ಗೋವಾದಲ್ಲಿ ಕರಾಟೆ ಚಾಂಪಿಯನ್‌ಶಿಪ್: ಕೊಳ್ಳೇಗಾಲದ ತಂಡಕ್ಕೆ 29 ಪದಕ

| Published : Nov 14 2024, 12:50 AM IST

ಗೋವಾದಲ್ಲಿ ಕರಾಟೆ ಚಾಂಪಿಯನ್‌ಶಿಪ್: ಕೊಳ್ಳೇಗಾಲದ ತಂಡಕ್ಕೆ 29 ಪದಕ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಗೋವಾದಲ್ಲಿ ನಡೆದ ರಾಜ್ಯಮಟ್ಟದ ವಿಶ್ವಕಪ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಪಾಲ್ಗೊಂಡ ಕೊಳ್ಳೇಗಾಲದ ಶೋಟೊಕಾನ್ ಶಾಲೆಯ 25ಕ್ಕೂ ಅಧಿಕ ವಿದ್ಯಾರ್ಥಿಗಳು 3 ಚಿನ್ನ, 8 ಬೆಳ್ಳಿ ಪದಕ ಹಾಗೂ 18 ಕಂಚು ಗೆದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಇತ್ತೀಚೆಗೆ ಗೋವಾದಲ್ಲಿ ನಡೆದ ರಾಜ್ಯಮಟ್ಟದ ವಿಶ್ವಕಪ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಪಾಲ್ಗೊಂಡ ಕೊಳ್ಳೇಗಾಲದ ಶೋಟೊಕಾನ್ ಶಾಲೆಯ 25ಕ್ಕೂ ಅಧಿಕ ವಿದ್ಯಾರ್ಥಿಗಳು 3 ಚಿನ್ನ, 8 ಬೆಳ್ಳಿ ಪದಕ ಹಾಗೂ 18 ಕಂಚು, ಸೇರಿದಂತೆ 29 ಪದಕಗಳನ್ನುಗಳಿಸಿ ಸಾಧನೆಗೈದಿದ್ದಾರೆ.

ಕರಾಟೆ ಶೋಟೊಕಾನ್ ಶಾಲೆ ವಿದ್ಯಾರ್ಥಿಗಳಾದ ಕವನಗೆ 2 ಬೆಳ್ಳಿ, ಜೀವನ್ ನಾಯಕಗೆ 1ಕಂಚು, ಅಭಯ್ ಜಯರಾಜ್‌ಗೆ 1 ಬೆಳ್ಳಿ, ಸ್ಕಂದ 1ಚಿನ್ನ, ವಿಸ್ಮಿತಾ ಬಿ.ಆರ್ 2 ಕಂಚಿನ ಪದಕ ಗಳಿಸಿದ್ದಾರೆ. ಉಳಿದಂತೆ ಸುಶ್ಮಿತಾ 1 ಕಂಚು, ಹಿತೈಷಿ 1ಕಂಚು, ಚಿರಾಯುಷ್ 2 ಕಂಚು, ಶುಭಿತ್ 1 ಚಿನ್ನ, ಮೋಹನ್ 1ಬೆಳ್ಳಿ, ಅಮರ್1ಕಂಚು, ಪರೀಕ್ಷಿತ್ 1ಬೆಳ್ಳಿ, ವರುಣ್ ಶೆಟ್ಟಿ1 ಕಂಚು, ಸಿದ್ದರಾಜು 2 ಕಂಚು, ಸಚಿನ್ ತಲಾ1 ಬೆಳ್ಳಿ 1 ಕಂಚಿನ ಪದಕ ಗಳಿಸಿದ್ದಾರೆ. ವೈಷ್ಣವಿ ಬಂಗಾರು 1 ಬೆಳ್ಳಿ, ಸೂರಜ್ 1 ಕಂಚು, ಪ್ರಗದೀಶ್1 ಕಂಚು, ಪಾವನಿ1 ಕಂಚು, ಪರಿಣಿತಾ 2 ಕಂಚು, ಸಾಯಿವೈಷ್ಣವಿ 1 ಚಿನ್ನ, ಮಹೇಶ್ ಬಾಬು 1 ಕಂಚು, ಪ್ರಣವ್ ಜಯಂತ್ 2 ಕಂಚು, ಅಕ್ಷಯ 1 ಬೆಳ್ಳಿ, ರೋಶಿನಿ1 ಕಂಚಿನ ಪದಕ ಪಡೆದು ಸಾಧನೆಗೈದಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಶೋಟೊಕಾನ್ ಸ್ಕೂಲ್ ಆಫ್ ಕರಾಟೆ ಇಂಡಿಯಾದ ಕಾರ್ಯದರ್ಶಿ ಕ್ಯೋಶಿ ಯೋಗೇಶ್, ಚಾಮರಾಜನಗರದ ತರಬೇತುದಾರ ಮುರಳಿ, ಕೊಳ್ಳೇಗಾಲ ಪಟ್ಟಣದ ಕರಾಟೆ ತರಬೇತುದಾರ ಸೆನ್ಸೈ ಸೌಜನ್ಯ ಪ್ರಭಾಕರ್, ಸೆನ್ಸೈ ಚೆಲುವರಾಜ್ ಮಕ್ಕಳ ಸಾಧನೆಗೆ ಪ್ರಶಂಸಿದ್ದಾರೆ.