ಸ್ವರ್ಣಸಂದ್ರದ ವೀರಯೋಧರ ಉದ್ಯಾನದಲ್ಲಿ ಕಾರ್ಗಿಲ್ ವಿಜಯೋತ್ಸವ

| Published : Jul 28 2025, 12:30 AM IST

ಸ್ವರ್ಣಸಂದ್ರದ ವೀರಯೋಧರ ಉದ್ಯಾನದಲ್ಲಿ ಕಾರ್ಗಿಲ್ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ವೀರರನ್ನು ಗೌರವಿಸಲು ದೇಶಭಕ್ತಿ ಮತ್ತು ಸಶಸ್ತ್ರ ಪಡೆಗಳ ಬಗ್ಗೆ ಗೌರವವನ್ನು ಮೂಡಿಸಲು ಪರಿಪೂರ್ಣ ಪದಗಳಿಂದ ನಿಮ್ಮನ್ನು ಸಜ್ಜುಗೊಳಿಸುವುದು ನಮ್ಮ ಗುರಿಯಾಗಿದೆ. ನಮ್ಮ ಕಾರ್ಗಿಲ್ ವೀರರ ತ್ಯಾಗಗಳನ್ನು ಎಂದಿಗೂ ಮರೆಯದಂತೆ ನೆನಪಿನಲ್ಲಿಟ್ಟುಕೊಳ್ಳಬೇಕು. ಮುಂದಿನ ಪೀಳಿಗೆಗೂ ಕಾರ್ಗಿಲ್ ಶೌರ್ಯದ ಇತಿಹಾಸವನ್ನು ಮನವರಿಕೆ ಮಾಡಿಕೊಟ್ಟು ಅವರಲ್ಲಿಯೂ ದೇಶಪ್ರೇಮ ಬೆಳೆಸಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಸ್ವರ್ಣಸಂದ್ರದಲ್ಲಿರುವ ವೀರಯೋಧ ಸುಧೀರ್ ಮತ್ತು ಶರತ್ ರುದ್ರಭೂಮಿ ಉದ್ಯಾನವನದಲ್ಲಿ ಜೈ ಕರ್ನಾಟಕ ಪರಿಷತ್ತು ನಿವೃತ್ತ ಸೈನಿಕರೊಂದಿಗೆ ಕಾರ್ಗಿಲ್ ವಿಜಯೋತ್ಸವ ಆಚರಿಸಿತು.

ವೀರಯೋಧರ ರುದ್ರಭೂಮಿಗೆ ಜೈ ಕರ್ನಾಟಕ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಪುಷ್ಪನಮನ ಸಲ್ಲಿಸಿ ಮಾತನಾಡಿ, ಕಾರ್ಗಿಲ್ ವಿಜಯ್ ದಿವಸ್ ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಮಹತ್ವದ ದಿನ. ಇದು ೧೯೯೯ ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ, ತ್ಯಾಗ ಮತ್ತು ಅಚಲ ದೃಢಸಂಕಲ್ಪವನ್ನು ಸ್ಮರಿಸುವದಿನ. ನಮ್ಮ ರಾಷ್ಟ್ರದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದ ಧೀರ ಸೈನಿಕರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ನಮ್ಮ ವೀರರನ್ನು ಗೌರವಿಸಲು ದೇಶಭಕ್ತಿ ಮತ್ತು ಸಶಸ್ತ್ರ ಪಡೆಗಳ ಬಗ್ಗೆ ಗೌರವವನ್ನು ಮೂಡಿಸಲು ಪರಿಪೂರ್ಣ ಪದಗಳಿಂದ ನಿಮ್ಮನ್ನು ಸಜ್ಜುಗೊಳಿಸುವುದು ನಮ್ಮ ಗುರಿಯಾಗಿದೆ. ನಮ್ಮ ಕಾರ್ಗಿಲ್ ವೀರರ ತ್ಯಾಗಗಳನ್ನು ಎಂದಿಗೂ ಮರೆಯದಂತೆ ನೆನಪಿನಲ್ಲಿಟ್ಟುಕೊಳ್ಳಬೇಕು. ಮುಂದಿನ ಪೀಳಿಗೆಗೂ ಕಾರ್ಗಿಲ್ ಶೌರ್ಯದ ಇತಿಹಾಸವನ್ನು ಮನವರಿಕೆ ಮಾಡಿಕೊಟ್ಟು ಅವರಲ್ಲಿಯೂ ದೇಶಪ್ರೇಮ ಬೆಳೆಸಬೇಕಿದೆ ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಪಿ.ಗಜೇಂದ್ರ, ಶ್ರೀನಿವಾಸ್, ರಾಜಣ್ಣ ಅವರನ್ನು ಜೈ ಕರ್ನಾಟಕ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸೈನಿಕರ ಸಂಘದಿಂದ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಹತ್ತು ವಿದ್ಯಾರ್ಥಿಗಳಿಗೆ ಗೌರವ ಧನವಾಗಿ ತಲಾ ೩೦೦೦ ರು. ಗೌರವಧನ ನೀಡಲಾಯಿತು.

ನಿವೃತ ಸೈನಿಕರ ಸಂಘದ ಅಧ್ಯಕ್ಷ ಮಲ್ಲರಾಜಣ್ಣ, ನಾಗೇಶ್. ಜಿಲ್ಲೆಯ ನಿವೃತ ಸೈನಿಕರು, ಜೈ ಕರ್ನಾಟಕ ಪರಿಷತ್ತಿನ ಪದಾಧಿಕಾರಿಗಳಾದ ತನುಜಾ, ಮಂಜುಳಾ, ಪದ್ಮ, ವರಲಕ್ಷ್ಮೀ, ಬಿ.ಪುಟ್ಟಸ್ವಾಮಿ, ಬಿ.ನಾರಾಯಣಸ್ವಾಮಿ, ವಿನುಕುಮಾರ್, ರಾಜು, ಬಿ.ಡಿ.ಪುಟ್ಟಸಾಮಿ, ಪುಟ್ಟೇಗೌಡ, ಶ್ರೀಹರಿ. ಕೃಷ್ಣ ಇತರರು ಭಾಗವಹಿಸಿದ್ದರು.