ಕಾರ್ಗಿಲ್‌ ವಿಜಯೋತ್ಸವ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ

| Published : Jul 27 2024, 12:47 AM IST

ಸಾರಾಂಶ

Kargil Victory Art Competition

ಸಿರಿಗೆರೆ: ಕಾರ್ಗಿಲ್‌ ವಿಜಯೋತ್ಸವದ ದಿನಾಚರಣೆ ಅಂಗವಾಗಿ ಸಿರಿಗೆರೆಯ ಎಂ.ಬಿ.ಆರ್.‌ ಕಾಲೇಜಿನ ಎನ್.ಸಿ.ಸಿ. ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಉಪನ್ಯಾಸಕ ಈ. ದೇವರಾಜ ಬನವಾಸಿ ಮಾತನಾಡಿ, ಸಿನಿಮಾ ಕ್ಷೇತ್ರದೊಡನೆ ಒಡನಾಡುವ ವೇಳೆ ಕಾರ್ಗಿಲ್‌ ಸೆಕ್ಟರ್‌ನಲ್ಲಿ ತೀರಾ ಹತ್ತಿರದಿಂದ ನಮ್ಮ ಸೈನಿಕರ ಸಾಹಸವನ್ನು ನೋಡಿದ್ದೇವೆ. ಸೈನಿಕರು ದೇಶದ ರಕ್ಷಣೆಗಾಗಿ ಕಂಕಣಬದ್ಧರಾಗಿ ಕೆಲಸ ಮಾಡುವ ರೀತಿ ಎಲ್ಲರಿಗೂ ಮನನವಾಗಬೇಕು. ಜೊತೆಗೆ ನಮ್ಮ ಯುವಕರು ಸಹ ದೇಶದ ಸೈನ್ಯದಲ್ಲಿ ಪಾಲುಗೊಳ್ಳುವಂತಹ ಸಾಹಸಕ್ಕೆ ಮುಂದಾಗಬೇಕು ಎಂದರು.

ಎನ್‌ಸಿಸಿ ಕಮಾಂಡರ್‌ ರಾಜಶೇಖರಯ್ಯ ದೇಶದಲ್ಲಿ ನಡೆದಿರುವ ಯುದ್ಧಗಳ ವೇಳೆಯಲ್ಲಿ ಭಾರತೀಯ ಸೈನಿಕರು ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಂತಹ ಸಾಹಸವನ್ನು ಮೆರೆದಿದ್ದಾರೆ. ೧೯೯೯ರ ಕಾರ್ಗಿಲ್‌ ಕಾರ್ಯಾಚರಣೆಯಲ್ಲಿ ತರಳಬಾಳು ಮಠದ ಶಿಷ್ಯ ಕುಟುಂಬದ ಮೇಜರ್‌ ರವೀಂದ್ರನಾಥ್‌ ಅವರ ಸಾಹಸವನ್ನು ಯುವಕರಿಗೆ ತಿಳಿ ಹೇಳಿದರು.

ಉಪನ್ಯಾಸಕ ಕಾಶೀನಾಥ್‌ ಭಾಗವಹಿಸಿದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಎನ್‌ಸಿಸಿ ಕೆಡೆಟ್‌ಗಳಿಗೆ ಪ್ರಶಸ್ತಿ ಮತ್ತು ಬಹುಮಾನ ವಿತರಣೆ ಮಾಡಲಾಯಿತು.

------

ಫೋಟೊ: ಎಂಬಿಆರ್‌ ಕಾಲೇಜಿನ ಎನ್‌ಸಿಸಿ ಬೆಟಾಲಿಯನ್‌ ವತಿಯಿಂದ ಕಾರ್ಗಿಲ್‌ ವಿಜಯೋತ್ಸದ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.