ಆತ್ಮರಕ್ಷಣೆಗೆ ಕರಾಟೆ ಅತ್ಯವಶ್ಯಕ: ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್

| Published : Feb 19 2025, 12:46 AM IST

ಆತ್ಮರಕ್ಷಣೆಗೆ ಕರಾಟೆ ಅತ್ಯವಶ್ಯಕ: ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕರಾಟೆ ಕಲಿಕೆಯಲ್ಲಿ ಆಸಕ್ತಿ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ. ಆತ್ಮರಕ್ಷಣೆಗೆ ಕರಾಟೆ ಅಗತ್ಯ.

ಪಾಂಡವಪುರ: ಪ್ರತಿಯೊಬ್ಬ ಮನುಷ್ಯನ ಆತ್ಮರಕ್ಷಣೆಗೆ ಕರಾಟೆ ಅತ್ಯವಶ್ಯಕ ಎಂದು ಮನ್ಮುಲ್ ನೂತನ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.

ಪಟ್ಟಣದ ವಿಜಯ ಕಾಲೇಜಿನ ಡಾ.ಕೃಷ್ಣಕುಮಾರ್ ಸಭಾಂಗಣದಲ್ಲಿ ಮಾಸ್ಟರ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 10ನೇ ವರ್ಷದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿ, ಮಹಿಳೆಯರಿಗೆ ಕರಾಟೆಯಿಂದ ಆತ್ಮ ಗೌರವ ಹೆಚ್ಚಲಿದೆ. ಹೀಗಾಗಿ ಮಹಿಳೆಯರು ಕರಾಟೆ ಕಲಿಕೆಯಲ್ಲಿ ತೊಡಗಬೇಕು ಎಂದರು. ಪ್ರಗತಿಪರ ಕೃಷಿಕ ಸಂಗಾಪುರ ನವೀನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕರಾಟೆ ಕಲಿಕೆಯಲ್ಲಿ ಆಸಕ್ತಿ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ. ಆತ್ಮರಕ್ಷಣೆಗೆ ಕರಾಟೆ ಅಗತ್ಯ ಎಂದರು. ಕಾರ್ಯಕ್ರಮವನ್ನು ಬೆಂಗಳೂರು ಆದರ್ಶ ಲಯನ್ಸ್ ಅಧ್ಯಕ್ಷೆ ಲಯನ್ ಮಮತಾ ಸುಂದರರಾಜು ಉದ್ಘಾಟಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 250ಕ್ಕೂ ಹೆಚ್ಚು ಕರಾಟೆ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಸೆಣಸಾಟ ನಡೆಸಿ ವಿಜೇತರಾದರು. ಮಾರ್ಷಲ್ ಆರ್ಟ್ಸ್ ನ ಸಂಸ್ಥಾಪಕ ಕಾರ್ಯದರ್ಶಿ ಎಸ್.ಹೇಮಂತ್, ಲಯನ್ ಜಿಲ್ಲಾ ರಾಜ್ಯಪಾಲ ಎನ್.ಸುಬ್ರಹ್ಮಣ್ಯ, ತೆಲಂಗಾಣದ ಕೆಎಫ್ಎಸ್ಐ ಅಧ್ಯಕ್ಷ ಲಯನ್ ಗಣೇಶ್ ಗಡಿಯಾರಂ, ಪ್ರಾಂತೀಯ ಅಧ್ಯಕ್ಷ ಲಯನ್ ವಿ.ಸಿ.ರವಿಕುಮಾರ್, ಲಯನ್ ನಾರಾಯಣಸ್ವಾಮಿ, ಜಿಲ್ಲಾ ರಾಯಭಾರಿ ಲಯನ್ ಹರ್ಷ, ಲಯನ್ ಜಯಕುಮಾರ್, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಅಂಜಲಿ ಹೇಮಂತ್ ಇತರರು ಇದ್ದರು.