ಪುಟ...2ಕ್ಕೆಕರಾಟೆ ಪಂದ್ಯಾವಳಿ: ಪಟ್ಟಣದ ಕರಾಟೆ ಪಟುಗಳ ಸಾಧನೆ

| Published : Jan 15 2025, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಬೆಂಗಳೂರಿನ ಯಲಹಂಕದ ನಾಗಾರ್ಜುನ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 15ನೇ ರಾಷ್ಟ್ರ ಮಟ್ಟದ ರಿಪಬ್ಲಿಕ್ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಕರಾಟೆ ಪಟುಗಳು ಭಾಗವಹಿಸಿ ಪದಕಗಳನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಫೈಟಿಂಗ್ ವಿಭಾಗದಲ್ಲಿ ಪದಕ ಪಡೆದ ವಿದ್ಯಾರ್ಥಿಗಳಲ್ಲಿ ಪ್ರಣವ್ ಚಿಕ್ಕೊಂಡ್ (ಪ್ರಥಮ ಸ್ಥಾನ), ಆರುಷಿ ಮಮದಾಪುರ (ದ್ವಿತೀಯ ಸ್ಥಾನ), ಲಿಂಗನಗೌಡ ತಿಪ್ಪನಗೌಡರ (ದ್ವಿತೀಯ ಸ್ಥಾನ ), ಅರುಣ ದೊಡಮನಿ (ದ್ವಿತೀಯ ಸ್ಥಾನ),

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಬೆಂಗಳೂರಿನ ಯಲಹಂಕದ ನಾಗಾರ್ಜುನ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 15ನೇ ರಾಷ್ಟ್ರ ಮಟ್ಟದ ರಿಪಬ್ಲಿಕ್ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಕರಾಟೆ ಪಟುಗಳು ಭಾಗವಹಿಸಿ ಪದಕಗಳನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಫೈಟಿಂಗ್ ವಿಭಾಗದಲ್ಲಿ ಪದಕ ಪಡೆದ ವಿದ್ಯಾರ್ಥಿಗಳಲ್ಲಿ ಪ್ರಣವ್ ಚಿಕ್ಕೊಂಡ್ (ಪ್ರಥಮ ಸ್ಥಾನ), ಆರುಷಿ ಮಮದಾಪುರ (ದ್ವಿತೀಯ ಸ್ಥಾನ), ಲಿಂಗನಗೌಡ ತಿಪ್ಪನಗೌಡರ (ದ್ವಿತೀಯ ಸ್ಥಾನ ), ಅರುಣ ದೊಡಮನಿ (ದ್ವಿತೀಯ ಸ್ಥಾನ), ಓಂಕಾರ ಹಂಚಿನಾಳ(ತೃತೀಯ ಸ್ಥಾನ), ಸಾಕ್ಷಿ ಮಲಘಾಣ(ತೃತೀಯ ಸ್ಥಾನ), ಕಾರ್ತಿಕ್ ಸೊನ್ನದ (ತೃತೀಯ ಸ್ಥಾನ) ಪಡೆದು ಜಿಲ್ಲೆ ಮತ್ತು ಬಸವನಬಾಗೇವಾಡಿ ಕೀರ್ತಿ ಹೆಚ್ಚಿಸಿದ್ದಾರೆ. ಇವರಿಗೆ ತರಬೇತುದಾರ ಜಗದೀಶ ತಳವಾರ ತರಬೇತಿ ನೀಡಿದ್ದಾರೆ.