ಮೈಸೂರು ಮಾಜಿ ಸೈನಿಕರಿಂದ ಕಾರ್ಗಿಲ್ ವಿಜಯೋತ್ಸವ

| Published : Jul 27 2025, 01:49 AM IST

ಮೈಸೂರು ಮಾಜಿ ಸೈನಿಕರಿಂದ ಕಾರ್ಗಿಲ್ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು: ನಗರದ ಜೆಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 26ನೇ ವರ್ಷದ ಕಾರ್ಗಿಲ್ ವಿಜಯ ದಿನವನ್ನು ಮಾಜಿ ಸೈನಿಕರಿಂದ ಒಂದು ವಿಶಿಷ್ಟ ರೀತಿಯಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಮೈಸೂರು: ನಗರದ ಜೆಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 26ನೇ ವರ್ಷದ ಕಾರ್ಗಿಲ್ ವಿಜಯ ದಿನವನ್ನು ಮಾಜಿ ಸೈನಿಕರಿಂದ ಒಂದು ವಿಶಿಷ್ಟ ರೀತಿಯಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 50 ಕ್ಕಿಂತ ಹೆಚ್ಚು ಸಿಬ್ಬಂದಿ, 30 ಕ್ಕಿಂತಲೂ ಹೆಚ್ಚು ಮಾಜಿ ಸೈನಿಕರು ಮತ್ತು 10ಕ್ಕಿಂತ ಹೆಚ್ಚು ಯುವ ಬ್ರಿಗೇಡ್ ನ ದೇಶಭಕ್ತರು ಭಾಗವಹಿಸಿದರು.

ಮೊದಲಿಗೆ ಕಾಲೇಜಿನ ಎನ್‌ಸಿಸಿ ತಂಡ ಗೌರವಿತವಾಗಿ ಎಲ್ಲಾ ಮಾಜಿ ಸೈನಿಕರಗಳನ್ನು ಬರಮಾಡಿಕೊಂಡರು. ಹುತಾತ್ಮ ಕಾರ್ಗಿಲ್ ಮಾಣಿಕ್ಯರಾದ ಕ್ಯಾಪ್ಟನ್ ವಿಕ್ರಂ ಬತ್ರ, ಲೆಫ್ಟ್ ನೆಟ್ ಮನೋಜ್ ಪಾಂಡೆ ಮತ್ತು ಕ್ಯಾಪ್ಟನ್ ಸೌರಭ ಕಾಲಿಯಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಯುವ ಬ್ರಿಗೇಡ್ ನ ನಿತಿನ್ ಪರದೆಯ ಮೇಲೆ ಕಾರ್ಗಿಲ್ ಚಿತ್ರಣವನ್ನು ಪ್ರದರ್ಶಿಸಿದರು. ಮಾಜಿ ಸೈನಿಕ ವಿ. ಮಹೇಶ್, ಪ್ರಾಂಶುಪಾಲ ಭಕ್ತವತ್ಸಲ ಮಾತನಾಡಿದರು.

ಮಾಜಿ ಸೈನಿಕರಿಂದ ಎಲ್ಲ ವಿದ್ಯಾರ್ಥಿಗಳಿಗೆ ವಿಜಯದ ಸಂಕೇತವಾಗಿ ಖುಷಿಯಿಂದ ಸಿಹಿ ಹಂಚಿ, ಸಂಭ್ರಮಿಸಿದರು.