ಹೊಸಕೋಟೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮಾಂತರ ಸ್ಪೋರ್ಟ್ಸ್ ಶಾಲಾ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಸೂಲಿಬೆಲೆಯಲ್ಲಿ ಆಯೋಜಿಸಿದ್ದ 2026-2027ರ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಂದಗುಡಿ ಕೆಪಿಎಸ್ ಶಾಲೆಯ 7ನೇ ತರಗತಿಯ ಕವಿತಾ ಪ್ರಥಮ, ಲಿಖಿತ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಹೊಸಕೋಟೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮಾಂತರ ಸ್ಪೋರ್ಟ್ಸ್ ಶಾಲಾ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಸೂಲಿಬೆಲೆಯಲ್ಲಿ ಆಯೋಜಿಸಿದ್ದ 2026-2027ರ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಂದಗುಡಿ ಕೆಪಿಎಸ್ ಶಾಲೆಯ 7ನೇ ತರಗತಿಯ ಕವಿತಾ ಪ್ರಥಮ, ಲಿಖಿತ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಕೆಪಿಎಸ್ ಶಾಲೆಯ ನಿಕಟಪೂರ್ವ ಅಧ್ಯಕ್ಷ ಎನ್.ಗಂಗಾಧರ್ ಅಭಿನಂದಿಸಿ ಮಾತನಾಡಿ, ಗ್ರಾಮೀಣ ಹಾಗೂ ನಗರಾಭಿವೃದ್ಧಿ ಕ್ರೀಡಾಕೂಟಗಳಲ್ಲಿ ಬಾಲಕಿಯರ ತಂಡಗಳು ಬಾಲಕರಿಗಿಂತ ಹೆಚ್ಚಿನ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಗೆಲುವು ಸಾಧಿಸುತ್ತಿವೆ. ಅಥ್ಲೆಟಿಕ್ಸ್, ಖೋ-ಖೋ, ಕಬಡ್ಡಿ, ಕರಾಟೆ ಯೋಗಾಸನಗಳಲ್ಲಿ ಬಾಲಕಿಯರ ಭಾಗವಹಿಸುವಿಕೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.ಮುಖ್ಯ ಶಿಕ್ಷಕ ದಯಾನಂದ್ ಕಂಬಾಳೆ ಮಾತನಾಡಿ, ಪ್ರತಿ ಕ್ರೀಡೆಗೂ ತನ್ನದೇ ಆದ ಮಹತ್ವವಿದೆ. ಯುವ ಪೀಳಿಗೆ ಕ್ರೀಡೆಯಲ್ಲಿ ಸಕ್ರಿಯರಾಗುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ವಿದ್ಯಾರ್ಥಿನಿಯರು ಕಲಿಕೆ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮರೆಯಾಗುತ್ತಿರುವ ಗ್ರಾಮೀಣ ಭಾಗದಲ್ಲಿ ಕ್ರೀಡೆಗಳನ್ನು ಉಳಿಸುವ ಜತೆಗೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕೆಂದು ಸಲಹೆ ನೀಡಿದರು.
ಕೆಪಿಎಸ್ ಶಾಲೆಯ ಎಸ್‌ಡಿಎಂಸಿ ಸದಸ್ಯ ಜಿ.ಮೂರ್ತಿ, ನಿಕಟಪೂರ್ವ ಮುಖ್ಯಶಿಕ್ಷಕಿ ರಾಧಾ, ಕರಾಟೆ ಮಾಸ್ಟರ್ ಮಹಮ್ಮದ್ ನೂರುಲ್ಲಾ ಇತರರು ಅಭಿನಂದಿಸಿದರು.ಫೋಟೋ: 11 ಹೆಚ್‌ಎಸ್‌ಕೆ 2
ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಹೊಸಕೋಟೆ ತಾಲೂಕಿನ ನಂದಗುಡಿ ಕೆಪಿಎಸ್ ಶಾಲೆಯ ಕವಿತಾ ಮತ್ತು ಲಿಖಿತಾರನ್ನು ಶಾಲೆಯ ನಿಕಟಪೂರ್ವ ಅಧ್ಯಕ್ಷ ಎನ್.ಗಂಗಾಧರ್, ಮುಖ್ಯ ಶಿಕ್ಷಕ ದಯಾನಂದ್ ಕಂಬಾಳೆ, ಎಸ್‌ಡಿಎಂಸಿ ಸದಸ್ಯ ಜಿ.ಮೂರ್ತಿ ಶಾಲಾ ಆಡಳಿತ ಮಂಡಳಿ ಸಿಬ್ಬಂದಿ ಅಭಿನಂದಿಸಿದರು.