಿಸಿ ಸಮ್ಮೇಳನದ ಅದ್ಧೂರಿ ಹಾಗೂ ಅರ್ಥಪೂರ್ಣ ಆಚರಣೆಗೆ ಶ್ರಮಿಸಲಾಗುವುದು ಎಂದರು.
ಈ ವೇಳೆ ವಾಲ್ಕೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಡಾ. ಕೆ.ಎನ್. ಪಾಟೀಲ್, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಬಾವಿ, ಶಿವಕುಮಾರಸ್ವಾಮಿ ಹಿರೇಮಠ, ಜನಗಂಡೆಪ್ಪ ಪೂಜಾರಿ, ಟಿ. ಭೀರಪ್ಪ, ಅಬ್ದುಲ್‌ರೌಫ್, ಮಲ್ಲಿಕಾರ್ಜುನ ಹೊಸಮನಿ, ಮಹಿಬೂಬ್ ಎಂಡಿಎಸ್, ಆದೆಪ್ಪ ಬಸರಿಕಟ್ಟಿ, ಮಾರೆಪ್ಪ ಮೋತಿ, ನಾಗಲಾಂಬಿಕಾ ಮಾಲಿಪಾಟೀಲ್, ಲೋಕೇಶ ನಾಯ್ಕ, ಸೋಮು ಪಾಟೀಲ್, ಗ್ರಾಪಂ ಸದಸ್ಯರಾದ ಮಂಜುನಾಥ್ ಮಾಲಿಪಾಟೀಲ್, ಪ್ರಿಯಾಂಕ ಪವಾರ, ಶರಣಪ್ಪ ವಗ್ಗರ ಸೇರಿದಂತೆ ಪರಿಷತ್ತಿನ ಚನ್ನಬಸಪ್ಪ ವಕ್ಕಳದ, ಸಿದ್ದಾಪುರ ಹೋಬಳಿ ಘಟಕದ ಅಧ್ಯಕ್ಷ ಮಾರೇಶ ವಿಭೂತಿ, ಕಾರ್ಯದರ್ಶಿಗಳಾದ ಚಂದ್ರಶೇಖರ ಗಣವಾರಿ, ಮಂಜುನಾಥ ಚಿಕೇನಕೊಪ್ಪ ಸೇರಿ ಇನ್ನಿತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))