ಸಾರಾಂಶ
ಹೂವಿನಹಿಪ್ಪರಗಿಯಲ್ಲಿ ಕರವೇ ರಾಜ್ಯಾಧ್ಯಕ್ಷ ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ಶುಕ್ರವಾರ ಕೆಲ ಹೊತ್ತು ಬಿಜ್ಜಳ ರಾಜ್ಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.
ಕನ್ಬಡಪ್ರಭ ವಾರ್ತೆ ಬಸವನಬಾಗೇವಾಡಿ
ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ ಎಂದು ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಹೇಳಿದರು.ತಾಲೂಕಿನ ಹೂವಿನಹಿಪ್ಪರಗಿಯಲ್ಲಿ ಕರವೇ ರಾಜ್ಯಾಧ್ಯಕ್ಷ ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ಶುಕ್ರವಾರ ಕೆಲ ಹೊತ್ತು ಬಿಜ್ಜಳ ರಾಜ್ಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ನಂತರ ಗ್ರಾಮ ಲೆಕ್ಕಾಧಿಕಾರಿ ಬಿ.ಬಿ.ಕಮತ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕನ್ನಡ ಪರ ಇದೆಯಾ ಅಥವಾ ಅನ್ಯ ಭಾಷಿಕರ ಪರ ಇದೆಯಾ ಎಂಬುದು ತಿಳಿಯುತ್ತಿಲ್ಲ. ಸರ್ಕಾರ ಕೂಡಲೇ ಬಂಧನದಲ್ಲಿರುವ ಪದಾಧಿಕಾರಿಗಳನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ಕಲ್ಲು ಸೊನ್ನದ, ಸಿದ್ದು ಮೇಟಿ, ಗುರಲಿಂಗ ಬಸರಕೋಡ, ಎಸ್.ಎಸ್.ಹಾದಿಮನಿ, ಗುರುರಾಜ ವಂದಾಲ, ಈರಯ್ಯಸ್ವಾಮಿ ಹಿರೇಮಠ, ವಿಜಯರೆಡ್ಡಿ ನಾಡಗೌಡ, ಮಲ್ಲು ಹೂಗಾರ, ಪ್ರದೀಪ ಗೊಳಸಂಗಿ, ರಾಜಶೇಖರ ಬಿಂಜಲಬಾವಿ, ಸಿದ್ದಾರೂಢ ಗುಂಡಾನವರ, ಅಭಿಷೇಕ ಚೌದ್ರಿ, ಸುನೀಲ ಮೇಟಿ, ಶೇಖು ತಮದಡ್ಡಿ, ಶ್ರೀಶೈಲ ಗೊಳಸಂಗಿ ಇದ್ದರು.